ಕರ್ನಾಟಕ

karnataka

ETV Bharat / sitara

ಯುವರತ್ನ ಫ್ರೀ-ರಿಲೀಸ್​ ಇವೆಂಟ್​ ಕ್ಯಾನ್ಸಲ್... ಅಭಿಮಾನಿಗಳಿಗೆ ಪವರ್​ಸ್ಟಾರ್​ ಕೊಟ್ರು ಈ ಕಾರಣ? ​

ಇಂದು ಸಂಜೆ ಫೇಸ್‍ಬುಕ್ ಲೈವ್ ಬಂದ ಪುನೀತ್, ಮೈಸೂರಿನ ಪ್ರೀ-ರಿಲೀಸ್ ಇವೆಂಟ್ ಕ್ಯಾನ್ಸಲ್ ಆಗಿದ್ದಾಗಿ ಘೋಷಿಸಿದ್ದಾರೆ. ಈ ಕುರಿತು ನಿಖರವಾದ ಕಾರಣವನ್ನು ಅವರು ನೀಡದಿದ್ದರೂ, ಅಭಿಮಾನಿಗಳು ತಮ್ಮ ಊರಿಗೂ ಬನ್ನಿ ಎಂದು ಕರೆಯುತ್ತಿರುವುದರಿಂದ ಮಾರ್ಚ್ 21ರಿಂದ ಮೂರು ದಿನಗಳ ಕಾಲ ಒಂದಿಷ್ಟು ಊರುಗಳಿಗೆ ಚಿತ್ರತಂಡ ಭೇಟಿ ಕೊಡಲಿದೆ ಎಂದು ಹೇಳಿದ್ದಾರೆ.

ಪುನೀತ್ ರಾಜ್ ಕುಮಾರ್​
ಪುನೀತ್ ರಾಜ್ ಕುಮಾರ್​

By

Published : Mar 16, 2021, 5:05 AM IST

ಪುನೀತ್ ರಾಜಕುಮಾರ್ ಅಭಿನಯದ 'ಯುವರತ್ನ' ಚಿತ್ರವು ಏಪ್ರಿಲ್ ಒಂದರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಚಿತ್ರತಂಡದವರು ಮೈಸೂರಿನ ಮಹಾರಾಜ ಗ್ರೌಂಡ್ಸ್‍ನಲ್ಲಿ ಪ್ರೀ-ರಿಲೀಸ್ ಇವೆಂಟ್ ಆಯೋಜಿಸಿದ್ದರು. ಈ ಬಾರಿ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲವಾದ್ದರಿಂದ, ಮೈಸೂರಿನಲ್ಲೇ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ಪುನೀತ್ ಹೇಳಿದ್ದರು. ಆದರೆ, ಇದೀಗ ಆ ಇವೆಂಟ್ ಕ್ಯಾನ್ಸಲ್ ಆಗಿರುವುದಾಗಿ ಸ್ವತಃ ಪುನೀತ್ ಹೇಳಿಕೊಂಡಿದ್ದಾರೆ.

ಸೋಮವಾರ ಸಂಜೆ ಫೇಸ್‍ಬುಕ್ ಲೈವ್ ಬಂದ ಪುನೀತ್, ಮೈಸೂರಿನ ಪ್ರೀ-ರಿಲೀಸ್ ಇವೆಂಟ್ ಕ್ಯಾನ್ಸಲ್ ಆಗಿದ್ದಾಗಿ ಘೋಷಿಸಿದ್ದಾರೆ. ಈ ಕುರಿತು ನಿಖರವಾದ ಕಾರಣವನ್ನು ಅವರು ನೀಡದಿದ್ದರೂ, ಅಭಿಮಾನಿಗಳು ತಮ್ಮ ಊರಿಗೂ ಬನ್ನಿ ಎಂದು ಕರೆಯುತ್ತಿರುವುದರಿಂದ ಮಾರ್ಚ್ 21ರಿಂದ ಮೂರು ದಿನಗಳ ಕಾಲ ಒಂದಿಷ್ಟು ಊರುಗಳಿಗೆ ಚಿತ್ರತಂಡ ಭೇಟಿ ಕೊಡಲಿದೆ ಎಂದು ಹೇಳಿದ್ದಾರೆ.

ಆದರೆ, ಯಾವ್ಯಾವ ಊರುಗಳಿಗೆ, ಎಷ್ಟು ಹೊತ್ತಿಗೆ ಭೇಟಿ ಎಂಬುದು ಇನ್ನೂ ತೀರ್ಮಾನವಾಗಿಲ್ಲವಂತೆ. ಈ ಕುರಿತು ಚಿತ್ರತಂಡದವರು ಸದ್ಯದಲ್ಲೇ ಸಭೆ ಸೇರಿ, ಈ ವಿಷಯವಾಗಿ ತೀರ್ಮಾನ ತೆಗೆದುಕೊಳ್ಳಿದ್ದಾರೆ ಎಂದು ಪುನೀತ್ ಹೇಳಿಕೊಂಡಿದ್ದಾರೆ.

ಪುನೀತ್ ರಾಜ್​ಕುಮಾರ್​

ಇಷ್ಟಕ್ಕೂ 'ಯುವರತ್ನ' ಚಿತ್ರದ ಪ್ರೀ-ರಿಲೀಸ್ ಇವೆಂಟ್ ಕ್ಯಾನ್ಸಲ್ ಆಗಿದ್ದು ಯಾಕೆ? ಅಭಿಮಾನಿಗಳು ತಮ್ಮೂರಿಗೆ ಬನ್ನಿ ಎಂದು ಹೇಳಿದ್ದರಿಂದ ಕ್ಯಾನ್ಸಲ್ ಆಯಿತು ಎಂದು ಪುನೀತ್ ಹೇಳುತ್ತಾರಾದರೂ, ಮೂಲಗಳ ಪ್ರಕಾರ, ಇವೆಂಟ್ ಕ್ಯಾನ್ಸಲ್ ಆಗಿದ್ದಿಕ್ಕೆ ಕಾರಣ, ಕೊರೊನಾ ಎರಡನೇ ಅಲೆ ಎಂದು ಹೇಳಲಾಗುತ್ತಿದೆ. ಕೊರೊನಾ ಎರಡನೆಯ ಅಲೆ ಹೆಚ್ಚುತ್ತಿರುವುದರಿಂದ, ಹೆಚ್ಚು ಜನ ಸೇರಿದರೆ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿರುವುದರಿಂದ, ಇವೆಂಟ್ ಕ್ಯಾನ್ಸಲ್ ಮಾಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ.

ಮಾರ್ಚ್ 17ಕ್ಕೆ ಪುನೀತ್ ರಾಜ್‍ಕುಮಾರ್ ಹುಟ್ಟು ಹಬ್ಬವಿದೆ. ಆದರೆ ಕೊರೊನಾದಿಂದಾಗಿ ಅಪ್ಪು ಕಳೆದ ವರ್ಷ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿರಲಿಲ್ಲ. ಈ ವರ್ಷವೂ ಕೂಡ ಪುನೀತ್ ರಾಜ್‍ಕುಮಾರ್ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ. ದಯವಿಟ್ಟು ದೂರದ ಊರುಗಳಿಂದ ಅಭಿಮಾನಿಗಳು ಮನೆ ಹತ್ತಿರ ಬರಬೇಡಿ, ನಾವು ಅಂದು ಮನೆಯಲ್ಲಿ ಇರುವುದಿಲ್ಲ ಎಂದು ಮನವಿ ಮಾಡಿದರು.

ABOUT THE AUTHOR

...view details