ಕರ್ನಾಟಕ

karnataka

ETV Bharat / sitara

ಪ್ರೇಮಿಗಳ ದಿನಕ್ಕೆ​ ಪ್ರಭಾಸ್ ಗಿಫ್ಟ್ - 'ರಾಧೆಶ್ಯಾಮ್' ಟೀಸರ್​ ಔಟ್​.. ಬಿಡುಗಡೆ ದಿನಾಂಕವೂ ಪ್ರಕಟ - ನಿರ್ದೇಶಕ ರಾಧಾಕೃಷ್ಣ ಕುಮಾರ್​

ಬಹುನಿರೀಕ್ಷಿತ 'ರಾಧೆಶ್ಯಾಮ್' ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು, ಸಿನಿಮಾ ರಿಲೀಸ್​ ಡೇಟ್​ ಕೂಡ ಬಹಿರಂಗಪಡಿಸಿ ಡಾರ್ಲಿಂಗ್ ಪ್ರಭಾಸ್​ ಅಭಿಮಾನಿಗಳಿಗೆ ವ್ಯಾಲಂಟೈನ್ಸ್​​​ ಡೇ ಗಿಫ್ಟ್ ನೀಡಿದ್ದಾರೆ.

Radhe Shyam
ರಾಧೆಶ್ಯಾಮ್

By

Published : Feb 14, 2021, 1:51 PM IST

ಹೈದರಾಬಾದ್: ಬಾಹುಬಲಿ ಖ್ಯಾತಿಯ ಡಾರ್ಲಿಂಗ್ ಪ್ರಭಾಸ್​ ಅವರ 20ನೇ ಸಿನಿಮಾ 'ರಾಧೆಶ್ಯಾಮ್' ಚಿತ್ರದ ಟೀಸರ್​ ಪ್ರೇಮಿಗಳ ದಿನವಾದ ಇಂದು ಬಿಡುಗಡೆಯಾಗಿದೆ.

ಯೂರೋಪ್​​ನಲ್ಲಿ 1970 ರಲ್ಲಿ ನಡೆದ ಪ್ರೇಮಕಥೆಯೊಂದನ್ನು ಆಧರಿಸಿ ರಾಧೆಶ್ಯಾಮ್ ಚಿತ್ರ ಮೂಡಿಬರಲಿದ್ದು, ಪ್ರಭಾಸ್​ ಜೊತೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ನಿರ್ದೇಶಕ ರಾಧಾಕೃಷ್ಣ ಕುಮಾರ್​ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾ 2021ರ ಜುಲೈ 30ರಂದು ಬಿಡುಗಡೆಯಾಗುತ್ತಿರುವುದಾಗಿ ಪ್ರಭಾಸ್​ ಹೇಳಿದ್ದಾರೆ.

'ರಾಧೆಶ್ಯಾಮ್' ಟೀಸರ್​ ಔಟ್

ಈ ಪ್ರೇಮಿಗಳ ದಿನವನ್ನು 'ರಾಧೆಶ್ಯಾಮ್'ನ ಒಂದು ನೋಟದೊಂದಿಗೆ ಆಚರಿಸಿ. ಜುಲೈ 30 ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ ಎಂದು ಟೀಸರ್​ ಹಂಚಿಕೊಳ್ಳುವ ಮೂಲಕ ಪ್ರಭಾಸ್, ಅಭಿಮಾನಿಗಳಿಗೆ ವ್ಯಾಲಂಟೈನ್ಸ್​​​ ಡೇ ಗಿಫ್ಟ್ ನೀಡಿದ್ದಾರೆ.

ಯುವಿ ಕ್ರಿಯೇಷನ್ಸ್ ಮತ್ತು ಗೋಪಿಕೃಷ್ಣ ಫಿಲ್ಮ್ ಬ್ಯಾನರ್​ ಅಡಿ ನಿರ್ಮಾಣವಾಗಿರುವ ರಾಧೆಶ್ಯಾಮ್, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ - ಈ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ABOUT THE AUTHOR

...view details