ಕರ್ನಾಟಕ

karnataka

ETV Bharat / sitara

ತನ್ನ ಬಳಿ ಆಟೋಗ್ರಾಫ್​​​​ ಪಡೆದ ಅಭಿಮಾನಿಯನ್ನು ಹುಡುಕುತ್ತಿರುವ ಡಿಂಪಲ್ ಕ್ವೀನ್​​​...! - Rachita ram searching for her fan

ತನ್ನನ್ನು ನೋಡಲು ಬಂದ ಅಭಿಮಾನಿಯೊಬ್ಬರನ್ನು ಡಿಂಪಲ್ ಕ್ವೀನ್ ಹುಡುಕುತ್ತಿದ್ದಾರಂತೆ. ಆ ಅಭಿಮಾನಿ ಬಗ್ಗೆ ನಾನೂ ಏನೂ ವಿಚಾರಿಸದೆ ಹಾಗೆ ಕಳಿಸಿಕೊಟ್ಟೆ ಎಂದು ರಚಿತಾ ಬೇಸರ ಮಾಡಿಕೊಂಡಿದ್ದಾರೆ.

Rachita ram searching for her fan
ಡಿಂಪಲ್ ಕ್ವೀನ್

By

Published : Jul 7, 2020, 2:11 PM IST

ಸಿನಿಮಾ ನಟರು ಎಂದ ಮೇಲೆ ಅಲ್ಲಿ ಅಭಿಮಾನ ಬಳಗ ಇರುವುದು ಸಾಮಾನ್ಯ. ನಟರಿಗೆ ಹೆಚ್ಚು ಅಭಿಮಾನಿ ಬಳಗ ಇರುತ್ತಾರೆ. ಆದರೆ ಕೆಲವೊಂದು ನಟಿಯರಿಗೆ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾನ್ ಫಾಲೋಯಿಂಗ್ ಇದೆ.

ಆಟೋಗ್ರಾಫ್​​​​ ಪಡೆದ ಅಭಿಮಾನಿಯನ್ನು ಹುಡುಕುತ್ತಿರುವ ರಚಿತಾ ರಾಮ್

ನಾಯಕಿಯರಿಗೆ ಅಭಿಮಾನಿ ಸಂಘ ಎಂದು ಆರಂಭವಾಗಿದ್ದು, ಸ್ಯಾಂಡಲ್​​​ವುಡ್​​​​​ ಕ್ವೀನ್ ರಮ್ಯಾ ಅವರಿಂದ. ಈಗ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಕೂಡಾ ಅಭಿಮಾನಿ ಸಂಘ ಇದೆ. ಅದಕ್ಕೆ ಸಾಕ್ಷಿಯಾಗಿ ಕೆಲವು ದಿನಗಳ ಹಿಂದೆ ರಚಿತಾ ರಾಮ್‌ ಮನೆ ಬಳಿ ಕೆಲವು ಅಭಿಮಾನಿಗಳು ಆಕೆಗಾಗಿ ಕಾಯುತ್ತಿದ್ದರಂತೆ. ಇದನ್ನು ಗಮನಿಸಿದ ರಚಿತಾ ರಾಮ್ ತಾಯಿ ನಿನಗಾಗಿ ಯಾರೋ ಕಾಯುತ್ತಿದ್ದಾರೆ ನೋಡು ಎಂದರಂತೆ. ಆಗ ರಚಿತಾ ರಾಮ್ ಹೊರಗೆ ಬಂದಾಗ ಆಟೋದೊಂದಿಗೆ ಅಭಿಮಾನಿಗಳು ರಚಿತಾರನ್ನು ನೋಡಲು ಕಾಯುತ್ತಿದ್ದರು. ಇವರನ್ನು ನೋಡುತ್ತಿದ್ದಂತೆ ರಚಿತಾಗೆ ಅವರು ಆಟೋ ಚಾಲಕರು ಎಂದು ತಿಳಿದಿದೆ.

ಆಟೋಗ್ರಾಫ್​​​​ ಪಡೆದ ಅಭಿಮಾನಿಯನ್ನು ಹುಡುಕುತ್ತಿರುವ ರಚಿತಾ ರಾಮ್

ನನ್ನನ್ನು ನೋಡುತ್ತಿದ್ದಂತೆ ಅವರು ಬಹಳ ಎಕ್ಸೈಟ್ ಆದರು. ನನ್ನನ್ನು ಒಂದು ಮಾತು ಕೂಡಾ ಆಡಲು ಬಿಡದೆ, ನಾವು ನಿಮ್ಮ ಪಕ್ಕಾ ಅಭಿಮಾನಿ ಮೇಡಂ. ನನ್ನ ಆಟೋ ಮೇಲೆ ನಿಮ್ಮ ಫೋಟೋ ಇರಬೇಕು ಎಂದು ನನ್ನ ಕೈಲಿಂದಲೇ ನನ್ನ ಫೋಟೋವನ್ನು ಆಟೋ ಮೇಲೆ ಅಂಟಿಸಿ, ಸೆಲ್ಫಿ ತೆಗೆದುಕೊಂಡು ಆಟೋಗ್ರಾಫ್ ಪಡೆದು ಹೊರಟುಹೊದರು. ಆದರೆ ರಚಿತಾ ಈಗ ಆ ಅಭಿಮಾನಿಗಳನ್ನು ಹುಡುಕುತ್ತಿದ್ದಾರೆ.

ಆಟೋಗ್ರಾಫ್​​​​ ಪಡೆದ ಅಭಿಮಾನಿಯನ್ನು ಹುಡುಕುತ್ತಿರುವ ರಚಿತಾ ರಾಮ್

ಆಟೋ ಮುಂದೆ ನಿಂತಿರುವ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಚಿತಾ ರಾಮ್, ಈ ಆಟೋ ಚಾಲಕರ ಬಗ್ಗೆ ನಿಮಗೆ ತಿಳಿದರೆ ನನಗೆ ತಿಳಿಸಿ. ಆ ಅಭಿಮಾನಿ ಎಲ್ಲಿಯವರು, ಹೆಸರು ಏನು ಎಂಬುದನ್ನು ನಾನು ಕೇಳಲಿಲ್ಲ ಎಂದು ರಚಿತಾ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ.

ಆಟೋಗ್ರಾಫ್​​​​ ಪಡೆದ ಅಭಿಮಾನಿಯನ್ನು ಹುಡುಕುತ್ತಿರುವ ರಚಿತಾ ರಾಮ್

ಅಷ್ಟೇ ಅಲ್ಲ ಅಣ್ಣಾವ್ರು ಅಭಿಮಾನಿಗಳನ್ನು ದೇವರು ಎಂದು ಕರೆದಿರುವುದು ಅಕ್ಷರಶ: ಸತ್ಯ. ಆದರೆ ನಾನು ನನ್ನನ್ನು ನೋಡಲು ಬಂದ ಅಭಿಮಾನಿ ಬಗ್ಗೆ ಏನೂ ಕೇಳದಿದ್ದಕ್ಕೆ ಬೇಸರವಾಗುತ್ತಿದೆ ಎಂದು ರಚಿತಾ ಹೇಳಿದ್ದಾರೆ.

ABOUT THE AUTHOR

...view details