ಸ್ಯಾಂಡಲ್ವುಡ್ನಲ್ಲಿ ಬಾಲ ನಟನಾಗಿ ಹಾಗೂ ಕಿರುತೆರೆ ನಟನಾಗಿ ಗಮನ ಸೆಳೆದ ಕಲಾವಿದ ವಿಕ್ರಮ್ ಸೂರಿ. ಎಳೆಯರು ನಾವು ಗೆಳೆಯರು ಸಿನಿಮಾ ಮೂಲಕ ನಿರ್ದೇಶಕನಾಗಿರುವ ವಿಕ್ರಮ್ ಸೂರಿ, ಈಗ ಲಾಕ್ಡೌನ್ ಟೈಮಲ್ಲಿ ಚೌಕಬಾರ ಎಂಬ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಪತ್ನಿ ನಮಿತಾ ರಾವ್ ನಟಿಸಿರುವ ಚೌಕಬಾರ ಚಿತ್ರದ ಮೊದಲ ಪೋಸ್ಟರ್ಅನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡಿ, ಸಿನಿಮಾ ಪ್ರೀತಿ ಬಗ್ಗೆ ಹಂಚಿಕೊಂಡಿದ್ರು.
ವಿಕ್ರಮ್ ಸೂರಿ ನಿರ್ದೇನದ ಚೌಕಬಾರ ಸಿನಿಮಾಕ್ಕೆ ಪವರ್ ಸ್ಟಾರ್ ಸಾಥ್! - puneeth rajkumar
ಎಳೆಯರು ನಾವು ಗೆಳೆಯರು ಸಿನಿಮಾ ಮೂಲಕ ನಿರ್ದೇಶಕನಾಗಿರುವ ವಿಕ್ರಮ್ ಸೂರಿ, ಈಗ ಲಾಕ್ಡೌನ್ ಟೈಮಲ್ಲಿ ಚೌಕಬಾರ ಎಂಬ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಪತ್ನಿ ನಮಿತಾ ರಾವ್ ನಟಿಸಿರುವ ಚೌಕಬಾರ ಚಿತ್ರದ ಮೊದಲ ಪೋಸ್ಟರ್ಅನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡಿದ್ದಾರೆ.
ಭಾವನಾ ಕಾದಂಬರಿಯನ್ನು ಆಧರಿಸಿರುವ ಚೌಕಬಾರ ಚಿತ್ರವನ್ನು ವಿಕ್ರಮ್ ಸೂರಿ ನಿರ್ದೇಶಿಸಿದ್ದರೆ, ಅವರ ಪತ್ನಿ ನಮಿತಾ ರಾವ್ ನಟಿಸಿ, ನಿರ್ಮಿಸಿದ್ದಾರೆ. ನಾಯಕನಾಗಿ ಭರತ್ ಅಭಿನಯಿಸಿದ್ರೆ, ಭಾವನಾ ಎಂಬ ಯುವ ನಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಜನರೇಷನ್ ಗ್ಯಾಪ್ ಕಥೆ ಚೌಕಬಾರ ಆಗಿದ್ದು, ಹಿರಿಯ ಸಾಹಿತಿಗಳಾದ ಡಾ. ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣ್ ರಾವ್ ಅವರು ಸೊಗಸಾಗಿ ಹಾಡುಗಳನ್ನು ಬರೆದಿದ್ದಾರೆ. ಜೊತೆಗೆ ಹರೀಶ್ ಭಟ್ ಮತ್ತು ವಿಕ್ರಮ್ ಸೂರಿ ಅವರ ಸಾಹಿತ್ಯವೂ ಇದೆ. ಅಶ್ವಿನ್ ಪಿ. ಕುಮಾರ್ ಸಂಗೀತವಿದ್ದು, ಶಶಿ ಅವರ ಸಂಕಲನ, ರವಿ ರಾಜ್ ಅವರ ಛಾಯಾಗ್ರಹಣವಿದೆ.