ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಬಹು ನಿರೀಕ್ಷಿತ ಯುವರತ್ನ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ.
ಬಹುನಿರೀಕ್ಷಿತ 'ಯುವರತ್ನ' ಟ್ರೇಲರ್ ರಿಲೀಸ್: ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರಿಂದ ವೀಕ್ಷಣೆ! - ಯುವರತ್ನ ಟ್ರೇಲರ್
ಸ್ಯಾಂಡಲ್ವುಡ್ನ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಟ್ರೇಲರ್ ರಿಲೀಸ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದಾರೆ.
Yuvarathnaa movie trailer out
ಹೊಂಬಾಳೆ ಫಿಲಂ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬಂದಿದ್ದು, ಸಂತೋಷ್ ಆನಂದ್ರಾಮ್ ಚಿತ್ರದ ನಿರ್ದೇಶನ ಮಾಡಿದ್ದಾರೆ. ಪಂಚಿಂಗ್ ಡೈಲಾಗ್, ಆ್ಯಕ್ಷನ್ ಮೂಲಕ ಈಗಾಗಲೇ ಯುವರತ್ನ ಟ್ರೇಲರ್ ಸದ್ದು ಮಾಡುತ್ತಿದ್ದು, ಕಾಲೇಜ್ ವಿದ್ಯಾರ್ಥಿಯಾಗಿ ಅಪ್ಪು ಕಾಣಿಸಿಕೊಂಡಿದ್ದಾರೆ.
ಶಿಕ್ಷಣ ರಂಗದ ಸುತ್ತಲೂ ಚಿತ್ರದ ಕಥೆ ಹೆಣೆಯಲಾಗಿದ್ದು, ನಟ ಧನಂಜಯ್, ತಮಿಳು ನಟಿ ಶಯೇಷಾ, ಪ್ರಕಾಶ್ ರಾಜ್, ವಸಿಷ್ಠ ಸಿಂಹ, ದಿಗಂತ್, ಸೋನು ಗೌಡ ಚಿತ್ರದಲ್ಲಿದ್ದಾರೆ. ಸಿನಿಮಾ ಏಪ್ರಿಲ್.1ರಂದು ಕನ್ನಡ ಹಾಗೂ ತೆಲಗುನಲ್ಲಿ ಧೂಳೆಬ್ಬಿಸಲು ರೆಡಿಯಾಗಿದೆ.