ಕರ್ನಾಟಕ

karnataka

ಮಗಳ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯ ಶುಭ ಕೋರಿದ ರಾಧಿಕಾ ಪಂಡಿತ್

By

Published : Dec 2, 2020, 1:02 PM IST

ರಾಧಿಕಾ ಪಂಡಿತ್​ ಮಗಳಿಗೆ ಜನ್ಮದಿನದ ಶುಭಾಶಯ ಕೋರುವುದರ ಜೊತೆಗೆ ಕಿವಿಮಾತೊಂದನ್ನು ಹೇಳಿದ್ದಾರೆ. ಕಳೆದ ವರ್ಷ ಐರಾ ಜನ್ಮದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದ ದಂಪತಿ, ಕೊರೊನಾ ಇರುವ ಕಾರಣ ಈ ಬಾರಿ ಮನೆಯಲ್ಲೇ ಸೆಲೆಬ್ರೇಟ್ ಮಾಡಿದ್ದಾರೆ.

Birthday of Yash and Radhika Pandit daughter
ಮಗಳ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಶುಭ ಕೋರಿದ ರಾಧಿಕಾ ಪಂಡಿತ್

ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ರಾಕಿಂಗ್​ ಸ್ಟಾರ್​ ಯಶ್​ ಹಾಗೂ ರಾಧಿಕಾ ಪಂಡಿತ್​. ಕನ್ನಡ ಚಿತ್ರರಂಗದ ಅದೃಷ್ಟಶಾಲಿ ಜೋಡಿಯಾಗಿರುವ ಈ ದಂಪತಿಯ ಮುದ್ದಿನ ಮಗಳು ಐರಾಗೆ ಇಂದು 2ನೇ ವರ್ಷದ ಬರ್ತ್‌ಡೇ ಸಂಭ್ರಮ.

ಐರಾ

2018ರ ಡಿಸೆಂಬರ್ 2 ರಂದು ಐರಾ ಜನಿಸಿದ್ದಳು. ಇವತ್ತು ಪುಟ್ಟ ಮಗಳಿಗೆ ಬರ್ತ್‌ಡೇ ಸಂಭ್ರಮ. ಈ ವಿಶೇಷ ದಿನದಂದು ರಾಧಿಕಾ ಪಂಡಿತ್​ ಮಗಳಿಗೆ ಜನ್ಮದಿನದ ಶುಭಾಶಯ ಕೋರುವುದರ ಜೊತೆಗೆ ಕಿವಿಮಾತೊಂದನ್ನು ಹೇಳಿದ್ದಾರೆ. ಕಳೆದ ವರ್ಷ ಐರಾ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿತ್ತು. ಆದ್ರೆ ಈ ಬಾರಿ ಕೊರೊನಾ ಇರುವ ಕಾರಣ ಮನೆಯಲ್ಲೇ ಹುಟ್ಟುಹಬ್ಬಾಚರಣೆ ಮಾಡಿದ್ದಾರೆ.

ಐರಾ

'ನೀನು ನಮ್ಮ ಜೀವನದಲ್ಲಿ ಸಂತೋಷ ನೀಡಿದ್ದೀಯಾ, ನಮ್ಮ ಪುಟಾಣಿ ಏಂಜಲ್​ಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ರಾಧಿಕಾ ಇನ್ಸ್​ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 'ಬೇಗ ಬೆಳೆಯಬೇಡ, ಸಣ್ಣವಳಾಗಿಯೇ ಇರು' ಎನ್ನುವ ಕಿವಿಮಾತು ಕೂಡ ಹೇಳಿದ್ದಾರೆ.

ಐರಾಗೆ ಮ್ಯೂಸಿಕ್ ಅಂದ್ರೆ ಪಂಚಪ್ರಾಣ. ಗೆಳತಿ ಜೊತೆ ಐರಾ ಪುಟಾಣಿ ಕಾರಿನಲ್ಲಿ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾಳೆ.

ಐರಾ ಚಿತ್ರಗಳು

ಓದಿ: ತೆಲುಗುಗೆ ರಿಮೇಕ್ ಆಗುತ್ತಾ 'ಉಗ್ರಂ' ಸಿನಿಮಾ?

ABOUT THE AUTHOR

...view details