ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಭಾರತ ಕಾರ್ಯಕ್ರಮ ನೋಡುಗರನ್ನು ನಕ್ಕು ನಲಿಸುತ್ತಿದೆ. ವರ್ಷವಿಡೀ ಮಜವಿಲ್ಲದೆ ಜನರು ಕೊರಗಿದ್ದು ಇದೀಗ ಕಲರ್ಸ್ ಕನ್ನಡ ನಿಜವಾದ ಮಜವನ್ನ ಉಣಬಡಿಸಲು ಸಿದ್ದವಾಗಿದೆ.
ಇಂದಿನಿಂದ (ನ.7) ರಾತ್ರಿ 9 ಗಂಟೆಯಿಂದ ಪ್ರಸಾರ ಕಾಣುವ ಮಜಾಭಾರತ ಕಾಮಿಡಿ ಕಾರ್ಯಕ್ರಮದಲ್ಲಿ ನಕ್ಕು ನಲಿಸುವ ಸ್ಕಿಟ್ಟುಗಳ ಜೊತೆ ಕಿಲಾಡಿಗಳು ಎಂಟ್ರಿ ಕೊಡಲಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟ್ಟರ್ನಲ್ಲಿ ಡ್ಯಾನ್ಸ್ ಮಾಡುವ ಮೂಲಕ ಮಾಹಿತಿ ನೀಡಿರುವ ಕಾರ್ಯಕ್ರಮದ ತೀರ್ಪುಗಾರರಾದ ನಟಿ ರಚಿತಾ ರಾಮ್, ಜಗತ್ತು ಮುಖಕ್ಕೆ ಮಾಸ್ಕ್ ಹಾಕ್ಕೊಂಡು ಬದುಕ್ತಿದೆ, ಮಾಸ್ಕ್ ನ ಹಿಂದೊಂದು ನಗುವಿದೆ. ನಗು ಮರೆತಿರೋ ನಿಮ್ಮನ್ನೆಲ್ಲಾ ನಗಿಸೋಕೆ ನಾವು ಬರ್ತಿದ್ದೀವಿ, ಮಾಸ್ಕ್ ಬಿಚ್ಚಿ ನಗ್ದೇ ಇದ್ರೂ ಪರ್ವಾಗಿಲ್ಲ ಮನಸ್ಸು ಬಿಚ್ಚಿ ನಗೋಣ ಎಂದಿದ್ದಾರೆ.
ರಚಿತಾ ರಾಮ್ ಕಾಮಿಡಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು, ಎಲ್ಲ ಮೋರೆಗಳೆ ಸ್ವಲ್ಪ ನಗೆಯನು ಚೆಲ್ಲುತಿರಿ...ಸ್ವಾಮಿ ದೊಡ್ಡೋರ್ ಹೇಳಿ ಕೊಟ್ಟೋರೆ.. ನಕ್ರೇ ಸ್ವರ್ಗ.. ನೂರು ಕಾಲ ನಾವು ಬಾಳೊದಕ್ಕೆ ಇದುವೇ ಮಾರ್ಗ.. ಅಜ್ಜ ಅಜ್ಜಿ, ಮಮ್ಮಿ ಡ್ಯಾಡಿ, ಅಂಕಲ್ ಆಂಟಿ ಎಲ್ಲ ನಲಿದಾಡಿ ಎಂದು ಡ್ಯಾನ್ಸ್ ಮಾಡಿದ್ದಾರೆ.