ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ 'ಶಬರಿ ಇನ್ ಸರ್ಚ್ ಆಫ್ ರಾವಣ' ಎಂಬ ಚಿತ್ರದಲ್ಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಗೊತ್ತಿತ್ತೇ ಹೊರತು, ಚಿತ್ರದಲ್ಲಿ ಅವರ ಪಾತ್ರವೇನು, ಹೇಗೆ ಕಾಣುತ್ತಾರೆ ಮುಂತಾದ ಯಾವುದೇ ವಿಷಯಗಳು ಬಹಿರಂಗವಾಗಿರಲಿಲ್ಲ. ಹೀಗಿರುವಾಗಲೇ, ಭಾನುವಾರ ರಚಿತಾ ರಾಮ್ ಹುಟ್ಟುಹಬ್ಬದ ಸಲುವಾಗಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಚಿತಾ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಶಬರಿ ಚಿತ್ರದಲ್ಲಿ ರಚಿತಾಗೆ ಎರಡು ಲುಕ್ಗಳಿವೆಯಂತೆ. ಅದರಲ್ಲೊಂದು ಬಾಬ್ ಕಟ್ ಲುಕ್ ಆಗಿದ್ದು, ಈ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡದವರು ರಚಿತಾಗೆ ಶುಭ ಕೋರಿದ್ದಾರೆ. ಎರಡರಲ್ಲಿ ಒಂದೇನೋ ಗೊತ್ತಾಯಿತು, ಇನ್ನೊಂದು ಹೇಗಿರುತ್ತದೆ ಎಂಬ ಪ್ರಶ್ನೆಗೆ ಇನ್ನೂ ಸ್ವಲ್ಪ ದಿನಗಳ ಕಾಲ ಕಾಯಬೇಕು. ಇನ್ನೊಂದು ಲುಕ್ನ್ನು ಚಿತ್ರತಂಡದವರು ಗೌಪ್ಯವಾಗಿ ಇಟ್ಟಿದ್ದು, ಬಿಡುಗಡೆಯ ಸಂದರ್ಭದಲ್ಲಿ ಹೊರಬೀಳುವ ಸಾಧ್ಯತೆ ಇದೆ.