ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿ ನಿರ್ಮಾಣದ ಚೊಚ್ಚಲ ಸಿನಿಮಾ ‘ಕವಲು ದಾರಿ’ 50ನೇ ದಿವಸಕ್ಕೆ ಕಾಲಿಟ್ಟಿದೆ. ಏಪ್ರಿಲ್ 12 ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಪ್ರಾರಂಭದಿಂದಲೂ ಚಿತ್ರಕ್ಕೆ ಒಳ್ಳೆಯ ಮಾರುಕಟ್ಟೆ ಹಾಗೂ ಡಿಜಿಟಲ್ ಪ್ಲಾಟ್ಫಾರ್ಮ್ ಲಭ್ಯವಾಗಿತ್ತು.ಸದ್ಯ ವೀರೇಶ್ ಮಿನಿ ಸೇರಿದಂತೆ ಕೆಲವು ಮಲ್ಟಿಪ್ಲೆಕ್ಸ್ಲ್ಲಿ ಈ ಚಿತ್ರ ಪ್ರದರ್ಶನ 50 ದಿನ ದಾಟಿ ಮುಂದುವರೆದಿದೆ.
'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ನಂತರ ನಿರ್ದೇಶಕ ಹೇಮಂತ್ ರಾವ್ ಅವರಿಗೆ ಇದರಿಂದ ಎರಡನೇ ಗೆಲುವು ಸಂದಂತಾಗಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ಚರಣ್ ರಾಜ್ ಹಾಗೂ ನಟ ಅನಂತ್ ನಾಗ್ ಈ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಧೀರಜ್ ಫಿಲಂಸ್ ಚಿತ್ರ ತಂಡವು ಈ ಚಿತ್ರವನ್ನು ಬಿಡುಗಡೆ ಮಾಡಿತ್ತು.