ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಹೊಸ ಸಿನಿಮಾ ರಾಬರ್ಟ್ ಈಗಾಗಲೇ ಕರ್ನಾಟಕ ಹಾಗೂ ಪುದುಚೆರಿಯಲ್ಲಿ ಶೂಟಿಂಗ್ ಮುಗಿಸಿಕೊಂಡು ಸದ್ಯ ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ನಡೆಸುತ್ತಿದೆ.
ರಾಬರ್ಟ್ ಚಿತ್ರದಲ್ಲಿ ತೆಲುಗಿನ ಸ್ಟಾರ್ ನಟ ಜಗಪತಿ ಬಾಬು ನಟಿಸುತ್ತಿರುವ ಸುದ್ದಿ ಈಗಾಗಲೇ ಬಹಿರಂಗವಾಗಿದೆ. ಆದರೆ, ಈ ಚಿತ್ರದ ನಾಯಕಿಯಾಗಿ ಟಾಲಿವುಡ್ನ ಮೆಹ್ರೆನ್ ಕೌರ್ ದರ್ಶನ್ ಜೊತೆ ರೊಮ್ಯಾನ್ಸ್ ಮಾಡ್ತಾರೆ ಅಂತಾ ಸುದ್ದಿಯಾಗಿತ್ತು. ಆದ್ರೆ ಇದೀಗ ಈ ಊಹೆ ಹುಸಿಯಾಗಿದೆ.
ಇದೀಗ ರಾಬರ್ಟ್ ಚಿತ್ರತಂಡ ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದು, ದರ್ಶನ್ ಜೊತೆ ಮೆಹ್ರೆನ್ ಕೌರ್ ನಟಿಸುತ್ತಿಲ್ಲ, ಬದಲಾಗಿ ಕನ್ನಡದ ಹುಡುಗಿ ಆಶಾ ಭಟ್ ನಾಯಕಿ ಅಂತಾ ಅನೌನ್ಸ್ ಮಾಡಿದೆ.
ಆಶಾ ಭಟ್ ಮೂಲತಃ ಭದ್ರಾವತಿಯವರಾಗಿದ್ದು, ದರ್ಶನ್ ಹೈಟ್ಗೆ ಮ್ಯಾಚ್ ಆಗುವ ಕನ್ನಡದ ಕುವರಿಯಂತೆ. 80 ದೇಶಗಳಲ್ಲಿ ನಡೆಯುವ ಮಿಸ್ ಸುಪ್ರಾ ನ್ಯಾಷನಲ್ನಲ್ಲಿ ಮಿಂಚಿರುವ ಆಶಾ ಭಟ್, ಈ ಚಿತ್ರದ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ.
ಆಶಾ ಭಟ್ಗೆ ಇದು ಚೊಚ್ಚಲ ಸಿನಿಮಾ ಆಗಿದ್ದು, ನಾಳೆಯಿಂದ ರಾಬರ್ಟ್ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. ಆಶಾ ಭಟ್ ರಾಬರ್ಟ್ ಸಿನಿಮಾ ನಾಯಕಿ ಅಂತಾ ಅಫೀಶಿಯಲ್ ಆಗಿ ನಿರ್ದೇಶಕ ತರುಣ್ ಸುಧೀರ್ ತಮ್ಮ ಟ್ವಿಟರ್ ಖಾತೆಯಲ್ಲಿ ಅನೌನ್ಸ್ ಮಾಡಿದ್ದಾರೆ. ಇನ್ನು ಈ ಸಿನಿಮಾವನ್ನು ಹೆಬ್ಬುಲಿ ನಿರ್ಮಾಪಕ ಉಮಾಪತಿ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.