ಕರ್ನಾಟಕ

karnataka

ETV Bharat / sitara

ಸ್ವಾಮಿ 15 ಲಕ್ಷ ಮಾತ್ರ ನನ್ನ ಖಾತೆಗೆ ಹಾಕಿದ್ದು: ನಟಿ ರಾಧಿಕಾ ಕುಮಾರಸ್ವಾಮಿ - Radhka kumaraswamy news

ನಟಿ ರಾಧಿಕಾ ಕುಮಾರಸ್ವಾಮಿ
ನಟಿ ರಾಧಿಕಾ ಕುಮಾರಸ್ವಾಮಿ

By

Published : Jan 6, 2021, 2:33 PM IST

Updated : Jan 6, 2021, 3:44 PM IST

14:31 January 06

ಸ್ವಾಮಿ 15 ಲಕ್ಷ ರೂ ಮಾತ್ರ ನನ್ನ ಖಾತೆಗೆ ಹಾಕಿದ್ದು ಎಂದು ನಟಿ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ನಟಿ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ

ಬೆಂಗಳೂರು:ಯುವರಾಜ್ ಜತೆ ಹಣಕಾಸು ಆರೋಪ ವಿಚಾರವಾಗಿ ಬೆಂಗಳೂರಿನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ತಂದೆ ಕಾಲದಿಂದಲೂ ಸ್ವಾಮಿಯ ಪರಿಚಯ: ಸ್ವಾಮಿ ಅವರು ನನ್ನ ಖಾತೆಗೆ 1 ಕೋಟಿಗೂ ಅಧಿಕ ಹಣ ಹಾಕಿದ್ದಾರೆ ಎಂಬ ವಿಚಾರ ಸುಳ್ಳು. ನಮ್ಮ ತಂದೆಯ ಕಾಲದಿಂದಲೂ ನಮಗೆ ಅವರು ನಮಗೆ ಪರಿಚಯ. 17 ವರ್ಷದಿಂದಲೂ ನಮಗೆ ಅವರ ಪರಿಚಯವಿದೆ. ನಮ್ಮ ತಂದೆ ತೀರಿ ಹೋಗುವ ಮುಂಚೆ ಇವರು ನಮ್ಮ ಮನೆಗೆ ಬರುತ್ತಿದ್ದರಂತೆ. ಆದರೆ ಸ್ವಾಮಿ ಇಂತಹ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನುವುದು ನಮಗೆ ಗೊತ್ತಿರಲಿಲ್ಲ ಎಂದು ಹೇಳಿದರು.  

ಸಿನಿಮಾ ವಿಚಾರವಾಗಿ ಹಣ ವರ್ಗಾವಣೆ: ‘ನಾಟ್ಯ ರಾಣಿ ಶಾಂತಲಾ’ ಐತಿಹಾಸಿಕ ಸಿನಿಮಾ ಮಾಡುವ ವಿಚಾರವಾಗಿ ಅವರು ನನ್ನ ಬಳಿ ಮಾತನಾಡಿದ್ದರು. ಆಗ ಅವರು ನನ್ನ ಬಳಿ ನಿಮ್ಮ ಬ್ಯಾನರ್​ನಲ್ಲಿ ಸಿನಿಮಾ ಮಾಡುತ್ತೇನೆ ಎಂದಿದ್ದರು. ನಮ್ಮ ಮತ್ತು ಅವರ ಇಬ್ಬರ ಬ್ಯಾನರ್​ ಸೇರಿ ಒಂದು ಸಿನಿಮಾ ಮಾಡೋಣ ಎಂದಿದ್ದರು. ಆದರೆ ನಾನು ಇಬ್ಬರ ಬ್ಯಾನರ್​ ಸೇರಿ ಬೇಡ ಅಂದಿದ್ದಕ್ಕೆ, ಅವರು ತಮ್ಮ ಬ್ಯಾನರ್​ ಅಡಿ ಸಿನಿಮಾ ಮಾಡೋಣಾ ಎಂದಿದ್ದರು ಎಂದು ಹೇಳಿದರು.  

