ಕರ್ನಾಟಕ

karnataka

ETV Bharat / sitara

ಕೋಟ್ಯಧಿಪತಿ ಹಾಟ್​​​​ ಸೀಟ್​​ ಮೇಲೆ ಅಪ್ಪು: ಪುನೀತ್​​ಗೆ ಪ್ರಶ್ನೆ ಕೇಳುವವರು ಯಾರು? - ಕನ್ನಡದ ಕೋಟ್ಯಾಧಿಪತಿ ಗ್ರ್ಯಾಂಡ್​ ಫಿನಾಲೆ

ಕನ್ನಡದ ಕೋಟ್ಯಧಿಪತಿ ನಾಲ್ಕನೇ ಸೀಸನ್ ಮುಕ್ತಾಯದ ಹಂತ ತಲುಪಿದ್ದು, ಇದೇ ಭಾನುವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಕಾರ್ಯಕ್ರಮದ ನಿರೂಪಣೆಯನ್ನು ನಟಿ ರಚಿತಾ ರಾಮ್​ ನಡೆಸಿಕೊಡಲಿದ್ದಾರೆ.

ರಚಿತಾ ರಾಮ್​ ಮತ್ತು ಪುನೀತ್​ ರಾಜ್​​​ಕುಮಾರ್​​

By

Published : Nov 14, 2019, 1:19 PM IST

ಕನ್ನಡದ ಹೆಸರಾಂತ ರಿಯಾಲಿಟಿ ಶೋಗಳ ಪೈಕಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಧಿಪತಿಯೂ ಒಂದು. ಇದೀಗ ಕೋಟ್ಯಧಿಪತಿ ನಾಲ್ಕನೇ ಸೀಸನ್ ಮುಕ್ತಾಯದ ಹಂತ ತಲುಪಿದ್ದು, ಇದೇ ಭಾನುವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

ರಚಿತಾ ರಾಮ್​ ಮತ್ತು ಪುನೀತ್​ ರಾಜ್​​​ಕುಮಾರ್​​

ಗ್ರ್ಯಾಂಡ್ ಫಿನಾಲೆ ಎಂದ ಮೇಲೆ ಸ್ವಲ್ಪ ಸ್ಪೆಷಲ್​ ಆಗಿಯೇ ಇರಬೇಕು. ಈ ಬಾರಿ ಹಾಟ್ ಸೀಟ್ ಮೇಲೆ ಕೂರುತ್ತಿರುವುದು ಬೇರಾರೂ ಅಲ್ಲ. ಅಭಿಮಾನಿಗಳ ಪ್ರೀತಿಯ ಅಪ್ಪು. ಪುನೀತ್​​​ ಹಾಟ್ ಸೀಟ್​​ ಮೇಲೆ ಕುಳಿತುಕೊಳ್ಳುತ್ತಾರೆ ಎಂದರೆ ಅವರಿಗೆ ಪ್ರಶ್ನೆ ಕೇಳಲು ಮತ್ತೊಬ್ಬರು ಬೇಕೇಬೇಕು ಅಲ್ವಾ. ಇದಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಗ್ರ್ಯಾಂಡ್ ಫಿನಾಲೆಯ ನಿರೂಪಣೆ ಮಾಡಲಿದ್ದಾರೆ.

ರಚಿತಾ ರಾಮ್​

ಈಗಾಗಲೇ ಗ್ರ್ಯಾಂಡ್ ಫಿನಾಲೆಯ ಪ್ರೋಮೋಗಳು ಹರಿದಾಡುತ್ತಿದ್ದು, ಸಾಕಷ್ಟು ಸುದ್ದಿ ಮಾಡುತ್ತಿವೆ. ನಿರೂಪಕರ ಸೀಟಿನಲ್ಲಿ ಕುಳಿತ ಡಿಂಪಲ್ ಕ್ವೀನ್ ಕೋಟ್ಯಧಿಪತಿ ಶೋ ಬಗ್ಗೆ, ಕೋಟ್ಯಧಿಪತಿ ಶೋ ನಡೆಸಿಕೊಡುವಾಗ ಆಗಿರುವಂತಹ ಅನುಭವದ ಬಗ್ಗೆ, ಪವರ್ ಸ್ಟಾರ್ ವೈಯಕ್ತಿಕ ಜೀವನದ ಬಗ್ಗೆ, ಸಿನಿಮಾ ಜರ್ನಿಯ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಲ್ಲದೇ ಅದಕ್ಕೆ ನಾಲ್ಕು ಆಪ್ಶನ್ ಕೂಡ ಕೊಡುತ್ತಾರೆ. ಅಪ್ಪು ಅವುಗಳಿಗೆಲ್ಲಾ ಸರಿಯಾದ ಉತ್ತರ ಕೊಡಬೇಕು.

ಇದೇ ಭಾನುವಾರ ಸಂಜೆ 7.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಕನ್ನಡದ ಕೋಟ್ಯಧಿಪತಿ' ಪ್ರಸಾರವಾಗಲಿದೆ. ಇದು ನಾಲ್ಕನೇ ಸೀಸನ್‌ ಆಗಿದ್ದು, ಇಲ್ಲಿಯ ತನಕ ಬರೋಬ್ಬರಿ 39 ಎಪಿಸೋಡ್‌ಗಳು ಪ್ರಸಾರವಾಗಿವೆ.

ಕನ್ನಡದ ಕೋಟ್ಯಧಿಪತಿಯ ಮೊದಲ ಮತ್ತು ಎರಡನೇ ಸೀಸನ್‌ನ್ನು ಪುನೀತ್ ರಾಜ್​​ಕುಮಾರ್ ನಿರೂಪಣೆ ಮಾಡಿದ್ದರು. ನಂತ್ರ ಮೂರನೇ ಸೀಸನ್​ ರಮೇಶ್‌ ಅರವಿಂದ್ ನಿರೂಪಿಸಿದ್ದರು. ಇದೀಗ ಮತ್ತೆ ಪುನೀತ್ ಅವರೇ ನಾಲ್ಕನೇ ಸೀಸನ್‌ಗೂ ನಿರೂಪಕರಾಗಿ ಸ್ಪರ್ಧಿಗಳಿಗೆ ಪ್ರಶ್ನೆ ಕೇಳಿದ್ದಾರೆ.

ABOUT THE AUTHOR

...view details