ಗೀತಾ.. ಈ ಹೆಸರು ಕೇಳಿದಾಗ ಕರಾಟೆ ಕಿಂಗ್ ಶಂಕರ್ ನಾಗ್ ನೆನಪಾಗುತ್ತಾರೆ. ಇದೇ ಹೆಸರಲ್ಲಿ ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾ ಟೀಸರ್‌ನಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಗಣೇಶ್ ಗೀತಾ ಜೊತೆಯಾದ ಪವರ್ ಸ್ಟಾರ್..! - geetha film
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಡನ್ನ ಹಾಡಿದ್ದಾರೆ.
ಗೀತಾ ಸಿನಿಮಾ ಗೋಕಾಕ್ ಚಳವಳಿಯ ಕಥೆ ಹೊಂದಿದೆ. ಈ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆಯಾಗಿದ್ದಾರೆ. ಪುನೀತ್, ಗಣೇಶ್ ಚಿತ್ರದಲ್ಲಿ ಆ್ಯಕ್ಟ್ ಮಾಡುತ್ತಿಲ್ಲ. ಬದಲಾಗಿ ಅಪ್ಪು ಒಂದು ಹಾಡನ್ನ ಹಾಡಿದ್ದಾರೆ. ಕನ್ನಡ ಕನ್ನಡ ಕನ್ನಡವೇ ಸತ್ಯ ಎಂಬ ಕನ್ನಡದ ಬಗೆಗಿನ ಜಾಗೃತಿ ಹಾಡನ್ನ ಪುನೀತ್ ರಾಜ್‍ಕುಮಾರ್ ಹಾಡಿದ್ದಾರೆ.
ಈ ಹಾಡು ಕನ್ನಡ ಹೋರಾಟಕ್ಕೆ ಸಂಬಂಧ ಪಟ್ಟಿದ್ದು, ನಿರ್ದೇಶಕ ಸಂತೋಷ್ ಆನಂದ್ ರಾಮ್ ಬರೆದಿದ್ದಾರೆ. ಅನೂಪ್ ರುಬೆನ್ಸ್ ಈ ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದಾರೆ. ಪುನೀತ್ ಜೊತೆ ಗಣೇಶ್ ಕೂಡ ಹಾಡಿನ ಕೊನೆಯ ಸಾಲುಗಳನ್ನ ಹಾಡಿದ್ದಾರೆ. ಗಣೇಶ್ ಜೋಡಿಯಾಗಿ ಪಾರ್ವತಿ ಅರುಣ್, ಶಾನ್ವಿ ಶ್ರೀವಾತ್ಸವ ಹಾಗೂ ಪ್ರಯಗಾ ಮಾರ್ಟಿನ್ ಹೀಗೆ ಮೂರು ಜನ ನಾಯಕಿಯರು ನಟಿಸಿದ್ದಾರೆ. ಈ ವರ್ಷದ ಎಂಡ್‌ನಲ್ಲಿ ಗೀತಾ ಸಿನಿಮಾ ತೆರೆಗೆ ಬರಲಿದೆ.