ದಾವಣಗೆರೆ : ಯುವಕರು ಈ ನಾಡಿನ ನಾಯಕರು, ಅವರೇ ಈ ದೇಶದ ಶಕ್ತಿಯಾಗುತ್ತಾರೆ ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವಕರಲ್ಲಿ ಉತ್ಸಾಹ ತುಂಬಿದ್ದಾರೆ.
ಮಾಡುವ ಕೆಲಸದ ಮೇಲೆ ನಂಬಿಕೆ ಇರಲಿ; ಯುವಕರಿಗೆ ಪುನೀತ್ ರಾಜಕುಮಾರ್ ಕರೆ - ನಟ ಪುನೀತ್ ರಾಜ್‍ಕುಮಾರ್ ಸುದ್ದಿ
ಈ ದೇಶದ ಯುವಕರು ಈ ದೇಶವನ್ನು ಮುನ್ನಡೆಸುತ್ತಾರೆ, ಪ್ರತಿಯೊಬ್ಬರಿಗೂ ನಾವು ರೂಪಿಸಿಕೊಳ್ಳವ ಬದುಕು ಮುಖ್ಯ ಆಗಿರುತ್ತದೆ. ನಾವು ಮಾಡುವ ಕೆಲಸದ ಮೇಲೆ ನಂಬಿಕೆ ಇರಬೇಕು, ನಂಬಿಕೆ ವಿಶ್ವಾಸವನ್ನು ಇಟ್ಟುಕೊಂಡು ನಮ್ಮ ಜೀವನ ರೂಪಿಸಿಕೊಳ್ಳುತ್ತ ಹೋಗ್ಬೇಕು ಎಂದು ಪುನೀತ್ ರಾಜ್‍ಕುಮಾರ್ ಹೇಳಿದ್ದಾರೆ.
![ಮಾಡುವ ಕೆಲಸದ ಮೇಲೆ ನಂಬಿಕೆ ಇರಲಿ; ಯುವಕರಿಗೆ ಪುನೀತ್ ರಾಜಕುಮಾರ್ ಕರೆ ಯುವಕರು ದೇಶದ ಶಕ್ತಿಯಾಗುತ್ತಾರೆ : ಪುನೀತ್ ರಾಜ್‍ಕುಮಾರ್](https://etvbharatimages.akamaized.net/etvbharat/prod-images/768-512-10262457-193-10262457-1610783803309.jpg)
ನಿನ್ನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿಯ ಪಂಚಮಸಾಲಿ ಮಠದಲ್ಲಿ ನಡೆದ ಹರ ಜಾತ್ರೆಯಲ್ಲಿ ಮಾತನಾಡಿದ ಅವರು, ಯುವಕರು ಈ ದೇಶವನ್ನು ಮುನ್ನಡೆಸುತ್ತಾರೆ. ಪ್ರತಿಯೊಬ್ಬರಿಗೂ ನಾವು ರೂಪಿಸಿಕೊಳ್ಳವ ಬದುಕು ಮುಖ್ಯ ಆಗಿರುತ್ತದೆ. ನಾವು ಮಾಡುವ ಕೆಲಸದ ಮೇಲೆ ನಂಬಿಕೆ ಇರಬೇಕು, ನಂಬಿಕೆ ವಿಶ್ವಾಸವನ್ನು ಇಟ್ಟುಕೊಂಡು ನಮ್ಮ ಜೀವನ ರೂಪಿಸಿಕೊಳ್ಳುತ್ತ ಹೋಗ್ಬೇಕು ಎಂದರು.
ತಮ್ಮ ಗುರು ಹಿರಿಯರು ಹಾಗೂ ತಂದೆ ತಾಯಿಗಳ ಮಾತುಗಳನ್ನು ಕೇಳ್ತಾ ಜೀವನದಲ್ಲಿ ಮುಂದೆ ಬನ್ನಿ ಎಂದರು. ಇನ್ನು ಜಾತ್ರೆ ಮಠ ಮಾನ್ಯಗಳಿಗೆ ಭೇಟಿ ನೀಡಿ ಪೂಜೆಗಳಲ್ಲಿ ಭಾಗಿಯಾಗುವುದು, ಅಲ್ಲಿನ ಗುರು ಹಿರಿಯರ ಆಶೀರ್ವಾದ ಪಡೆದ್ರೆ ಜೀವನದಲ್ಲಿ ಮುಂದೆ ಬರ್ತೀವಿ. ನಾವು ಗಿಡವಾಗಿ ಇರ್ತೀವಿ, ಬಳಿಕ ಮರಗಳಂತೆ ಬೆಳೆಯಬೇಕು. ಎಲ್ಲ ಯುವಕ ಯುವತಿಯರ ಮನಸ್ಸಿನಲ್ಲಿ ಯುವರತ್ನ ಇರಲಿ, ಯೋಗ ಮಾಡಿ ಮನಸ್ಸನ್ನು ಸದೃಢ ಮಾಡಿಕೊಳ್ಳಬೇಕು, ಗುರುಹಿರಿಯರಿಗೆ ಗೌರವ ಸಲ್ಲಿಸಿಬೇಕು ಎಂದರು.