ಕರ್ನಾಟಕ

karnataka

ETV Bharat / sitara

ಪಡ್ಡೆಹುಲಿಗೆ ದೊಡ್ಮನೆ 'ಪವರ್'...ಎಲ್ಲವೂ ಸ್ನೇಹ-ಪ್ರೀತಿಗಾಗಿ - undefined

ಕನ್ನಡ ಪಡ್ಡೆಹುಲಿ ಚಿತ್ರದಲ್ಲಿ ಡೊಡ್ಮನೆ ಹುಡ್ಗ ಅಪ್ಪು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಕೂಡ ಪಡ್ಡೆಹುಲಿ ಅಡ್ಡಾದಲ್ಲಿದ್ದಾರೆ. ಈ ಚಿತ್ರ ಇದೇ 19 ರಂದು ರಿಲೀಸ್ ಆಗಲಿದೆ.

ಪಡ್ಡೆಹುಲಿ ಚಿತ್ರದಲ್ಲಿ ಡೊಡ್ಮನೆ ಹುಡ್ಗ ಅಪ್ಪು

By

Published : Apr 9, 2019, 12:00 PM IST

Updated : Apr 9, 2019, 12:59 PM IST

ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಅಭಿನಯದ ‘ಪಡ್ಡೆ ಹುಲಿ’ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸೇರಿಕೊಂಡಿದ್ದಾರೆ. ಸ್ನೇಹ ಹಾಗೂ ಪ್ರೀತಿಯ ಮೇರೆಗೆ ರಾಜಕುಮಾರ್ ಪಡ್ಡೆಹುಲಿ ಕ್ಲೈಮಾಕ್ಸ್​​ಲ್ಲಿ ಅತಿಥಿ ಆಗಿ ಕಾಣಿಸಿಕೊಂಡಿದ್ದಾರೆ. ಅಪ್ಪು ಅವರದು 15 ನಿಮಿಷಗಳಷ್ಟು ಇರುವಿಕೆ ಈ ಚಿತ್ರದಲ್ಲಿದೆ ಎಂದು ಮಾಹಿತಿ ರಿವೀಲ್​ ಆಗಿದೆ.

‘ಪಡ್ಡೆ ಹುಲಿ’ ಮುಹೂರ್ತಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಕಿಚ್ಚ ಸುದೀಪ್ ಅವರು ಆಗಮಿಸಿ, ಚಿತ್ರತಂಡಕ್ಕೆ ವಿಶ್ ಮಾಡಿದ್ದರು. ಇದೀಗ ಈ ವೀರ ಕನ್ನಡಿಗ ಪಡ್ಡೆಹುಲಿ ಚಿತ್ರದ ಭಾಗವಾಗಿರುವ ಸುದ್ದಿ ಹೊರಬಿದ್ದಿದೆ.

ಗುರು ದೇಶಪಾಂಡೆ ನಿರ್ದೇಶನದ ‘ಪಡ್ಡೆ ಹುಲಿ’ ಚಿತ್ರತಂಡ ಮೊದಲು ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಅವರನ್ನು ತಂದೆ ಪಾತ್ರಕ್ಕೆ ಆಹ್ವಾನಿಸಿತು. ಆಮೇಲೆ ಕಬಡ್ಡಿ ಕೋಚ್ ಆಗಿ ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಸೇರಿಕೊಂಡರು. ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್ ಐದು ಮಹನಿಯರ ಕವನಗಳನ್ನು ಈ ಚಿತ್ರಕ್ಕೆ ಬಳಸಿಕೊಂಡರು.ಈಗ ಪಡ್ಡೆಹುಲಿಗೆ 'ಪವರ್' ಸಾಥ್​​ ಸಿಕ್ಕಿದೆ. ಹೀಗೆ ಶ್ರೇಯಸ್ ಮಂಜು ಹಾಗೂ ನಿಶ್ವಿಕಾ ನಾಯ್ಡು ಸಿನಿಮಾಕ್ಕೆ ದೊಡ್ಡ ಹೆಸರುಗಳು ಸೇರ್ಪಡೆ ಆಗುತ್ತಲೇ ಇದೆ.

Last Updated : Apr 9, 2019, 12:59 PM IST

For All Latest Updates

TAGGED:

ABOUT THE AUTHOR

...view details