ಕರ್ನಾಟಕ

karnataka

ETV Bharat / sitara

ಸಖತ್ ಸದ್ದು ಮಾಡ್ತಿದೆ ಅಪ್ಪು ಹೇಳಿದ 'ಬೆಟ್ಟೇಗೌಡ v/s ಚಿಕ್ಕಬೋರಮ್ಮ' ಹಾಡು - ಕಿಸ್​​ ಚಿತ್ರ

'ಮಿಸ್ಟರ್ ಐರಾವತ' ಚಿತ್ರದ ನಂತರ ಎ.ಪಿ. ಅರ್ಜುನ್ ಕಿಸ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿರಾಟ್ ಮತ್ತು ಶ್ರೀಲೀಲಾ ಜತೆಯಾಗಿ ನಟಿಸಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.

'ಬೆಟ್ಟೇಗೌಡ v/s ಚಿಕ್ಕಬೋರಮ್ಮ' ಹಾಡು

By

Published : Aug 2, 2019, 5:52 PM IST

ಸೋಶಿಯಲ್ ಮೀಡಿಯಾದಲ್ಲಿ 'ಕಿಸ್'​ ಚಿತ್ರದ 'ಶೀಲಾ ಸುಶೀಲಾ' ಹಾಗೂ 'ನೀನೆ ಮೊದಲು ನೀನೆ ಕೊನೆ' ಹಾಡುಗಳು ಸಾಕಷ್ಟು ಸದ್ದು ಮಾಡುತ್ತಿವೆ. ಸದ್ಯ ಕಳೆದೆರಡು ದಿನಗಳ ಹಿಂದೆಯಷ್ಟೆ ರಿಲೀಸ್ ಆಗಿರುವ ಬೆಟ್ಟೇಗೌಡ v/s ಚಿಕ್ಕಬೋರಮ್ಮ.. ಎಂಬ ಹಾಡು ಸಖತ್ ಸದ್ದು ಮಾಡುತ್ತಿದೆ. ವಿಶೇಷವೆಂದರೆ ಈ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ.

'ಕಿಸ್' ಚಿತ್ರಕ್ಕೆ 'ತುಂಟ ತುಟಿಗಳ ಆಟೋಗ್ರಾಫ್' ಎನ್ನುವ ಅಡಿ ಬರಹ ಇದೆ. ವಿ.ಹರಿಕೃಷ್ಣ ಅವರ ಸಂಗೀತ, ಗಿರೀಶ್ ಗೌಡ ಅವರ ಛಾಯಾಗ್ರಹಣ, ಡಾ.ಕೆ.ರವಿ ವರ್ಮ ಅವರ ಸಾಹಸ, ದೀಪು ಎಸ್ ಕುಮಾರ್ ಅವರ ಸಂಕಲನ ಮಾಡಿದ್ದಾರೆ.

ABOUT THE AUTHOR

...view details