ವಿಭಿನ್ನ ವ್ಯಕ್ತಿತ್ವದ ನಾಲ್ವರು ಹುಡುಗಿಯರ ಕಥೆ ಹೇಳುತ್ತಿರುವ 'ಪುಣ್ಯಾತ್ಗಿತ್ತೀರು' ಸಿನಿಮಾ ಇದೇ ತಿಂಗಳ 30 ರಂದು ಬಿಡುಗಡೆಯಾಗುತ್ತಿದೆ. ಮಮತಾ ರಾಹುತ್, ದಿವ್ಯಶ್ರೀ, ಐಶ್ವರ್ಯ ಹಾಗೂ ಸಂಭ್ರಮ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ವಾರ ತೆರೆಗೆ ಬರ್ತಿದ್ದಾರೆ 'ಪುಣ್ಯಾತ್ಗಿತ್ತೀರು' ... ಮತ್ತೆ ಬೆಳ್ಳಿ ಪರದೆ ಮೇಲೆ 'ಕಾಕ್ರೋಜ್' - ಕಾಕ್ರೋಜ್ ಸುಧೀಂದ್ರ
ಸತ್ಯನಾರಾಯಣ ಮನ್ನೆ ನಿರ್ಮಾಣದ 'ಪುಣ್ಯಾತ್ಗಿತ್ತೀರು' ಆಗಸ್ಟ್ 30 ರಂದು ಬಿಡುಗಡೆಯಾಗುತ್ತಿದೆ. ಮಮತಾ ರಾಹುತ್, ಐಶ್ವರ್ಯ, ದಿವ್ಯಶ್ರೀ, ಸಂಭ್ರಮ, ತಿಥಿ ಖ್ಯಾತಿಯ ಪೂಜಾ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ ದಿನ 'ಸಾಹೋ' ಕೂಡಾ ಬಿಡುಗಡೆಯಾಗುತ್ತಿದ್ದು ಕನ್ನಡ , ಬಾಲಿವುಡ್ ಸಿನಿಮಾ ನಡುವೆ ಫೈಟ್ ನಡೆಯಲಿದೆ.
ಕಾರಣಾಂತರಗಳಿಂದ ಬಿಡುಗಡೆ ದಿನಾಂಕವನ್ನು ಬಹಳ ಸಾರಿ ಮುಂದೂಡಲಾಗಿತ್ತು. ಕೊನೆಗೂ ಆಗಸ್ಟ್ 30 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ತಮ್ಮ ಚಿತ್ರದ ಬಗ್ಗೆ ಮಾತನಾಡಲು ಮಮತಾ ರಾಹುತ್, ಐಶ್ವರ್ಯ, ಸಂಭ್ರಮ, ಖಳನಟನಾಗಿ ನಟಿಸಿರುವ ಕಾಕ್ರೋಜ್ ಸುಧೀಂದ್ರ, ನೃತ್ಯ ನಿರ್ದೇಶಕ ತ್ರಿಭುವನ್, ನಿರ್ಮಾಪಕ ಸತ್ಯನಾರಾಯಣ, ನಿರ್ದೇಶಕ ರಾಜ್ ಎಲ್ಲರೂ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ತಿಥಿ ಖ್ಯಾತಿಯ ಪೂಜಾ ಕೂಡಾ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಸಂಗೀತ ನಿರ್ದೇಶಕ ರಾಮಾನುಜಂ ಕ್ಯಾಚಿ ಟ್ಯೂನ್ ಹಾಕಿದ್ದಾರೆ. ನಿರ್ಮಾಪಕ ಸತ್ಯನಾರಾಯಣ ಮನ್ನೆ ಅದ್ದೂರಿಯಾಗಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರಿಲೀಸ್ಗೂ ಮುಂಚೆ, ಹಿಂದಿ ಹಾಗೂ ತೆಲುಗು ಡಬ್ಬಿಂಗ್ ರೈಟ್ಸ್ ಸೇಲ್ ಆಗಿದ್ದು ನಿರ್ಮಾಪಕರು ಸ್ವಲ್ಪ ಖುಷಿಯಲ್ಲಿದ್ದಾರೆ. ಇನ್ನು ಆಗಸ್ಟ್ 30 ರಂದು 'ಸಾಹೋ' ಬಿಡುಗಡೆಯಾಗುತ್ತಿದ್ದು ಪ್ರಭಾಸ್ ಜೊತೆ ಈ 'ಪುಣ್ಯಾತ್ಗಿತ್ತೀರು' ಹೇಗೆ ಪೈಪೋಟಿ ಮಾಡಲಿದ್ದಾರೆ ಕಾದು ನೋಡಬೇಕು.