ಬೆಂಗಳೂರು: ಡಾ.ರಾಜ್ಕುಮಾರ್ ಅಭಿಮಾನಿಗಳ ಪಾಲಿಗೆ ದೇವರು, ಅಣ್ಣಾವ್ರ ಹಾದಿಯಲ್ಲೇ ಅವರ ಮಕ್ಕಳು ಕೂಡ ಸಾಗಿದ್ದಾರೆ. ಈಗ ಅಭಿಮಾನಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಅಣ್ಣಾವ್ರ ಮಕ್ಕಳು ಸಜ್ಜುಗೊಂಡಿದ್ದಾರೆ.
ಪ್ಲಾಸ್ಟಿಕ್ ಬಿಡಿ ಬಟ್ಟೆ ಬ್ಯಾಗ್ ಬಳಸಿ: ಅಭಿಮಾನಿಗಳಲ್ಲಿ ಪುನೀತ್ ರಾಜಕುಮಾರ್ ಮನವಿ - punith rajkumar says use cloth bags instead of plastic bags
ಪ್ಲಾಸ್ಟಿಕ್ ಬ್ಯಾಗ್ ಬದಲಿಗೆ ಬಟ್ಟೆ ಬ್ಯಾಗ್ ಬಳಸುವಂತೆ ಅಭಿಮಾನಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮನವಿ ಮಾಡಿದ್ದಾರೆ.

ನಿತ್ಯವೂ ಪ್ಲಾಸ್ಟಿಕ್ ಬ್ಯಾಗ್ಗಳ ಬದಲಿಗೆ ಬಟ್ಟೆ ಬ್ಯಾಗ್ ಬಳಕೆ ಮಾಡುವಂತೆ ಅಭಿಮಾನಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೊರಟಿದ್ದಾರೆ. ಅಣ್ಣಾವ್ರ ಹೆಸರಿನಲ್ಲಿ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ರೆಡಿ ಮಾಡಿಸಿದ್ದಾರೆ. ಬಟ್ಟೆ ಬ್ಯಾಗಿನ ಮೇಲೆ ಅಣ್ಣಾವ್ರ ಪೋಟೋ ಪ್ರಿಂಟ್ ಮಾಡಿಸಿದ್ದು, ಪ್ರತಿದಿನ ಅಣ್ಣಾವ್ರ ಮನೆಗೆ ಭೇಟಿ ನೀಡುವವರಿಗೆ ಬಟ್ಟೆ ಬ್ಯಾಗ್ ಉಡುಗೊರೆಯಾಗಿ ನೀಡುವ ಮೂಲಕ ಪ್ಲಾಸ್ಟಿಕ್ ತ್ಯಜಿಸುವಂತೆ ಅಣ್ಣಾವ್ರ ಮಕ್ಕಳು ಮನವಿ ಮಾಡ್ತಿದ್ದಾರೆ. ಇನ್ನು ಈ ಕೈಚೀಲದ ಐಡಿಯಾ ಮೊದಲು ರಾಘಣ್ಣನಿಗೆ ಹೊಳೆದಿದ್ದು, ರಾಘಣ್ಣನ ಕಾರ್ಯಕ್ಕೆ ಶಿವಣ್ಣ ಹಾಗೂ ಅಪ್ಪು ಕೂಡ ಕೈಜೋಡಿಸಿದ್ದಾರೆ. ಅಲ್ಲದೆ ಪ್ಲಾಸ್ಟಿಕ್ ಬಿಟ್ಟು ಬಟ್ಟೆ ಬ್ಯಾಗ್ಗಳನ್ನೇ ಬಳಸಿ ಅಭಿಯಾನದ ಬಗ್ಗೆ ಎಕ್ಸಕ್ಲೂಸಿವ್ ಆಗಿ ಈಟಿವಿ ಭಾರತ ಜೊತೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮಾತನಾಡಿದ್ದಾರೆ.