ಕರ್ನಾಟಕ

karnataka

ETV Bharat / sitara

Radhe Shyam teaser: "ಎಲ್ಲಾ ಗೊತ್ತು, ಆದರೆ ಯಾರಿಗೂ ಹೇಳಲ್ಲ" ಎಂದ 'ವಿಕ್ರಮಾದಿತ್ಯ'.. ಕಾರಣವೇನು? - ರಾಧೆಶ್ಯಾಮ್ ಸುದ್ದಿ

ಈ ಟೀಸರ್​ನಲ್ಲಿ ಒಂದು ಅಸಾಮಾನ್ಯ ಪಾತ್ರದ ಪರಿಚಯ ಮಾಡಲಾಗಿದೆ. ₹140 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 'ರಾಧೆಶ್ಯಾಮ್' ಮುಂದಿನ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ. 2022ರ ಜನವರಿ 14ರಂದು ಸಿನಿಮಾ ರಿಲೀಸ್ ಆಗಲಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ಏಕಕಾಲದಲ್ಲಿ ಚಿತ್ರ ತಯಾರಾಗಿದೆ. ಕನ್ನಡದಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ರಾಧಾ ಕೃಷ್ಣ ಕುಮಾರ್ ಆ್ಯಕ್ಷನ್- ಕಟ್​ ಹೇಳಿದ್ದಾರೆ..

Vikramaditya
Vikramaditya

By

Published : Oct 23, 2021, 4:00 PM IST

ತೆಲುಗು ಖ್ಯಾತ ನಟ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಇದೀಗ ದೇಶದ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ನಟನ ಜನ್ಮದಿನದ ಪ್ರಯುಕ್ತ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ ರಾಧೆಶ್ಯಾಮ್​ ಟೀಸರ್ ರಿಲೀಸ್ ಮಾಡಲಾಗಿದೆ.

ಶನಿವಾರ ಪ್ರಭಾಸ್​ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ, ಅವರ ಮುಂಬರುವ ಥ್ರಿಲ್ಲರ್ ಸಿನಿಮಾ 'ರಾಧೆಶ್ಯಾಮ್'ನ ನಿರ್ಮಾಪಕರು 'ವಿಕ್ರಮಾದಿತ್ಯ'ನನ್ನು ಪರಿಚಯಿಸುವ ಮೂಲಕ ಬಹುನಿರೀಕ್ಷಿತ ನೋಟವನ್ನು ಅನಾವರಣಗೊಳಿಸಿದ್ದಾರೆ.

ರಾಧೆಶ್ಯಾಮ್‌ನಲ್ಲಿ ಪ್ರಭಾಸ್ ತುಂಬಾ ಆಸಕ್ತಿದಾಯಕ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಟೀಸರ್​ನಲ್ಲಿ ನಾಯಕ ವಿಕ್ರಮಾದಿತ್ಯನ ಪಾತ್ರದ ಪರಿಚಯ ಮಾಡಿಕೊಡಲಾಗಿದೆ. ಈ ಮೊದಲೇ ಚಿತ್ರ ತಂಡ ಹೇಳಿದಂತೆ ಟೀಸರ್​ ಇಂಗ್ಲಿಷ್​ನಲ್ಲಿದೆ.

ರಾಧೆಶ್ಯಾಮ್ ಚಿತ್ರದ ಟೀಸರ್​ನಲ್ಲಿರುವ ಪ್ರಭಾಸ್ ಸ್ಟೈಲ್​, ಡೈಲಾಗ್ ಹಾಗೂ ಚಿತ್ರದ ಮೇಕಿಂಗ್ ಡಾರ್ಲಿಂಗ್​ ಅಭಿಮಾನಿಗಳ ಮನಗೆದ್ದಿದೆ. ಅಲ್ಲದೇ ಸಿನಿ ಪ್ರಿಯರಲ್ಲಿ ಹೊಸ ಕುತೂಹಲ ಹುಟ್ಟು ಹಾಕಿದೆ. ಈ ಚಿತ್ರದಲ್ಲಿ ಪ್ರಭಾಸ್ 'ವಿಕ್ರಮಾದಿತ್ಯ' ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಪಾತ್ರದ ಮುಖ್ಯ ಗುಣ ಎಂದರೆ ಆತನಿಗೆ ಎಲ್ಲವೂ ತಿಳಿದಿದ್ದರೂ ಅದನ್ನು ಯಾರಿಗೂ ಹೇಳುವುದಿಲ್ಲ.

