ಕೊರೊನಾದಿಂದಾಗಿ ಚಿತ್ರಮಂದಿಗಳು ಆರು ತಿಂಗಳು ಓಪನ್ ಆಗದೇ ಇದ್ದಿದ್ದರಿಂದ ಸಹಜವಾಗಿ ಸಿನಿಮಾ ಪ್ರಿಯರು ಥಿಯೇಟರ್ ಕಡೆ ಕಡಿಮೆ ಪ್ರಮಾಣದಲ್ಲಿ ಬರ್ತಿದ್ದಾರೆ. ಹೆಚ್ಚು ಹೆಚ್ಚು ಸಿನಿಮಾಗಳು ರಿಲೀಸ್ ಆದ್ರೆ ಪ್ರೇಕ್ಷಕರು ಚಿತ್ರಮಂದಿರಗಳ ಕಡೆ ಬಂದೇ ಬರ್ತಾರೆ ಎಂದು ನಟ ಪುನೀತ್ ರಾಜ್‍ಕುಮಾರ್ ಹೇಳಿದರು.
ಈ ಬಗ್ಗೆ ಮಾತನಾಡಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಯಾವುದೇ ಹೊಸ ಸಿನಿಮಾಗಳು ರಿಲೀಸ್ ಆಗದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರ್ತಿಲ್ಲ. ಆದರೆ ಹೊಸ ಚಿತ್ರಗಳು ಹಾಗೂ ಸ್ಟಾರ್ ನಟರ ಚಿತ್ರಗಳು ಬಿಡುಗಡೆ ಆದರೆ ಖಂಡಿತಾ ಸಿನಿ ಪ್ರಿಯರು ಬರ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
'ಹೆಚ್ಚು ಸಿನಿಮಾಗಳು ರಿಲೀಸ್ ಆದ್ರೆ ಜನ ಥಿಯೇಟರ್ಗೆ ಬರ್ತಾರೆ' ಇದನ್ನೂ ಓದಿ : ತಮ್ಮ ಪುಟ್ಟ ಲೋಕದ ಬಗ್ಗೆ ಮನಸು ಬಿಚ್ಚಿ ಮಾತನಾಡಿದ ’ದಿಯಾ’ ನಟಿ
ರಾಘವೇಂದ್ರ ರಾಜ್‍ಕುಮಾರ್ 'ರಾಜತಂತ್ರ' ಸಿನಿಮಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ ಪುನೀತ್ ರಾಜ್‍ಕುಮಾರ್ ಈ ಮಾತನ್ನು ಹೇಳಿದ್ದಾರೆ. ಹೊಸ ವರ್ಷಕ್ಕೆ ರಾಜತಂತ್ರ ಸಿನಿಮಾ ಅಲ್ಲದೇ ಎಲ್ಲಾ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗಲಿವೆ ಎಂದರು. ಇನ್ನು ಯುವರತ್ನ ಸಿನಿಮಾ ಚಿತ್ರೀಕರಣ ಕೂಡ ಮುಗಿದಿದ್ದು, ರಿಲೀಸ್ಗೆ ರೆಡಿಯಾಗಿದೆ. ಆದರೆ ಯಾವಾಗ ಅನ್ನೋದು ಗೊತ್ತಿಲ್ಲ ಎಂದರು.
ಯುವರತ್ನ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆ ಆಗುತ್ತಿರುವ ಬಗ್ಗೆ ಖುಷಿ ಇದೆ. ಹಾಗೇ ಎಲ್ಲರೂ ಸಿನಿಮಾ ನೋಡಿ ಆಶೀರ್ವಾದ ಮಾಡಬೇಕು. ಕೊರೊನಾ ಬಗ್ಗೆ ಎಲ್ಲರೂ ಜಾಗೃತರಾಗಿರಬೇಕು ಎಂದು ಪುನೀತ್ ರಾಜ್‍ಕುಮಾರ್ ಹೇಳಿದರು.