ಐತಿಹಾಸಿಕ ಸಿನಿಮಾ ವಿಚಾರವಾಗಿ ಮುಂಗಡ ಹಣ ನೀಡಿದ್ದರು. ಅದು ಕೇವಲ ಸಿನಿಮಾ ಅಡ್ವಾನ್ಸ್​ ಮಾತ್ರ. ನನ್ನ ಖಾತೆಗೆ ಅವರ ಖಾತೆಯಿಂದ ಸಿನಿಮಾ ಮುಂಗಡ ಹಣವಾಗಿ 15 ಲಕ್ಷ ರೂಪಾಯಿ ಹಾಕಿದ್ದರು. ಆ ಬಳಿಕ ಬೇರೆ ನಿರ್ಮಾಪಕರಿಂದ 60 ಲಕ್ಷ ರೂಪಾಯಿ ಹಣ ಹಾಕಿಸಿದ್ದಾರೆ. 2020 ಮಾರ್ಚ್​ನಲ್ಲಿ ಹಣ ಹಾಕಿಸಿದ್ದಾರೆ. ಆಗ ನಾನು ಕೇಳಿದ್ದಕ್ಕೆ ಅದು ನನ್ನ ಬಾವ ಎಂದು ಹೇಳಿದ್ದರು. ಸ್ವಾಮಿ ಅಕೌಂಟ್‌ನಿಂದ​ 15 ಲಕ್ಷ ಬಂದಿದ್ದು ಅಷ್ಟೇ. ಒಟ್ಟು 75 ಲಕ್ಷ ರೂಪಾಯಿ ಹಣ ನನಗೆ ಬಂದಿದೆ ಎಂದು ತಿಳಿಸಿದರು.

ಯಾದವ್​ ನಮ್ಮ ಸಂಬಂಧಿಕರಲ್ಲ:ಯಾದವ್ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರಾಧಿಕಾ, ಯಾದವ್​ ಎಂಬವವರು ನಮ್ಮ ಕುಟುಂಬದವರಿಗೆ ಪರಿಚಯ. ಆದರೆ ಅವರಿಗೂ ಇವರಿಗೂ ಏನೆಲ್ಲ ಪರಿಚಯ, ಯಾವ ರೀತಿ ಸಂಬಂಧ ಎಂಬುದು ನನಗೆ ಗೊತ್ತಿಲ್ಲ. ಅದನ್ನು ನೀವು ಅವರ ಬಳಿಯೇ ಕೇಳಿ. ನನಗೆ ಆ ಬಗ್ಗೆ ಯಾವುದೂ ಗೊತ್ತಿಲ್ಲ. ಸುಮಾರು 18-19 ವರ್ಷದಿಂದ ಯಾದವ್​ ಅವರು ನಮಗೆ ಪರಿಚಯ. ಆದರೆ ಯಾದವ್​ ನಮ್ಮ ಸಂಬಂಧಿಕರಲ್ಲ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಯುವರಾಜನ ಬ್ಯಾಂಕ್​ ಖಾತೆಯಿಂದ ಸ್ಯಾಂಡಲ್​ವುಡ್​ ಸ್ವೀಟಿ ಖಾತೆಗೆ 1 ಕೋಟಿ ರೂ. ವರ್ಗಾವಣೆ..!?

