ಮುಂಬೈ :ಈ ವರ್ಷ ಆನ್‌ಲೈನ್‌ನಲ್ಲಿ ನಡೆದ ಪಾಮ್ಸ್ ಸ್ಪ್ರಿಂಗ್ ಇಂಟರ್ನ್ಯಾಷನಲ್ ಶಾರ್ಟ್ ಫೆಸ್ಟ್‌ನಲ್ಲಿ ನಟಿ ರಾಧಿಕಾ ಆಪ್ಟೆ ಅವರ ಮೊದಲ ಕಿರುಚಿತ್ರ, ಸ್ಲೀಪ್‌ವಾಕರ್ಸ್ ಅತ್ಯುತ್ತಮ ಮಿಡ್‌ನೈಟ್ ಕಿರುಚಿತ್ರ ಪ್ರಶಸ್ತಿ ಪಡೆದಿದೆ.
ಧನ್ಯವಾದ!! @ಫಿಲ್ಮ್ಫೆಸ್ಟ್, ಪಾಮ್ ಸ್ಪ್ರಿಂಗ್ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ಮಿಡ್‌ನೈಟ್ ಕಿರುಚಿತ್ರ ಎಂಬ ಪ್ರಶಸ್ತಿ ಗೆದ್ದಿರುವುದಕ್ಕೆ ನಾವು ತುಂಬಾ ರೋಮಾಂಚನಗೊಂಡಿದ್ದೇವೆ!!!# ಗೆಟ್_ರಿಪೋಸ್ಟ್#ಅತ್ಯುತ್ತಮ ಮಿಡ್‌ನೈಟ್ ಕಿರು ಪ್ರಶಸ್ತಿ ವಿಜೇತರು… "ಸ್ಲೀಪ್‌ವಾಕರ್ಸ್"!ಅಭಿನಂದನೆಗಳು!, "ಎಂದು ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ನಾನು ಕಿರುಚಿತ್ರ ನಿರ್ದೇಶನದ ಪ್ರತಿ ಹಂತದಲ್ಲಿಯೂ ಸಾಕಷ್ಟು ಆನಂದಿಸಿದ್ದೇನೆ. ಜನರು ಅದನ್ನು ಶೀಘ್ರದಲ್ಲೇ ವೀಕ್ಷಿಸಬಹುದು ಎಂದು ನಾನು ಭಾವಿಸುತ್ತೇನೆ. ಅಲ್ಲದೇ ನಿರ್ದೇಶಕಳಾಗಿ ಮಂದೆ ನಾನು ಹೆಚ್ಚಿನ ಕೆಲಸಗಳನ್ನು ಮಾಡಬಹುದೆಂದು ಭಾವಿಸುತ್ತೇನೆ. ಕಾದು ನೋಡೋಣಾ! ಎಂದು ಐಎಎನ್‌ಎಸ್‌ಗೆ ನೀಡಿದ ಇತ್ತೀಚಿನ ಸಂದರ್ಶನವೊಂದರಲ್ಲಿ ರಾಧಿಕಾ ಹೀಗೆ ಹೇಳಿದ್ದಾರೆ.
ಶಹಾನಾ ಗೋಸ್ವಾಮಿ ಮತ್ತು ಗುಲ್ಶನ್ ದೇವಯ್ಯ ನಟಿಸಿರುವ ಈ ಕಿರುಚಿತ್ರವನ್ನು ರಾಧಿಕಾ ಸ್ವತಃ ಬರೆದು ನಿರ್ದೇಶಿಸಿದ್ದಾರೆ ಹಾಗೂ ಈ ಸಿನೆಮಾ ನಿದ್ರಾಹೀನತೆಯ ವಿಷಯವನ್ನು ಕೇಂದ್ರೀಕರಿಸಿದೆ.
ಟ್ರೈಲರ್ನಲ್ಲಿ ಸಿನೆಮಾವು ನಿಜವಾಗಿಯೂ ತಿಳಿಯುವುದಿಲ್ಲ. ಆದ್ದರಿಂದ ನಾನು ಅದನ್ನು ನಿಜವಾಗಿಯೂ ಬಿಟ್ಟುಕೊಡಲು ಸಾಧ್ಯವಿಲ್ಲ. ಕಳೆದ ವರ್ಷ ನಾನು ಡೈವಿಂಗ್ ಮಾಡಲು ಪ್ರಾರಂಭಿಸಿದ್ದೆ ಮತ್ತು ಅಲ್ಲಿಯೇ ನನಗೆ ಈ ಆಲೋಚನೆ ಸಿಕ್ಕಿತು ಎಂದು ಸಿನೆಮಾದ ಕಥೆಯ ಆಯ್ಕೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.