ಡಾರ್ಲಿಂಗ್ ಪ್ರಭಾಸ್ ಸದ್ಯಕ್ಕೆ ಓಂ ರೌತ್ ನಿರ್ದೇಶನದ 'ಆದಿಪುರುಷ್' ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಇದಕ್ಕೂ ಮುನ್ನ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಒಟ್ಟಿಗೆ ನಟಿಸಿರುವ 'ರಾಧೇ ಶ್ಯಾಮ್' ಸಿನಿಮಾ ಬಿಡುಗಡೆಯಾಗಲಿದೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಚಿತ್ರತಂಡ ಸಿನಿಮಾ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿ ಮಾಡಿದೆ.
ಆ ವಿಶೇಷ ದಿನದಂದು ಬಿಡುಗಡೆಯಾಗಲಿದೆ 'ರಾಧೇ ಶ್ಯಾಮ್' ಟೀಸರ್ - Prabhas starring Radheshyam
ರಾಧಾಕೃಷ್ಣ ಕುಮಾರ್ ನಿರ್ದೇಶನದಲ್ಲಿ ಪ್ರಭಾಸ್ ಹಾಗೂ ಪೂಜಾಗಾಂಧಿ ಅಭಿನಯದ ಬಹುನಿರೀಕ್ಷಿತ 'ರಾಧೇಶ್ಯಾಮ್' ಚಿತ್ರದ ಟೀಸರ್ ಫೆಬ್ರವರಿ 14 ಪ್ರೇಮಿಗಳ ದಿನದಂದು ಬಿಡುಗಡೆಯಾಗುತ್ತಿದೆ. ಯುವಿ ಕ್ರಿಯೇಷನ್ಸ್ ಬ್ಯಾನರ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದೆ.
ಇದನ್ನೂ ಓದಿ:'ಟಾಪ್ ಟಕ್ಕರ್'ನಲ್ಲಿ ರಶ್ಮಿಕಾದ್ದೇ ಹವಾ...ವಿವಿಧ ಕಾಸ್ಟ್ಯೂಮ್ನಲ್ಲಿ ಕಣ್ಮನ ಸೆಳೆದ ನ್ಯಾಷನಲ್ ಕ್ರಷ್
ಫೆಬ್ರವರಿ 14 ಪ್ರೇಮಿಗಳ ದಿನ. ಈ ವಿಶೇಷ ದಿನದಂದು ಬೆಳಗ್ಗೆ 9:18 ಕ್ಕೆ 'ರಾಧೇಶ್ಯಾಮ್' ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ. ಈಗಾಗಲೇ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಇತ್ತೀಚೆಗೆ ಪ್ರಭಾಸ್ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ಪ್ರಭಾಸ್ ವಿಕ್ರಮಾದಿತ್ಯ ಹಾಗೂ ಪೂಜಾ ಹೆಗ್ಡೆ ಪ್ರೇರಣಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. 1970 ರಲ್ಲಿ ಯೂರೋಪ್ನಲ್ಲಿ ನಡೆದ ಪ್ರೇಮಕಥೆಯೊಂದನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ನವಿರಾದ ಪ್ರೇಮಕಥೆಯೊಂದಿಗೆ ವಿಜ್ಞಾನ ಹಾಗೂ ಜ್ಯೋತಿಷ್ಯ ಶಾಸ್ತ್ರದ ನಡುವಿನ ಸಂಘರ್ಷವನ್ನು ಕೂಡಾ ತೋರಿಸಲಾಗಿದೆಯಂತೆ. ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿ ತಯಾರಾಗುತ್ತಿರುವ ಈ ಚಿತ್ರವನ್ನು ರಾಧಾಕೃಷ್ಣ ಕುಮಾರ್ ನಿರ್ದೇಶಿಸಿದ್ದಾರೆ. ಈ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿ 4 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.