ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರು ಹಾಗೂ ನಿರ್ಮಾಪಕರ ಅಚ್ಚುಮೆಚ್ಚಿನ ಹೀರೋ ಆಗಿದ್ದ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ (Powerstar Puneeth Rajkumar). ಈ ದೊಡ್ಮನೆ ಮಗನ ಅಕಾಲಿಕ ಮರಣದಿಂದ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ನಷ್ಟ ಆಗಿದೆ. ಪುನೀತ್ ರಾಜ್ ಕುಮಾರ್ (Puneeth Rajkumar) ಒಪ್ಪಿಕೊಂಡಿದ್ದ ಹಲವು ಪ್ರಾಜೆಕ್ಟ್ಗಳು ಅರ್ಧಕ್ಕೆ ನಿಂತಿವೆ.
ಇನ್ನು ಪವರ್ ಸ್ಟಾರ್ (Puneeth Rajkumar) ಅಭಿನಯದ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾ ಜೇಮ್ಸ್ (James movie). ಈ ಚಿತ್ರ ಸ್ಯಾಂಡಲ್ವುಡ್ನಲ್ಲಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದೆ. ಚೇತನ್ ಕುಮಾರ್ ನಿರ್ದೇಶನ ಮಾಡ್ತಾ ಇರೋ ಜೇಮ್ಸ್ ಚಿತ್ರದ (James movie) ಬಹುತೇಕ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಪುನೀತ್ ರಾಜ್‍ಕುಮಾರ್ (Puneeth Rajkumar) ಇಹಲೋಕ ತ್ಯಜಿಸಿದ್ದಾರೆ.
ಜೇಮ್ಸ್ ಚಿತ್ರದ ಮೇಕಿಂಗ್ ವಿಡಿಯೋ ರಿವೀಲ್ ಜೇಮ್ಸ್ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯಗಳಿವೆ. ಅಪ್ಪು ಸಿನಿಮಾದಲ್ಲಿ (Appu movies) ಅದ್ದೂರಿತನ ಇರುತ್ತದೆ. ಅದಕ್ಕೂ ಮೊದಲು ಸದ್ಯ ಜೇಮ್ಸ್ ಚಿತ್ರದ (James movie) ಮೇಕಿಂಗ್ ವಿಡಿಯೋವೊಂದು ವೈರಲ್ ಆಗಿದೆ. ಪುನೀತ್ ಅವರು ಫಾಲ್ಸ್ (Falls) ಬಳಿ ನಿಂತಿದ್ದಾರೆ. ಈ ವೇಳೆ, ಡ್ರೋನ್ನಲ್ಲಿ ವಿಡಿಯೋ ಶೂಟ್ (Drone video shoot) ಮಾಡಲಾಗಿದೆ. ಜೇಮ್ಸ್ ಚಿತ್ರೀಕರಣದ ವೇಳೆ ತೆಗೆದ ವಿಡಿಯೋ ಇದಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ.
ಜೇಮ್ಸ್ ಚಿತ್ರದ (James movie) ಶೂಟಿಂಗ್ ಮುಕ್ತಾಯ ಆಗಿತ್ತು. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಸಾಂಗ್ ಶೂಟಿಂಗ್ ಮಾಡಲು ನ.8 ರಿಂದ ಪುನೀತ್ ರಾಜ್‍ಕುಮಾರ್ (Puneeth Rajkumar) ಅವರು ಡೇಟ್ಸ್ ನೀಡಿದ್ದರು. ಆದರೆ, ಈಗ ಅಪ್ಪುನೇ ಇಲ್ಲ. ಇನ್ನು ಪವರ್ ಸ್ಟಾರ್ ಪಾತ್ರದ ಡಬ್ಬಿಂಗ್ಗೆ ಶಿವರಾಜ್ ಕುಮಾರ್ (Shivaraj kumar) ಕೈಯಲ್ಲಿ ಡಬ್ಬಿಂಗ್ (Dubbing) ಮಾಡಿಸುವ ಯೋಚನೆ ಚಿತ್ರತಂಡಕ್ಕಿದೆ. ಇನ್ನು ಪವರ್ ಸ್ಟಾರ್ ಹುಟ್ಟು ಹಬ್ಬಕ್ಕೆ (Powerstar Birthday), ಅಂದರೆ ಮಾರ್ಚ್ 27ರಂದು ಸಿನಿಮಾ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿದೆ. ಸದ್ಯ ಫಾಲ್ಸ್ ಬಳಿ ನಿಂತಿರುವ ವಿಡಿಯೋ ಸಖತ್ ವೈರಲ್ (Video Viral) ಆಗುತ್ತಿದೆ.