ಮಾಯಾ ಬಜಾರ್ ಕನ್ನಡ ಚಿತ್ರರಂಗದಲ್ಲಿ ಟೈಟಲ್ನಿಂದಲೇ ಗಮನ ಸೆಳೆಯುತ್ತಿರೋ ಚಿತ್ರ. ಪಿಆರ್ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ, ಪುನೀತ್ ರಾಜ್‍ಕುಮಾರ್ ನಿರ್ಮಿಸಿರುವ ಮಾಯಾ ಬಜಾರ್ ಸಿನಿಮಾದ ಅಧಿಕೃಥ ಟ್ರೈಲರ್ ರಿವೀಲ್ ಆಗಿದೆ.
ಪುನೀತ್ ಮಾಯಾ ಬಜಾರ್ನಲ್ಲಿದೆ ಸಸ್ಪೆನ್ಸ್, ಥ್ರಿಲ್ಲರ್ ರೋಚಕತೆ - Official Trailer Reveal of Maya Bazaar Cinema
ಪಿಆರ್ಕೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ, ಪುನೀತ್ ರಾಜ್‍ಕುಮಾರ್ ನಿರ್ಮಾಣ ಮಾಡಿರೋ ಮಾಯಾ ಬಜಾರ್ ಸಿನಿಮಾದ ಆಫೀಶಿಯಲ್ ಟ್ರೈಲರ್ ರಿವೀಲ್ ಆಗಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಚಿತ್ರದ ಟ್ರೈಲರ್ ಅನಾವರಣ ಮಾಡಿದ್ದು, ರಾಜ್ ಬಿ ಶೆಟ್ಟಿ, ಪ್ರಕಾಶ್ ರೈ, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ಸುಧಾರಾಣಿ, ಚೈತ್ರಾ ರಾವ್ ಹೀಗೆ ದೊಡ್ಡ ತಾರಾ ಬಳಗವಿರೋ ಮಾಯಾ ಬಜಾರ್ ಸಸ್ಪೆನ್ಸ್, ಥ್ರಿಲ್ಲರ್ ಹಾಗು ರೋಚಕತೆಯಿಂದ ಕೂಡಿದೆ. ಒಂದು ಮೊಟ್ಟೆಯ ಕಥೆ ಚಿತ್ರದಂತೆ, ರಾಜ್ ಬಿ ಶೆಟ್ಟಿ ಈ ಮಾಯಾ ಬಜಾರ್ ನಲ್ಲಿ ಕಾಮಿಡಿ ಜೊತೆಗೆ ಸೀರಿಯಸ್ ಕ್ಯಾರೆಕ್ಟರ್ನಲ್ಲಿ ಮೋಡಿ ಮಾಡ್ತಾರೆ.
ಇನ್ನು ಚಿತ್ರದಲ್ಲಿ ಕಿಕ್ ಕೊಡುವ ಸಂಭಾಷಣೆ ಪ್ರತಿಯೊಬ್ಬರ ಪಾತ್ರಗಳು ಥ್ರಿಲ್ ಕೊಡುತ್ತವೆ. ರಾಧಾಕೃಷ್ಣ ರೆಡ್ಡಿ ಚೊಚ್ಚಲ ನಿರ್ದೇಶನದ ಮಾಯಾ ಬಜಾರ್ ಸಿನಿಮಾವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪವರ್ ಸ್ಟಾರ್ ಬೊಂಬಾಟ್ ಸ್ಟೆಪ್ ನೋಡುಗರಿಗೆ ಸಖತ್ ಕಿಕ್ ನೀಡುತ್ತಿದೆ. ಇದೇ 28ಕ್ಕೆ ಮಾಯಾ ಬಜಾರ್ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.