'ಜೋಗಿ' ನಿರ್ದೇಶಕ ಪ್ರೇಮ್ ಇಂದು 41ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 'ಏಕ್ ಲವ್ ಯಾ' ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರಿಂದ ನಾನು ಹುಟ್ಟುಹಬ್ಬದ ದಿನದಂದು ಅಭಿಮಾನಿಗಳಿಗೆ ಸಿಗಲು ಸಾಧ್ಯವಾಗುವುದಿಲ್ಲ ಎಂದು ಅವರು ಇತ್ತೀಚೆಗೆ ಮನವಿ ಮಾಡಿದ್ದರು.
ಆದ್ರೆ, ನಿನ್ನೆರಾತ್ರಿ ಪ್ರೇಮ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದ್ದು, ಪತ್ನಿ ರಕ್ಷಿತಾ ಹಾಗೂ ನಟಿ ರಚಿತಾ ರಾಮ್ ಚಿತ್ರದ ಹಾಡೊಂದಕ್ಕೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.