ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಅಂದಾಕ್ಷಣ ಥಟ್ ಅಂತಾ ನೆನಪಾಗೋದು ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್. ಈ ದೊಡ್ಮನೆ ಅಂದರೇನೆ ಹಾಗೆ. ಈ ಹೆಸರಿಗೆ ಒಂದು ಗತ್ತು, ಗೌರವ. ಸದ್ಯ ಅಣ್ಣಾವ್ರ ಕುಟುಂಬದ ಮೊದಲ ಹೆಣ್ಣು ಮಗಳು ಹೀರೋಯಿನ್ ಆಗುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.
ಸಹಜವಾಗಿ ಧನ್ಯಾ ರಾಮ್ಕುಮಾರ್ ಸಿನಿಮಾಗೆ ಬರ್ತಾರೆ ಅಂತಾ ಹೇಳಿದಾಗ, ಅಭಿನಯ, ಎಕ್ಸ್ ಪ್ರೆಶನ್ ಹಾಗೂ ತೆರೆ ಮೇಲೆ ಹೇಗೆ ಕಾಣ್ತಾರೆ ಎಂಬ ಕುತೂಹಲ ಗಾಂಧಿನಗರ ಅಲ್ಲದೇ ಸಿನಿಮಾ ಪ್ರಿಯರಲ್ಲಿಯೂ ಇತ್ತು. ಈ ಎಲ್ಲಾ ಪ್ರಶ್ನೆಗಳಿಗೆ ನಿನ್ನ ಸನಿಹಕೆ ಸಿನಿಮಾದ ಟ್ರೈಲರ್ನಲ್ಲಿ ಉತ್ತರ ಸಿಕ್ಕಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿರೋ ನಿನ್ನ ಸನಿಹಕೆ ಸಿನಿಮಾದ ಟ್ರೈಲರ್ ಬಗ್ಗೆ ಸೋದರ ಮಾವಂದಿರಾದ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಮೆಚ್ಚಿಕೊಂಡಿದ್ದಾರೆ.