ಕನ್ನಡ ಚಿತ್ರರಂಗದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇಷ್ಟ ಆಗುವ ನಟ ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಪುನೀತ್ ರಾಜ್‍ಕುಮಾರ್ ಕನ್ನಡದ ಸ್ಟಾರ್ ನಟರಾಗಿದ್ದರೂ ಕೂಡ ತಂದೆ ರಾಜ್‍ಕುಮಾರ್ ರೀತಿ ಸರಳ ವ್ಯಕ್ತಿತ್ವದಿಂದ ಇಷ್ಟ ಆಗ್ತಾರೆ. ಈ ಸರಳತೆಯಿಂದಲೇ ಅಭಿಮಾನಿಗಳ ಹೃದಯ ಕದ್ದಿರುವ ಪುನೀತ್ ರಾಜ್‍ಕುಮಾರ್, ಬುದ್ಧಿಮಾಂದ್ಯ ಅಭಿಮಾನಿಯ ಕೊನೆಯ ಆಸೆ ಈಡೇರಿಸಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋನಿನಕೆರೆಯ ಸುರೇಶ್ ಹಾಗೂ ಅನುಸೂಯಮ್ಮ ದಂಪತಿಯ ಎರಡನೇ ಮಗಳಾಗಿರುವ ದೇವಿಪ್ರಿಯಾ ಬುದ್ಧಿಮಾಂದ್ಯಳಾಗಿದ್ದಾಳೆ. ಹುಟ್ಟಿದಾಗಿನಿಂದ ಬುದ್ಧಿಮಾಂದ್ಯಳಾಗಿರುವ ದೇವಿಪ್ರಿಯಾ, ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿ. ದೇವಿಪ್ರಿಯಾಗೆ ಅಪ್ಪು ಅಂದರೆ ಅಚ್ಚುಮೆಚ್ಚು.
ದೇವಿಪ್ರಿಯಾ ಜೊತೆ ಪುನೀತ್ ರಾಜ್‍ಕುಮಾರ್ ರಾ ದೇವಿಪ್ರಿಯಾಗೆ ಊಟ ಅಥವಾ ಬೇರೆ ಕಡೆ ಊರಿಗೆ ಹೋಗಬೇಕಾದ್ರೆ ಪುನೀತ್ ರಾಜ್‍ಕುಮಾರ್ ಸಿನಿಮಾ ಹಾಗೂ ಫೋಟೋ ಔಷಧಿಯಂತೆ. ಹೀಗಾಂತ ಇವ್ರ ತಂದೆ-ತಾಯಿ ಹೇಳುತ್ತಾರೆ. 16 ವರ್ಷದ ದೇವಿಪ್ರಿಯಾ ಕೆಲವೇ ತಿಂಗಳಗಳ ಕಾಲ ಮಾತ್ರ ಬದುಕುತ್ತಾಳೆ ಅಂತಾ ವೈದ್ಯರು ಹೇಳಿದ್ದಾರೆ.
ಸಾವಿನ ದವಡೆಯಲ್ಲಿರುವ ಈ ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಪುನೀತ್! ಆದರೆ ದೇವಿಪ್ರಿಯಾಗೆ ಕೊನೆಯ ಬಾರಿ ಪುನೀತ್ ರಾಜ್‍ಕುಮಾರ್ ಅವ್ರನ್ನು ನೋಡಬೇಕು ಮತ್ತು ಭೇಟಿ ಮಾಡಬೇಕು ಎಂಬ ಆಸೆಯಾಗಿತ್ತಂತೆ. ಈ ಆಸೆಯನ್ನು ಅಪ್ಪು ಯೂತ್ ಬ್ರಿಗೇಡ್ನ ಮುರಳಿ ಸಾಹಯದಿಂದ ನಿನ್ನೆ ಪುನೀತ್ ರಾಜ್‍ಕುಮಾರ್ ಅವ್ರನ್ನು ಭೇಟಿ ಮಾಡುವ ಮೂಲಕ ದೇವಿಪ್ರಿಯಾ ಆಸೆಯನ್ನು ಈಡೇರಿಸಿದ್ದಾರೆ.
ಅಪ್ಪು ಕೂಡ ಈ ಅಭಿಮಾನಿಯ ಅಭಿಮಾನಕ್ಕೆ ಮನಸೋತು ಬಟ್ಟೆ ಹಾಗೂ ಸಿಹಿ ತಿಂಡಿಯನ್ನ ನೀಡಿದ್ದಾರೆ. ಅಷ್ಟೇ ಅಲ್ಲದೆ ದೇವಿಪ್ರಿಯಾ ಜೊತೆ ಫೋಟೋ ತೆಗೆಸುವ ಮೂಲಕ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸಿದ್ದಾರೆ.