ಗೋಲ್ಡನ್ ಸ್ಟಾರ್ ಗಣೇಶ್ ನಿರ್ಮಾಣ ಹಾಗೂ ಅಭಿನಯದ ‘ಗೀತಾ’ ಸಿನಿಮಾಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೇಳಿರುವ 'ಕನ್ನಡ ಕನ್ನಡ ಕನ್ನಡವೇ ಸತ್ಯ ಕನ್ನಡವೇ ನಿತ್ಯ' ಹಾಡು ಇಂದು ರಿಲೀಸ್ ಆಗುತ್ತಿದೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ಈ ಹಾಡು ಬರೆದಿದ್ದು, ಇಂದು ಸಂಜೆ 6 ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗುತ್ತಿದೆ.
ಗೀತಾ ಕನ್ನಡದ ಹೋರಾಟದ ಬಗ್ಗೆ ಒಂದು ನೋಟ ಇಟ್ಟಿರುವ ಸಿನಿಮಾ. ಈ ಚಿತ್ರದಲ್ಲಿ ಗೋಕಾಕ್ ಚಳವಳಿ ಸಹ ಪ್ರಸ್ತಾಪ ಮಾಡುತ್ತಿದೆ. ವಿಜಯ ನಾಗೇಂದ್ರ ಈ ಚಿತ್ರದ ನಿರ್ದೇಶಕರು. ಗಣೇಶ್ ಇದರಲ್ಲಿ ದಿವಂಗತ ನಟ ಶಂಕರ್ ನಾಗ್ ಅಭಿಮಾನಿ. ಈ ಹಿಂದೆ ಶಂಕರ್ ನಾಗ್ ಅಭಿನಯದ ‘ಆಟೋ ರಾಜ’ ಶೀರ್ಷಿಕೆ ಇಟ್ಟುಕೊಂಡೇ ಗಣೇಶ್ ಉದಯ ಪ್ರಕಾಶ್ ನಿರ್ದೇಶನದಲ್ಲಿ ಅಭಿನಯ ಮಾಡಿದ್ದರು.
ಇನ್ನು ಗಣೇಶ್ ಚಿತ್ರಗಳಿಗೆ ಪುನೀತ್ ಧ್ವನಿ ನೀಡುತ್ತಿರುವುದು ಇದೇ ಮೊದಲಲ್ಲ. 2011 ತೆರೆ ಕಂಡ ಶೈಲೂ ಹಾಗೂ ‘ಜೂಮ್’ ಚಿತ್ರದ ‘ರಾಜದಿ ರಾಜ, ರಾಜ ಮಾರ್ತಾಂಡ....ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೇಳಿದ್ದರು.