ಕರ್ನಾಟಕ

karnataka

ETV Bharat / sitara

ನಟಸಾರ್ವಭೌಮ ಟೈಟಲ್ ಹಾಡಿಗೆ ರಚಿತಾ ರಾಮ್ ಮಸ್ತ್​ ಸ್ಟೆಪ್ಸ್​​​​​ - undefined

ಫೆಬ್ರವರಿ 7 ರಂದು ಪುನೀತ್ ರಾಜ್​ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಟೈಟಲ್ ಹಾಡಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಸಖತ್ ಸ್ಟೆಪ್ಸ್ ಹಾಕಿದ್ದಾರೆ.

By

Published : Feb 4, 2019, 3:15 PM IST

ರಚಿತಾ ಮಸ್ತ್ ಸ್ಟೆಪ್ಸ್​​​​​​
ಪುನೀತ್ ರಾಜ್​​ಕುಮಾರ್ ಅಭಿನಯದ, ಪವನ್​ ಒಡೆಯರ್ ನಿರ್ದೇಶನದ ಹೈ ವೋಲ್ಟೇಜ್​​ ಸಿನಿಮಾ ನಟಸಾರ್ವಭೌಮ ಬಿಡುಗಡೆಗೆ ಇನ್ನು ಮೂರು ದಿನಗಳು ಬಾಕಿ ಇದೆ. ರಾಜ್ಯಾದ್ಯಂತ ನಟಸಾರ್ವಭೌಮನ ಹವಾ ಜೋರಾಗಿದೆ.
ರಚಿತಾ ಮಸ್ತ್ ಸ್ಟೆಪ್ಸ್​​​​​​

ಇತ್ತೀಚೆಗೆ ಅಭಿಮಾನಿಯೊಬ್ಬ 2,75,000 ರೂಪಾಯಿ ನೀಡಿ ಸಿನಿಮಾದ 1200 ಟಿಕೆಟ್​​ಗಳನ್ನು ತಾನೇ ಖರೀದಿಸಿದ್ದರು. ಅಷ್ಟರ ಮಟ್ಟಿಗೆ ಪವರ್ ಸ್ಟಾರ್ ಕ್ರೇಜ್ ಆರಂಭವಾಗಿದೆ. ' ಚಕ್ರವ್ಯೂಹ' ಸಿನಿಮಾ ನಂತರ ಎರಡನೇ ಬಾರಿಗೆ ಪುನೀತ್ ಜೊತೆ ನಟಿಸಿರುವ ರಚಿತಾ ಕೂಡಾ ಸಿನಿಮಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ಎಂಬ ಕುತೂಹಲದಲ್ಲಿದ್ದಾರೆ. ಸಾಮಾನ್ಯರಷ್ಟೇ ಅಲ್ಲ, ನಟಸಾರ್ವಭೌಮನ ಹಾಡಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡಾ ಸೊಂಟ ಬಳುಕಿಸಿದ್ಧಾರೆ. ಸಿನಿಮಾದ ಟೈಟಲ್ ಹಾಡಿಗೆ ರಚಿತಾ ಹಾಕಿರುವ ಸ್ಟೆಪ್ಸ್ ವಿಡಿಯೋ ವೈರಲ್ ಆಗಿದೆ.

ರಚಿತಾ ಮಸ್ತ್ ಸ್ಟೆಪ್ಸ್​​​​​​

ರಾಕ್​​​ಲೈನ್ ವೆಂಕಟೇಶ್ ನಿರ್ಮಿಸಿರುವ ಸಿನಿಮಾ ಫೆಬ್ರವರಿ 7 ರಂದು ಗುರುವಾರ ಬಿಡುಗಡೆಯಾಗಲಿದ್ದು ಬಾಕ್ಸ್ ಆಫೀಸ್ ಬೇಟೆ ಶುರುವಾಗಲಿದೆ.

For All Latest Updates

TAGGED:

ABOUT THE AUTHOR

...view details