ರಾಧಿಕಾ ಕುಮಾರಸ್ವಾಮಿ ಅವರು ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಅವುಗಳಲ್ಲಿ ಮಹಿಳಾ ಪ್ರಧಾನ ಚಿತ್ರಗಳೇ ಹೆಚ್ಚು. ಪ್ರಸ್ತುತ ರಾಧಿಕಾ ಅಭಿನಯದ ಬಹುನಿರೀಕ್ಷಿತ ಚಿತ್ರ 'ದಮಯಂತಿ' ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಅದರಲ್ಲೂ ಈಗಾಗಲೇ ಬಿಡುಗಡೆಗೊಂಡಿರುವ ದಮಯಂತಿಯ ಟೀಸರ್ ಸಖತ್ ಸೌಂಡ್ ಮಾಡ್ತಿದೆ.
ಪ್ರೇಕ್ಷಕರು ದಮಯಂತಿ ಚಿತ್ರವನ್ನು ರಾಧಿಕಾ ಕುಮಾರಸ್ವಾಮಿ ಜೊತೆ ನೋಡುವ ಅವಕಾಶವನ್ನು ಚಿತ್ರತಂಡ ಕಲ್ಪಿಸಿದೆ.
ಅದೇನಂದರೆ, ಇತ್ತೀಚೆಗಷ್ಟೇ ದಮಯಂತಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿರುವ ಡೈಲಾಗ್ಗಳನ್ನು ಟಿಕ್ಟಾಕ್ ಮಾಡಬೇಕು. ಯಾರ ಟಿಕ್ಟಾಕ್ ವಿಡಿಯೋ ಅತಿ ಹೆಚ್ಚು ಲೈಕ್ ಪಡೆಯುತ್ತದೆಯೋ ಅವರಲ್ಲಿ ಹತ್ತು ಮಂದಿ ನನ್ನೊಂದಿಗೆ ಕೂತು ದಮಯಂತಿ ಚಿತ್ರದ ಪ್ರೀಮಿಯರ್ ಶೋ ನೋಡಬಹುದು ಎಂದು ವಿಡಿಯೋ ಮೂಲಕ ರಾಧಿಕಾ ತಿಳಿಸಿದ್ದಾರೆ.
ಕನ್ನಡ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕ ಕಾಲದಲ್ಲೇ ದೀಪಾವಳಿ ಹಬ್ಬಕ್ಕೆ ಈ ಚಿತ್ರ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ. ಪ್ರಸ್ತುತ ಚಿತ್ರತಂಡ ಗ್ರಾಫಿಕ್ಸ್ ವರ್ಕ್ಸ್ನಲ್ಲಿ ನಿರತವಾಗಿದೆ.