ಕರ್ನಾಟಕ

karnataka

ETV Bharat / sitara

'ಫ್ಯಾಮಿಲಿ ಪ್ಯಾಕ್' ಭೇಟಿ ಮಾಡಿದ ಪವರ್ ಸ್ಟಾರ್! - ಪುನೀತ್​​ರಾಜ್​ಕುಮಾರ್​​ ಸುದ್ದಿ

ಇದೇ ಜನವರಿ 21ರಂದು ಡಬ್ಬಿಂಗ್ ಮಾಡುವ ಸಂದರ್ಭದಲ್ಲಿ ನಟ ಪುನೀತ್ ರಾಜ್‍ಕುಮಾರ್, ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್​​ ಡಬ್ಬಿಂಗ್ ಮಾಡುವ ಸ್ಥಳಕ್ಕೆ ಆಗಮಿಸಿ ಇಡೀ ಫ್ಯಾಮಿಲಿ ಪ್ಯಾಕ್ ಚಿತ್ರತಂಡ ಹಾಗೂ ತಂತ್ರಜ್ಞರಿಗೆ ಶುಭ ಕೋರಿದ್ದಾರೆ‌.

'ಫ್ಯಾಮಿಲಿ ಪ್ಯಾಕ್' ಭೇಟಿ ಮಾಡಿದ ಪವರ್ ಸ್ಟಾರ್!
'ಫ್ಯಾಮಿಲಿ ಪ್ಯಾಕ್' ಭೇಟಿ ಮಾಡಿದ ಪವರ್ ಸ್ಟಾರ್!

By

Published : Jan 22, 2021, 4:20 PM IST

ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಚಿತ್ರಗಳ ನಿರ್ಮಾಣಕ್ಕೆ ಹೆಸರಾಗಿರುವ ಪಿಆರ್​​ಕೆ ಪ್ರೊಡಕ್ಷನ್ಸ್​​​ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರ ಫ್ಯಾಮಿಲಿ ಪ್ಯಾಕ್. 'ಸಂಕಷ್ಟಕರ ಗಣಪತಿ' ಸಿನಿಮಾ ಖ್ಯಾತಿಯ ಲಿಖಿತ್ ಶೆಟ್ಟಿ ಹಾಗೂ ಅಮೃತ ಅಯ್ಯಂಗಾರ್ ನಟಿಸಿರೋ ಫ್ಯಾಮಿಲಿ ಪ್ಯಾಕ್ ಸಿನಿಮಾ ಡಬ್ಬಿಂಗ್ ಮಾಡೋದ್ರಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

ಫ್ಯಾಮಿಲಿ ಪ್ಯಾಕ್ ನಟ-ನಟಿ

ಇದೇ ಜನವರಿ 21ರಂದು ಡಬ್ಬಿಂಗ್ ಮಾಡುವ ಸಂದರ್ಭದಲ್ಲಿ ನಟ ಪುನೀತ್ ರಾಜ್‍ಕುಮಾರ್, ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್​​ ಡಬ್ಬಿಂಗ್ ಮಾಡುವ ಸ್ಥಳಕ್ಕೆ ಆಗಮಿಸಿ ಇಡೀ ಫ್ಯಾಮಿಲಿ ಪ್ಯಾಕ್ ಚಿತ್ರತಂಡ ಹಾಗೂ ತಂತ್ರಜ್ಞರಿಗೆ ಶುಭ ಕೋರಿದ್ದಾರೆ‌.

ಫ್ಯಾಮಿಲಿ ಪ್ಯಾಕ್ ಚಿತ್ರತಂಡ

ಮನೋರಂಜನೆ ಪ್ರಧಾನವಾಗಿರುವ ಈ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಲಿಖಿತ್ ಶೆಟ್ಟಿ ನಿರ್ಮಾಪಕರು. ಈ ಹಿಂದೆ ಸಂಕಷ್ಟಕರ ಗಣಪತಿ ಚಿತ್ರವನ್ನು ನಿರ್ದೇಶಿಸಿದ್ದ‌ ಅರ್ಜುನ್ ಕುಮಾರ್ ಎಸ್. ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಲಿಖಿತ್​​ ಶೆಟ್ಟಿ ಅಲ್ಲದೇ ಅಮೃತ ಅಯ್ಯಂಗಾರ್, ರಂಗಾಯಣ ರಘು, ಅಚ್ಯುತ್​ ಕುಮಾರ್, ಸಿಹಿಕಹಿ ಚಂದ್ರು, ಪದ್ಮಜಾರಾವ್, ಶರ್ಮಿತಾ ಗೌಡ, ನಾಗಭೂಷಣ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಫ್ಯಾಮಿಲಿ ಪ್ಯಾಕ್ ಚಿತ್ರತಂಡ

ಗುರುಕಿರಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಉದಯಲೀಲಾ ಛಾಯಾಗ್ರಹಣ ಹಾಗೂ ದೀಪು ಎಸ್. ಕುಮಾರ್ ಸಂಕಲನವಿದೆ. ಮಾಸ್ತಿ ಫ್ಯಾಮಿಲಿ ಪ್ಯಾಕ್​​​ಗೆ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡು ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯದಲ್ಲೇ ಈ ಹಾಡು ಮತ್ತು ಸಾಹಸ ಸನ್ನಿವೇಶವನ್ನು ಮುಗಿಸಿ ಪ್ರೇಕ್ಷಕರ ಮುಂದೆ ಬರಲಿದೆ‌.

ಫ್ಯಾಮಿಲಿ ಪ್ಯಾಕ್ ಚಿತ್ರತಂಡದ ಜೊತೆ ಪುನೀತ್ ​​ರಾಜ್​ಕುಮಾರ್​

ABOUT THE AUTHOR

...view details