ಪ್ರಭಾಸ್​ ಸಂಭಾಷಣೆ ಚಿತ್ರದ ಬಗೆಗೆ ಹೊಸ ಆಯಾಮವೊಂದನ್ನು ಸೃಷ್ಟಿ ಮಾಡಿದೆ. "ನನಗೆ ನೀನು ಗೊತ್ತು. ಆದರೆ, ನಿನಗೆ ನಾನು ಹೇಳುವುದಿಲ್ಲ. ನಿನ್ನ ಹೃದಯ ಒಡೆದು ಹೋಗಿದೆ ಎಂದು ಗೊತ್ತು. ಆದರೆ, ಹೇಳುವುದಿಲ್ಲ.

ನನಗೆ ನಿನ್ನ ಸಾವಿನ ಬಗ್ಗೆ ತಿಳಿದಿದೆ. ಆದರೆ, ನಿನಗೆ ನಾನು ಅದನ್ನೂ ಹೇಳುವುದಿಲ್ಲ. ನನಗೆ ಎಲ್ಲವೂ ತಿಳಿದಿದೆ. ಆದರೆ, ಯಾವುದನ್ನೂ ನಿನಗೆ ಹೇಳುವುದಿಲ್ಲ" ಎಂದು ವಿಕ್ರಮಾದಿತ್ಯನ ಈ ಟೀಸರ್​ನಲ್ಲಿ ಹೇಳುತ್ತಾನೆ.

"ನನಗೆ ಎಲ್ಲವೂ ತಿಳಿದಿದ್ದರೂ ಯಾವುದನ್ನೂ ನಾಣು ಹೇಳಲ್ಲ. ಕಾರಣ ಅದ್ಯಾವುದೂ ನಿನಗೆ ಅರ್ಥವಾಗುವುದಿಲ್ಲ. ಎಲ್ಲವೂ ನಿನ್ನ ಆಲೋಚನೆಯನ್ನು ಮೀರಿದೆ. ನಾನೇನು ಅಸಾಮಾನ್ಯನಲ್ಲ. ಆದರೆ, ನಿಮ್ಮೆಲ್ಲರಂತೆಯೂ ಅಲ್ಲ" ಎಂಬ ಡೈಲಾಗ್​ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಜತೆಗೆ ಕುತೂಹಲವನ್ನೂ ಮೂಡಿಸಿದೆ.

ಈ ಟೀಸರ್​ನಲ್ಲಿ ಒಂದು ಅಸಾಮಾನ್ಯ ಪಾತ್ರದ ಪರಿಚಯ ಮಾಡಲಾಗಿದೆ. ₹140 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 'ರಾಧೆಶ್ಯಾಮ್' ಮುಂದಿನ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ. 2022ರ ಜನವರಿ 14ರಂದು ಸಿನಿಮಾ ರಿಲೀಸ್ ಆಗಲಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ಏಕಕಾಲದಲ್ಲಿ ಚಿತ್ರ ತಯಾರಾಗಿದೆ. ಕನ್ನಡದಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ರಾಧಾ ಕೃಷ್ಣ ಕುಮಾರ್ ಆ್ಯಕ್ಷನ್- ಕಟ್​ ಹೇಳಿದ್ದಾರೆ.

ABOUT THE AUTHOR

...view details