ಶ್ರಾವಣ ಮಾಸದಲ್ಲಿ ಬರುವ ಹಿಂದುಗಳು ಮೊದಲ ಹಬ್ಬ ಅಂದ್ರೆ ವರಮಹಾಲಕ್ಷ್ಮಿ. ಕೊರೊನಾ ನಡುವೆಯೂ ಸ್ಯಾಂಡಲ್ವುಡ್ ನಟಿಯರು ಈ ಬಾರಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದ್ದಾರೆ.
ರಾಧಿಕಾ ಪಂಡಿತ್ ಜೊತೆ ಯಥರ್ವ್ ಕನ್ನಡ ಚಿತ್ರರಂಗದ ಸ್ಟಾರ್ ನಟ - ನಟಿಯರು ತಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನ ಕುಟುಂಬಸ್ಥರೊಂದಿಗೆ ಸಂತಸದಿಂದ ಆಚರಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಹೊಸ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಯಶ್ ವೈಟ್ ರೇಷ್ಮೆ ಪಂಚೆಯಲ್ಲಿ ಮಿಂಚಿದ್ರೆ, ರಾಧಿಕಾ ಪಂಡಿತ್ ಕೆಂಪು ಬಣ್ಣದ ರೇಷ್ಮೆ ಸೀರೆಯುಟ್ಟು ಲಕ್ಷ್ಮಿಯನ್ನು ಆರಾಧಿಸಿದ್ದಾರೆ. ಇನ್ನು ಮಕ್ಕಳಾದ ಐರಾ, ಯಥರ್ವ್ ಕೂಡ ಹೊಸ ಬಟ್ಟೆ ತೊಟ್ಟು ಹಬ್ಬದ ಮೆರಗು ಹೆಚ್ಚಿಸಿದ್ದಾರೆ.
ಸ್ಯಾಂಡಲ್ವುಡ್ ಬೋಲ್ಡ್ ಅಂಡ್ ಗ್ಲಾಮರ್ ನಟಿ ಎಂದು ಗುರುತಿಸಿಕೊಂಡಿರುವ ರಾಗಿಣಿ ದ್ವಿವೇದಿ ಕೂಡ ವರಮಹಾಲಕ್ಷ್ಮಿ ಹಬ್ಬವನ್ನ ಆಚರಿಸಿದ್ದಾರೆ. ಕೆಂಪು ಬಣ್ಣದ ಗೌನ್ ತೊಟ್ಟು ಮಿಂಚಿರುವ ರಾಗಿಣಿ ದ್ವಿವೇದಿ, ಕೊರೊನಾ ಸಮಯದಲ್ಲಿ ಸಾವಿರಾರು ಜನರ ಹಸಿವು ನೀಗಿಸುವ ಕೆಲಸ ಮಾಡಿದ್ದರು. ಸದ್ಯಕ್ಕೆ ಜಾನಿ ವಾಕರ್ ಹಾಗೂ ನಿರ್ಮಾಪಕ ಕೆ.ಮಂಜು ನಿರ್ಮಾಣದ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಮಲೆನಾಡಿನ ಬೆಡಗಿ ಹರ್ಷಿಕಾ ಪೂಣಚ್ಚ ವರಮಹಾಲಕ್ಷ್ಮಿ ಹಬ್ಬವನ್ನ ಸ್ವಲ್ಪ ವಿಭಿನ್ನವಾಗಿ ಆಚರಿಸಿದ್ದಾರೆ. ಸದ್ಯಕ್ಕೆ 'ತಾಯ್ತಾ' ಹಾಗೂ 'ಭೋಜಪುರಿ' ಸಿನಿಮಾದ ಗುಂಗಿನಲ್ಲಿರುವ ಹರ್ಷಿಕಾ ಪೂಣಚ್ಚಾ, ರೆಡ್ ಬಣ್ಣದ ಲಂಗ ದಾವಣಿಯಲ್ಲಿ ಕಲರ್ ಫುಲ್ ಫೋಟೋ ಶೂಟ್ ಮಾಡುವ ಮೂಲಕ ಈ ವರಮಹಾಲಕ್ಷ್ಮಿ ಹಬ್ಬವನ್ನ ಸೆಲೆಬ್ರೆಟ್ ಮಾಡಿದ್ದಾರೆ.