ಕರ್ನಾಟಕ

karnataka

ETV Bharat / sitara

ಜೇಮ್ಸ್ ಚಿತ್ರದ ಟ್ರೇಡ್ ಮಾರ್ಕ್ ರಿಲೀಸ್​.. ಸಖತ್ತಾಗಿದೆ ಫವರ್ ಫುಲ್ ಸಾಂಗ್.. - ಜೇಮ್ಸ್ ಚಿತ್ರದ ಹೊಸ ಹಾಡು

ಪುನೀತ್ ರಾಜ್​ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಟ್ರೇಡ್​ಮಾರ್ಕ್ ಹಾಡು ರಿಲೀಸ್ ಆಗಿದೆ..

ಜೇಮ್ಸ್ ಚಿತ್ರದ ಟ್ರೇಡ್ ಮಾರ್ಕ್ ರಿಲೀಸ್
ಜೇಮ್ಸ್ ಚಿತ್ರದ ಟ್ರೇಡ್ ಮಾರ್ಕ್ ರಿಲೀಸ್

By

Published : Mar 1, 2022, 12:28 PM IST

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಹೈವೋಲ್ಟೇಜ್ ಸಿನಿಮಾ ಜೇಮ್ಸ್. ಸದ್ಯ ಟೀಸರ್ ಹಾಗೂ ಪೋಸ್ಟರ್​​ಗಳಿಂದಲೇ ಹವಾ ಕ್ರಿಯೇಟ್ ಮಾಡಿರೋ ಜೇಮ್ಸ್ ಚಿತ್ರದ ಮೊದಲ ಟ್ರೇಡ್ ಮಾರ್ಕ್ ಹಾಡು ರಿಲೀಸ್ ಆಗಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಜೇಮ್ಸ್ ಚಿತ್ರತಂಡ ಪವರ್ ಫುಲ್ ಹಾಡನ್ನ ಬಿಡುಗಡೆ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ.

ಈ ಟ್ರೇಡ್ ಮಾರ್ಕ್ ಹಾಡನ್ನು, ಅದಿತಿ ಸಾಗರ್, ಚಂದನ್ ಶೆಟ್ಟಿ, ಶರ್ಮಿಳಾ, ಯುವರಾಜ್​ಕುಮಾರ್ ಹಾಗೂ ಚರಣ್​ರಾಜ್, ಎಂಸಿ ವಿಕ್ಕಿ ಹಾಡಿದ್ದಾರೆ. ಚೇತನ್ ಕುಮಾರ್ ಬರೆದಿರುವ ಸಾಹಿತ್ಯಕ್ಕೆ ಚರಣ್​ರಾಜ್ ಸಂಗೀತ ಸಂಯೋಜಿಸಿದ್ದಾರೆ. ಇದು ಕೇವಲ ಹಾಡು ಆಗಿರದೆ, ಅಭಿಮಾನಿಗಳ ಅಪ್ಪಟ ಫ್ಯಾನ್ಸ್​ಗಳ ಧ್ವನಿಯಾಗಿದೆ. ನಿರ್ದೇಶಕ ಚೇತನ್ ಅಭಿಮಾನಿಗಳ ದೃಷ್ಟಿಯಿಂದ ಬರೆದಿರುವ ಮೈ ಜುಮ್ಮೆನಿಸುವ ಹಾಡು ಇದಾಗಿದೆ.

ಪಿಆರ್​ಕೆ ಯುಟ್ಯೂಬ್​ನಲ್ಲಿ ಜೇಮ್ಸ್ ಟ್ರೇಡ್​ಮಾರ್ಕ್ ಹಾಡಿನ ಕನ್ನಡ ಅವತರಣಿಕೆ ರಿಲೀಸ್ ಆಗಿದೆ. ಇನ್ನು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಜೇಮ್ಸ್ ಟ್ರೇಡ್ ಮಾರ್ಕ್ ಹಾಡು ಬಿಡುಗಡೆ ಆಗಿದೆ.

ವಿಶೇಷ ಅಂದ್ರೆ, ಯುವರಾಜ್​ಕುಮಾರ್ ಈ ಹಾಡನ್ನ ಹಾಡಿದ್ದಾರೆ. ಅಷ್ಟೇ ಅಲ್ಲ, ಸ್ಯಾಂಡಲ್​ವುಡ್​ನ ಮುಂಚೂಣಿಯ ನಾಯಕಿಯರಾದ ರಚಿತಾ ರಾಮ್, ಆಶಿಕಾ ರಂಗನಾಥ್ ಹಾಗೂ ಶ್ರೀಲೀಲಾ ಈ ಹಾಡಿನಲ್ಲಿ ಸಖತ್ ಸ್ಟೆಪ್ ಹಾಕಿದ್ದಾರೆ.

ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್‌-ಕಟ್ ಹೇಳಿರುವ ಜೇಮ್ಸ್​​ಗೆ ಕಿಶೋರ್ ಪತ್ತಿಕೊಂಡ ಬಂಡವಾಳ ಹೂಡಿದ್ದಾರೆ. ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಶರತ್ ಕುಮಾರ್, ತೆಲುಗು ನಟ ಶ್ರೀಕಾಂತ್,ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ಸೇರಿ ದೊಡ್ಡ ತಾರ ಬಳಗ ಈ‌ ಚಿತ್ರದಲ್ಲಿದೆ. ಮಾರ್ಚ್ 17ಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಜೇಮ್ಸ್ ರಿಲೀಸ್ ಆಗಲಿದೆ. ಇನ್ನು ಜೇಮ್ಸ್ ಚಿತ್ರದ ಟ್ರೇಡ್ ಮಾರ್ಕ್ ಹಾಡನ್ನ ರಾಜ್ಯಾದ್ಯಂತ ಅಭಿಮಾನಿಗಳು ಎಲ್‌ಇಡಿ ಸ್ಕ್ರೀನ್‌ಗಳನ್ನ ಹಾಕುವ ಮೂಲಕ ದೊಡ್ಡ ಪರದೆಮೇಲೆ ನೋಡಿ ಸಂಭ್ರಮಿಸಿದ್ದಾರೆ.

ABOUT THE AUTHOR

...view details