ಕರ್ನಾಟಕ

karnataka

ETV Bharat / sitara

ಆಯುಧಪೂಜೆಯಂದು ಪುನೀತ್ ಅಭಿಮಾನಿಗಳಿಗೆ 'ಯುವರತ್ನ' ತಂಡದಿಂದ ಭರ್ಜರಿ ಗಿಫ್ಟ್​​...! - ಪುನೀತ್ ಹೊಸ ಸಿನಿಮಾ

ಅಕ್ಟೋಬರ್​ 7 ರ ಆಯುಧಪೂಜೆ ದಿನದಂದು ಪುನೀತ್ ರಾಜ್​ಕುಮಾರ್ ಅಭಿನಯದ 'ಯುವರತ್ನ' ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ಈ ವಿಷಯವನ್ನು ಸ್ವತ: ಪುನೀತ್ ರಾಜ್​​ಕುಮಾರ್ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಪುನೀತ್ ಜರ್ಮನಿಯಲ್ಲಿದ್ದು ನಾಳೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.

'ಯುವರತ್ನ'

By

Published : Oct 5, 2019, 2:47 PM IST

ಪವರ್ ಸ್ಟಾರ್ ಪುನೀತ್ ರಾಜ್​​​​​​​​​​​​​​​​​ಕುಮಾರ್ ಅಭಿನಯದ ಬಹುನಿರೀಕ್ಷಿತ 'ಯುವರತ್ನ' ಚಿತ್ರತಂಡದಿಂದ ಅಭಿಮಾನಿಗಳಿಗೆ ಗುಡ್​​​ನ್ಯೂಸ್​​. ಆ ದಿನ 'ಯುವರತ್ನ' ಸಿನಿಮಾದ ಟೀಸರನ್ನು ಚಿತ್ರತಂಡ ಬಿಡುಗಡೆ ಮಾಡುತ್ತಿದೆ. ಈ ಮೂಲಕ ಚಿತ್ರತಂಡ ಅಪ್ಪು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್​​ ನೀಡುತ್ತಿದೆ.

ಬಹಳ ದಿನಗಳಿಂದ 'ಯುವರತ್ನ' ಟೀಸರ್​​​ ನೋಡಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ಪವರ್ ಸ್ಟಾರ್​ ಅಭಿಮಾನಿಗಳಿಗೆ ಇದು ನಿಜಕ್ಕೂ ಸಂತೋಷದ ವಿಷಯ. ಟೀಸರ್ ಬಿಡುಗಡೆ ಆಗುತ್ತಿರುವ ವಿಷಯವನ್ನು ಸ್ವತಃ ಪುನೀತ್ ರಾಜ್​​ಕುಮಾರ್ ಸೆಲ್ಫಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಪುನೀತ್ ರಾಜ್​​ಕುಮಾರ್ ಕುಟುಂಬದೊಂದಿಗೆ ಜಮರ್ನಿಯಲ್ಲಿ ದಸರಾ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿಂದಲೇ ವಿಡಿಯೋ ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪುನೀತ್ ಶೇರ್ ಮಾಡಿದ್ದಾರೆ. ಆಯುಧ ಪೂಜೆ ಹಬ್ಬದಂದು ಸಂಜೆ 5.30 ಕ್ಕೆ ಸಂತೋಷ್ ಚಿತ್ರಮಂದಿರದಲ್ಲಿ 'ಯುವರತ್ನ' ಟೀಸರ್ ಲಾಂಚ್ ಆಗುತ್ತಿದೆ. ಚಿತ್ರವನ್ನು ಕೆಜಿಎಫ್​​ ನಿರ್ಮಿಸಿದ್ದ ವಿಜಯ್ ಕಿರಂಗದೂರ್ ನಿರ್ಮಿಸಿದ್ದರೆ ಸಂತೋಷ್ ಆನಂದ್ ರಾಮ್ ನಿರ್ದೇಶಿಸಿದ್ದಾರೆ. 'ರಾಜಕುಮಾರ' ಚಿತ್ರಕ್ಕೆ ಹಾರೈಸಿದ ರೀತಿಯೇ ಈ ಚಿತ್ರಕ್ಕೂ ಹಾರೈಸಿ ಎಂದು ಪುನೀತ್ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ. ಅಪ್ಪು ಅಕ್ಟೋಬರ್ 6 ರಂದು ಬೆಂಗಳೂರಿಗೆ ವಾಪಸಾಗಲಿದ್ದಾರೆ.

ABOUT THE AUTHOR

...view details