ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಕೊನೆಯ ಹಾಗೂ ಹೈವೋಲ್ಟೇಜ್ ಸಿನಿಮಾ ಜೇಮ್ಸ್. ಕೆಲ ದಿನಗಳ ಹಿಂದೆಯಷ್ಟೇ ಅಪ್ಪು ಇಲ್ಲದೇ ಕುಂಬಳಕಾಯಿ ಒಡೆದಿದ್ದ ಚಿತ್ರತಂಡ ಗಣರಾಜ್ಯೋತ್ಸವದ ಪ್ರಯುಕ್ತ ಹೊಸ ಪೋಸ್ಟರ್ ಅನಾವರಣಗೊಳಿಸಿದೆ.
ಜೇಮ್ಸ್ ಚಿತ್ರದ ಹೊಸ ಪೋಸ್ಟರ್ನಲ್ಲಿ ಪವರ್ ಸ್ಟಾರ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಭರಾಟೆ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನ ಮಾಡಿರುವ ಚಿತ್ರ ಇದಾಗಿದ್ದು, ನಿಧನರಾಗುವುದಕ್ಕೂ ಮುನ್ನ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಪಾಲಿನ ಚಿತ್ರೀಕರಣವನ್ನು ಮುಗಿಸಿದ್ದರು. ಅವರ ನಿಧನದ ಬಳಿಕ ಇನ್ನುಳಿದ ದೃಶ್ಯಗಳ ಶೂಟಿಂಗ್ ಅನ್ನು ಪೂರ್ಣಗೊಳಿಸಲಾಯಿತು.
ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಮತ್ತು ರಾಘವೇಂದ್ರ ರಾಜ್‍ಕುಮಾರ್ ಕೂಡ ಬಣ್ಣ ಹಚ್ಚಿರುವುದು ವಿಶೇಷ. ಆ್ಯಕ್ಷನ್ ಸಿನಿಮಾಗಳ ಮೂಲಕ ಫೇಮಸ್ ಆಗಿರುವ ಚೇತನ್ ಕುಮಾರ್ ನಿರ್ದೇಶನ ಮಾಡಿರುವ ಚಿತ್ರ ಇದಾಗಿರುವುದರಿಂದ ಜೇಮ್ಸ್ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇದ್ದೇ ಇರುತ್ತದೆ ಎಂಬುದನ್ನು ಪೋಸ್ಟರ್ ಹೇಳುತ್ತಿದೆ.