ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಎರಡನೇ ಕಾಂಬಿನೇಷನ್ ಸಿನಿಮಾ. ಹಾಗೂ ಸಂತೋಷ್ ಅವರ ಮೂರನೇ ಚಿತ್ರ ಕೂಡ ಹೌದು. ಇವರ ಹಿಂದಿನ ‘ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಹಾಗೂ ರಾಜಕುಮಾರ’ ಸಿನಿಮಾಗಳು ಪ್ರಚಂಡ ಜಯಭೇರಿ ಬಾರಿಸಿವೆ.
ವರ್ಷದ ಕೊನೆಯಲ್ಲಿ 'ಯುವರತ್ನ' ಆಗಮನ - undefined
ಸದ್ಯಕ್ಕೆ ಧಾರವಾಡ, ಮಂಗಳೂರು, ಬೆಂಗಳೂರಿನಲ್ಲಿ ಚಿತ್ರಕ್ಕೆ ಕೇವಲ 20 ಪರ್ಸೆಂಟ್ ಅಷ್ಟೇ ಚಿತ್ರೀಕರಣ ನಡೆದಿದೆ. ಅಪ್ಪು ಅಭಿಮಾನಿಗಳಿಗೆ ಈ ವರ್ಷದ ಕೊನೆಯಲ್ಲಿ ಅಂದರೆ ಕ್ರಿಸ್ಮಸ್ ಹಬ್ಬಕ್ಕೆ ‘ಯುವರತ್ನ’ ತೆರೆಯ ಮೇಲೆ ತರಲು ತಯಾರಿ ನಡೆಸುತ್ತಿದ್ದಾರೆ ನಿರ್ದೇಶಕರು.
![ವರ್ಷದ ಕೊನೆಯಲ್ಲಿ 'ಯುವರತ್ನ' ಆಗಮನ](https://etvbharatimages.akamaized.net/etvbharat/prod-images/768-512-3339089-thumbnail-3x2-puneeth.jpg)
ಈ ಯಶಸ್ವಿ ನಿರ್ದೇಶಕ ಎಂದಿನಂತೆ ಈ ಬಾರಿಯೂ ನಿಧಾನವಾಗಿ, ಪ್ರಧಾನವಾದ ಸಿನಿಮಾ ಕೊಡುವುದರಲ್ಲಿ ಸಿದ್ಧರಾಗಿದ್ದಾರೆ. ‘ಯುವರತ್ನ’ಕ್ಕೆ 10 ಹಂತಗಳಲ್ಲಿ ಚಿತ್ರೀಕರಣ ಮಾಡಲಿದ್ದಾರೆ. ಸದ್ಯಕ್ಕೆ ಧಾರವಾಡ, ಮಂಗಳೂರು, ಬೆಂಗಳೂರಿನಲ್ಲಿ ಚಿತ್ರಕ್ಕೆ ಕೇವಲ 20 ಪರ್ಸೆಂಟ್ ಅಷ್ಟೇ ಚಿತ್ರೀಕರಣ ನಡೆದಿದೆ. ಅಪ್ಪು ಅಭಿಮಾನಿಗಳಿಗೆ ಈ ವರ್ಷದ ಕೊನೆಯಲ್ಲಿ ಅಂದರೆ ಕ್ರಿಸ್ಮಸ್ ಹಬ್ಬಕ್ಕೆ ‘ಯುವರತ್ನ’ ತೆರೆಯ ಮೇಲೆ ತರಲು ತಯಾರಿ ನಡೆಸುತ್ತಿದ್ದಾರೆ.
ಇನ್ನು ಈ ಚಿತ್ರದಲ್ಲಿ ಪುನೀತ್ಗೆ ನಾಯಕಿಯಾಗಿ ಸಯೇಶಾ ಸೈಗಲ್ ಈಗಾಗಲೇ ಆಯ್ಕೆಯಾಗಿದ್ದಾರೆ. ಚಿತ್ರಕ್ಕೆ ಮತ್ತೊಬ್ಬ ನಾಯಕಿಯ ಅವಶ್ಯಕತೆ ಇದೆ ಎನ್ನುತ್ತಾರೆ ಸಂತೋಷ್ ಆನಂದ್ ರಾಮ್.