ಕೆಲವು ದಿನಗಳ ಹಿಂದೆ ಬಾಲಿವುಡ್ ಬೋಲ್ಡ್ ಬ್ಯೂಟಿ, ಬೋಲ್ಡ್ ಸ್ಟೇಟ್ಮೆಂಟ್ಗೆ ಹೆಸರಾದವರು ಯಾರು ಎಂದು ಪ್ರಶ್ನಿಸಿದರೆ ಬಹುತೇಕರು ವಿದ್ಯಾ ಬಾಲನ್ ಹೆಸರು ಹೇಳುತ್ತಿದ್ದರು. ಆದರೆ, ಇದೀಗ 'ರಕ್ತಚರಿತ್ರ', 'ಕಬಾಲಿ' ಸಿನಿಮಾ ಖ್ಯಾತಿಯ ರಾಧಿಕಾ ಆಪ್ಟೆ ಆ ಜಾಗಕ್ಕೆ ನಾನು ಬಂದಿದ್ದೇನೆ ಎನ್ನುವಂತಿದ್ದಾರೆ.
ಪಾತ್ರದಲ್ಲಿ ಮುಳುಗಿದರೆ ಮಾತ್ರ 'ಅಂತಹ' ದೃಶ್ಯ ಚೆನ್ನಾಗಿ ಬರಲು ಸಾಧ್ಯ.. ನಟಿ ರಾಧಿಕಾ ಆಪ್ಟೆ - undefined
ರೊಮ್ಯಾಂಟಿಕ್ ದೃಶ್ಯ ಆ ರೀತಿ ಟೆಂಪ್ಟ್ ಆದರೆ ಮಾತ್ರ ಅಂತಹ ಸೀನ್ಗಳು ತೆರೆ ಮೇಲೆ ನೈಜವಾಗಿ ಕಾಣುತ್ತದೆ ಎಂದು 'ಕಬಾಲಿ' ಖ್ಯಾತಿಯ ನಟಿ ರಾಧಿಕಾ ಆಪ್ಟೆ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇತ್ತೀಚೆಗೆ ರಾಧಿಕಾ ಆಪ್ಟೆ ಹೆಚ್ಚು ಬೋಲ್ಡ್ ಕ್ಯಾರೆಕ್ಟರ್ಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಬೋಲ್ಡ್ ಸ್ಟೇಟ್ಮೆಂಟ್ಗಳನ್ನೂ ನೀಡುತ್ತಿದ್ದಾರೆ. 'ನೀವು ರೊಮ್ಯಾಂಟಿಕ್ ದೃಶ್ಯದಲ್ಲಿ ನಟಿಸುವಾಗ ಒಂದು ಬಾರಿಯೂ ಟೆಂಪ್ಟ್ ಆಗಿರುವ ಸಂಧರ್ಭ ಇದೆಯಾ..?' ಎಂದು ಇತ್ತೀಚಿನ ಒಂದು ಸಂದರ್ಶನದಲ್ಲಿ ರಾಧಿಕಾಗೆ ಕೇಳಲಾಗಿದೆ. ಇದಕ್ಕೆ ಅಂಜದೆ ಉತ್ತರ ನೀಡಿರುವ ಈ ನಟಿ 'ಸಾಕಷ್ಟು ಬಾರಿ ಆ ರೀತಿ ಅನುಭವ ಆಗಿದೆ. ರೊಮ್ಯಾಂಟಿಕ್ ದೃಶ್ಯದಲ್ಲಿ ಆ ರೀತಿ ಟೆಂಪ್ಟ್ ಆದರೆ ಮಾತ್ರ ಅಂತಹ ಸೀನ್ಗಳು ತೆರೆ ಮೇಲೆ ನೈಜವಾಗಿ ಕಾಣುತ್ತದೆ. ಆದರೆ, ಇವೆಲ್ಲಾ ನಟನೆಯ ಒಂದು ಭಾಗ ಅಷ್ಟೇ' ಎಂದು ಉತ್ತರಿಸಿದ್ದಾರೆ. ಸದ್ಯಕ್ಕೆ ರಾಧಿಕಾ ಅವರ 'ದಿ ಆಶ್ರಮ್', 'ದಿ ವೆಡ್ಡಿಂಗ್ ಗೆಸ್ಟ್' ಇಂಗ್ಲೀಷ್ ಚಿತ್ರಗಳು ಬಿಡುಗಡೆಗೆ ಕಾಯುತ್ತಿವೆ.