ಕರ್ನಾಟಕ

karnataka

ETV Bharat / sitara

ಕಸ್ತೂರಿ ನಿವಾಸ ಬಿಟ್ಟು ಕಸ್ತೂರಿ ಮಹಲ್​​​​​​​ಗೆ ಕಾಲಿಟ್ಟ ರಚಿತಾ ರಾಮ್​​ - Dinesh babu direction Kasruri Mahal

ದಿನೇಶ್ ಬಾಬು ನಿರ್ದೇಶನದಲ್ಲಿ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರದ ಹೆಸರನ್ನು ಕಸ್ತೂರಿ ಮಹಲ್ ಎಂದು ಅಂತಿಮಗೊಳಿಸಲಾಗಿದೆ. ಚಿತ್ರತಂಡ ನಿನ್ನೆ ಹಿರಿಯ ನಿರ್ದೇಶಕ ಭಗವಾನ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬಂದಿದೆ.

Kasturi Mahal
ಕಸ್ತೂರಿ ಮಹಲ್

By

Published : Sep 11, 2020, 4:20 PM IST

ಹಿರಿಯ ನಿರ್ದೇಶಕ ದಿನೇಶ್ ಬಾಬು ಕೆಲವು ದಿನಗಳ ಹಿಂದೆ ತಮ್ಮ 50 ನೇ ಚಿತ್ರದ ಮುಹೂರ್ತ ನೆರವೇರಿಸಿದ್ದರು. ಈ ಚಿತ್ರಕ್ಕೆ 'ಕಸ್ತೂರಿ ನಿವಾಸ' ಎಂದು ಹೆಸರಿಡಲಾಗಿತ್ತು. ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ರಚಿತಾ ಕೂಡಾ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಬಂದು ಹೋಗಿದ್ದರು.

ಹಿರಿಯ ನಿರ್ದೇಶಕ ಎಸ್​.ಕೆ. ಭಗವಾನ್

ಆದರೆ ಡಾ. ರಾಜ್​ಕುಮಾರ್ ಚಿತ್ರದ ಹೆಸರನ್ನು ಯಾರೂ ಬಳಸಬಾರದು ಎಂದು ಫಿಲ್ಮ್​ ಚೇಂಬರ್ ಸೂಚಿಸಿದ್ದರೂ ಸಹ ದಿನೇಶ್ ಬಾಬು ತಮ್ಮ ಚಿತ್ರಕ್ಕೆ 'ಕಸ್ತೂರಿ ನಿವಾಸ' ಹೆಸರಿಟ್ಟಿದ್ದರು. ಇದಕ್ಕೆ ಹಿರಿಯ ನಿರ್ದೇಶಕ ಎಸ್​.ಕೆ. ಭಗವಾನ್ ಕೂಡಾ ಬೇಸರ ವ್ಯಕ್ತಪಡಿಸಿದ್ದರು. ನನ್ನನ್ನು ಒಂದು ಮಾತು ಕೂಡಾ ಕೇಳದೆ ಚಿತ್ರದ ಹೆಸರನ್ನು ಬಳಸಿಕೊಂಡಿದ್ದಾರೆ ಎಂದು ಹಿರಿಯ ನಿರ್ದೇಶಕ ಭಗವಾನ್ ಬೇಸರಗೊಂಡಿದ್ದರು. ನಂತರ ಡಾ. ರಾಜ್​ಕುಮಾರ್ ಅಭಿಮಾನಿಗಳ ಒತ್ತಾಯದ ಮೇರೆಗೆ ದಿನೇಶ್ ಬಾಬು ಚಿತ್ರದ ಹೆಸರನ್ನು 'ಕಸ್ತೂರಿ' ಎಂದು ನಾಮಕರಣ ಮಾಡಿದ್ದರು. ಆದರೆ ಮತ್ತೆ ಈ ಸಿನಿಮಾ ಹೆಸರು ಬದಲಾಗಿದೆ.

ನಿರ್ದೇಶಕ ಭಗವಾನ್ ಜೊತೆ 'ಕಸ್ತೂರಿ ಮಹಲ್ ' ಚಿತ್ರತಂಡ

ಫೈನಲ್ ಆಗಿ ಈ ಚಿತ್ರಕ್ಕೆ 'ಕಸ್ತೂರಿ ಮಹಲ್' ಎಂದು ಹೆಸರಿಡಲಾಗಿದೆ. ಚಿತ್ರದ ನಿರ್ಮಾಪಕ ರವೀಶ್.ಆರ್ ಹಾಗೂ ಚಿತ್ರತಂಡದ ಇತರ ಸದಸ್ಯರು ಹಿರಿಯ ನಿರ್ದೇಶಕ ಭಗವಾನ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬಂದಿದೆ.

ರಚಿತಾ ರಾಮ್

ಇನ್ನು ಅಕ್ಟೋಬರ್​ 5 ರಿಂದ ಚಿಕ್ಕಮಗಳೂರಿನ ಕೊಟ್ಟಿಗೆ ಹಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಹಾರರ್​​​​​​, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರಕ್ಕೆ ದಿನೇಶ್ ಬಾಬು ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಶ್ರೀ ಭವಾನಿ‌ ಆರ್ಟ್ಸ್ ಹಾಗೂ‌ ರುಬಿನ್ ರಾಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವೀಶ್ ಆರ್​​​​. ಸಿ ಹಾಗೂ ರುಬಿನ್ ರಾಜ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರಚಿತಾ ರಾಮ್​, ಸ್ಕಂದ ಅಶೋಕ್, ರಂಗಾಯಣ ರಘು, ನಾರಾಯಣ ಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ABOUT THE AUTHOR

...view details