ಕರ್ನಾಟಕ

karnataka

ETV Bharat / sitara

ಪ್ರಜ್ವಲ್​​​ನಿಗೆ ಅಪ್ಪು ಅಣ್ಣನೇ ಸ್ಪೂರ್ತಿ ಯಾಕೆ... ಯಾವ ವಿಚಾರದಲ್ಲಿ ರೋಲ್​​ ಮಾಡೆಲ್​? - ಡೈನಾಮಿಕ್​​​ ಪ್ರಿನ್ಸ್​​​ ಪ್ರಜ್ವಲ್​​ ದೇವರಾಜ್

ಸಿನಿಮಾದಲ್ಲಿ ಫಿಟ್​​ ಆಗಿ ಕಾಣಲು ನನ್ನ ಫಿಟ್​​ನೆಸ್​​ಗೆ ಸ್ಪೂರ್ತಿಯಾದವರು ಪವರ್​ಸ್ಟಾರ್​​ ಪುನೀತ್​ ರಾಜ್​​​ಕುಮಾರ್ ಎಂದು ಡೈನಾಮಿಕ್​​​ ಪ್ರಿನ್ಸ್​​​ ಪ್ರಜ್ವಲ್​​ ದೇವರಾಜ್ ಹೇಳಿದರು.

Puneeth inspire to me for body fitness : prejawal
ಅಪ್ಪು ಅಣ್ಣನೇ ನನ್ನ ಫಿಟ್​ನೆಸ್​ಗೆ ಸ್ಪೂರ್ತಿ : ಪ್ರಜ್ವಲ್​ ದೇವರಾಜ್​​

By

Published : Jan 7, 2020, 8:14 AM IST

ನಟ ಪ್ರಜ್ವಲ್​​ ಮೆರವಣಿಗೆ, ಸಿಕ್ಸರ್, ಸಾಗರ್​​​, ಸೂಪರ್​ ಶಾಸ್ತ್ರಿ​​​ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಇನ್ನು ಪ್ರಜ್ವಲ್​ ದೇವರಾಜ್​ ಅವರ ಫಿಟ್​ನೆಸ್​ಗೆ ಸ್ಪೂರ್ತಿಯಾದವರು ಯಾರೆಂಬ ಗುಟ್ಟು ನಿಮಗೆ ಗೊತ್ತಿಲ್ಲದಿದ್ದರೆ, ಇದೀಗ ಪ್ರಜ್ವಲ್​​ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೌದು ಸಿನಿಮಾದಲ್ಲಿ ಫಿಟ್​​ ಆಗಿ ಕಾಣಲು ನನ್ನ ಫಿಟ್​​ನೆಸ್​​ಗೆ ಸ್ಪೂರ್ತಿಯಾದವರು ಪವರ್​ಸ್ಟಾರ್​​ ಪುನೀತ್​ ರಾಜ್​​​ಕುಮಾರ್​​ ಅಂತಾರೆ ಡೈನಾಮಿಕ್​​​ ಪ್ರಿನ್ಸ್​​​ ಪ್ರಜ್ವಲ್​​ ದೇವರಾಜ್​​​. ಹೌದು ಸದ್ಯ ಪ್ರಜ್ವಲ್​​​ ಜಿಮ್ ವರ್ಕ್ ಔಟ್ ಜೊತೆಗೆ ಜಿಮ್ನಾಸ್ಟಿಕ್ಸ್ ಮಾಡಲು ಶುರುಮಾಡಿದ್ದಾರೆ.

ಅಪ್ಪು ಅಣ್ಣನೇ ನನ್ನ ಫಿಟ್​ನೆಸ್​ಗೆ ಸ್ಪೂರ್ತಿ : ಪ್ರಜ್ವಲ್​ ದೇವರಾಜ್​​

ಇನ್ನು ಪ್ರಜ್ಜು ಜಿಮ್ನಾಸ್ಟಿಕ್ಸ್ ಮಾಡಲು ಅಪ್ಪು ಸ್ಪೂರ್ತಿಯಂತೆ. ಈ ವಿಷಯವನ್ನು ಪ್ರಜ್ವಲ್ 'ಜಂಟಲ್ ಮ್ಯಾನ್' ಚಿತ್ರದ ಆಡಿಯೋ ಬಿಡುಗಡೆ ವೇದಿಕೆಯಲ್ಲಿ ಅಪ್ಪು ಮುಂದೆನೇ ರೀವಿಲ್ ಮಾಡಿ, ನಾನು ಅಪ್ಪು ಇಂದನೇ ಜಿಮ್ನಾಸ್ಟಿಕ್ಸ್ ಹಾಗೂ ಆಕ್ಷನ್ ಸೀಸ್​ಗಳನ್ನು ಮಾಡಲು ಶುರು ಮಾಡಿದ್ದು. ಅಪ್ಪು ಯಾರ ಬಳಿ ಜಿಮ್ನಾಸ್ಟಿಕ್ ಪ್ರಾಕ್ಟಿಸ್​​​ ಮಾಡ್ತಾರೋ ಅವರನ್ನೇ ಮನೆಗೆ ಕರೆಸಿಕೊಂಡು ಪ್ರಾಕ್ಟಿಸ್​​​​ ಮಾಡ್ತೀದ್ದೀನಿ ಅಂತ ಪ್ರಜ್ವಲ್​ ದೇವರಾಜ್​​ ಪುನೀತ್​​ ರಾಜ್​ ಕುಮಾರ್​​ ನನ್ನ ಫಿಟ್​​​ನೆಸ್​​​ನ ಗುರು ಎಂದರು.

ABOUT THE AUTHOR

...view details