ದೊಡ್ಡವರೇ ಅವರ ಬಳಿ ಯಾಮಾರಿದಾಗ ನಮ್ಮಂಥವರು ಯಾವ ಲೆಕ್ಕ: ಇಲ್ಲಿ ಬೇರೆ ಯಾವುದೇ ರೀತಿಯ ವ್ಯವಹಾರಗಳು ನಡೆದಿಲ್ಲ. ನನ್ನ ಅವರ ನಡುವೆ ನಡೆದ ಮಾತುಕತೆ, ಹಣದ ವ್ಯವಹಾರ ಎಲ್ಲವೂ ಕೇವಲ ಸಿನಿಮಾ ವಿಚಾರವಾಗಿ ಮಾತ್ರ. ಅವರು ಯಾವಾಗಲು ದೊಡ್ಡ ದೊಡ್ಡ ವ್ಯಕ್ತಿಗಳ ಜತೆಗೆಯೇ ಫೋಟೋ ಹಾಕಿಕೊಳ್ಳುತ್ತಿದ್ದರು. ದೊಡ್ಡವರೇ ಅವರ ಬಳಿ ಯಾಮಾರಿದಾಗ ನಮ್ಮಂಥವರು ಯಾವ ಲೆಕ್ಕ ಎಂದರು.  

ನಮ್ಮ ಹೆಸರಲ್ಲಿ ಯಾವ ಕಾಲೇಜು ಇಲ್ಲ: ಸ್ವಾಮಿಯಿಂದ ಎಂಜಿನಿಯರಿಂಗ್​ ಕಾಲೇಜಿಗೆ ಹಣ ವರ್ಗಾವಣೆ ಸಂಬಂಧ ಮಾತನಾಡಿದ ರಾಧಿಕಾ, ನಮ್ಮ ಮಾಲೀಕತ್ವದ ಯಾವುದೇ ಎಂಜಿನಿಯರಿಂಗ್​ ಕಾಲೇಜ್​ ಇಲ್ಲ. ನಮ್ಮ ಹೆಸರಲ್ಲಿ ಯಾವ ಕಾಲೇಜು ಇಲ್ಲ ಎಂದು ಹೇಳಿದರು.

ಅಣ್ಣನ ಖಾತೆಗೂ ಯಾವ ಹಣ ಬಂದಿಲ್ಲ: ನನ್ನ ಸಹೋದರನಿಗೂ ಸ್ವಾಮಿ ಅವ್ಯವಹಾರಕ್ಕೂ ಸಹ ಸಂಬಂಧವಿಲ್ಲ. ಅವನ ಖಾತೆಗೂ ಸಹ ಯಾವುದೇ ಹಣ ಬಂದಿಲ್ಲ ಎಂದು ತಿಳಿಸಿದರು.

 ಸಿಸಿಬಿ ವಿಚಾರಣೆ ಕುರಿತು ಸ್ಪಷ್ಟನೆ: ಸಿಸಿಬಿ ವಿಚಾರಣೆಗೆ ನನ್ನನ್ನು ಕರೆದಿಲ್ಲ. ಅಣ್ಣನಿಗೆ ಕರೆದಿದ್ದರು. ಅವರು ಅಟೆಂಡ್​ ಆಗಿದ್ದಾರೆ. ಅಲ್ಲಿ ಅವರಿಗೆ ಸ್ವಾಮಿ ಹೇಗೆ ಪರಿಚಯ, ಯಾವ ರೀತಿ ಸಂಬಂಧ ಎಂಬ ವಿಚಾರವಾಗಿ ಪ್ರಶ್ನಿಸಿದ್ದಾರೆ. ಅವರ ವಿಚಾರಣೆಗೆ ಅಣ್ಣ ಸಹಕರಿಸಿದ್ದಾರೆ. ಇದುವರೆಗೆ ಸಿಸಿಬಿ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿಲ್ಲ. ವಿಚಾರಣೆಗೂ ಕರೆದಿಲ್ಲ ಎಂದರು.

ಸ್ವಾಮಿ ಸಹವಾಸ ಸಾಕು:ಸ್ವಾಮಿ ಜತೆಗಿನ ಎಲ್ಲ ವ್ಯವಹಾರಗಳನ್ನು ಕ್ಲಿಯರ್​ ಮಾಡಿಕೊಳ್ಳುತ್ತೇನೆ. ಅವರ ಸಹವಾಸವೇ ಸಾಕು ಎಂದರು.

Last Updated : Jan 6, 2021, 3:44 PM IST

ABOUT THE AUTHOR

...view details