ಕರ್ನಾಟಕ

karnataka

ETV Bharat / sitara

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ರಚಿತಾ ರಾಮ್​​ - ಶ್ರೀಕ್ಷೇತ್ರ ಧರ್ಮಸ್ಥಳ

ಡಿಂಪಲ್ ಕ್ವೀನ್ ರಚಿತಾ ರಾಮ್​ ನಿನ್ನೆ ಶಿವರಾತ್ರಿ ಹಬ್ಬದ ಪ್ರಯುಕ್ತ ಪವಿತ್ರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಮಂಜುನಾಥನ ದರ್ಶನ ಪಡೆದು ನಂತರ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ಶ್ರೀ ವೀರೇಂದ್ರ ಹೆಗ್ಗಡೆ, ರಚಿತಾ ರಾಮ್​

By

Published : Mar 5, 2019, 11:13 AM IST

Updated : Mar 5, 2019, 12:24 PM IST

ನಿನ್ನೆ ನಾಡಿನಾದ್ಯಂತ ಜನರು ಭಕ್ತಿಪೂರ್ವಕವಾಗಿ ಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ಬೆಳಗಿನಿಂದ ಉಪವಾಸವಿದ್ದು ಶಿವಾಲಯಕ್ಕೆ ಹೋಗಿ ಶಿವನ ದರ್ಶನ ಪಡೆದು ರಾತ್ರಿಯಿಡೀ ಜಾಗರಣೆ ಕೂಡಾ ಮಾಡಿದ್ದಾರೆ.

ಶ್ರೀ ವೀರೇಂದ್ರ ಹೆಗ್ಗಡೆ, ರಚಿತಾ ರಾಮ್​

ಡಿಂಪಲ್ ಕ್ವೀನ್ ರಚಿತಾ ರಾಮ್​ ಶಿವರಾತ್ರಿ ಹಬ್ಬದ ಅಂಗವಾಗಿ ನಿನ್ನೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಶ್ರೀ ಮಂಜುನಾಥನ ದರ್ಶನ ಪಡೆದಿದ್ದಾರೆ. ಸಿನಿಮಾ ಶೂಟಿಂಗ್​​​​​​ ನಡುವೆಯೂ ರಚಿತಾ ಬಿಡುವು ಮಾಡಿಕೊಂಡು ಮಂಜುನಾಥನ ದರ್ಶನಕ್ಕೆ ತೆರಳಿದ್ದಾರೆ. ಅಲ್ಲಿಂದ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ಇನ್ನು ನಿನ್ನೆ ನಿಖಿಲ್ ಕುಮಾರಸ್ವಾಮಿ ಕೂಡಾ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದು ಭೋಜನ ಶಾಲೆಯಲ್ಲಿ ಜನಸಾಮಾನ್ಯರೊಂದಿಗೆ ಕುಳಿತು ಊಟ ಮಾಡಿ ಬಂದಿದ್ದಾರೆ.

Last Updated : Mar 5, 2019, 12:24 PM IST

ABOUT THE AUTHOR

...view details