ಯುವರತ್ನ ಚಿತ್ರ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹು ನಿರೀಕ್ಷಿತ ಯುವರತ್ನ ಚಿತ್ರದ ಮೊದಲ ಹಾಡು 'ಪವರ್ ಆಫ್ ಯೂಥ್' ಬಿಡುಗಡೆ ಆಗಿ ಯೂಟ್ಯೂಬ್ನಲ್ಲಿ ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದಿದೆ. ಮೊದಲ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಬೆನ್ನಲ್ಲೇ ಚಿತ್ರತಂಡ ಎರಡನೇ ಹಾಡನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ಅಭಿಮಾನಿಗಳಿಗೆ 'ಯುವರತ್ನ'ನಿಂದ ಕ್ರಿಸ್ಮಸ್ ಗಿಫ್ಟ್ - ಪುನೀತ್ ರಾಜ್‍ಕುಮಾರ್ ನೀನಾದೆ ನಾ ಹಾಡು
ಕ್ರಿಸ್ಮಸ್ ಹಬ್ಬಕ್ಕೆ ಪುನೀತ್ ರಾಜ್‍ಕುಮಾರ್ ಹಾಗೂ ಸಯ್ಯೇಶಾ ನಡುವಿನ 'ನೀನಾದೆ ನಾ' ಎಂಬ ರೊಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ.
ಕ್ರಿಸ್ಮಸ್ ಹಬ್ಬಕ್ಕೆ ಪುನೀತ್ ರಾಜ್‍ಕುಮಾರ್ ಹಾಗೂ ಸಯ್ಯೇಶಾ ನಡುವಿನ 'ನೀನಾದೆ ನಾ' ಎಂಬ ರೊಮ್ಯಾಂಟಿಕ್ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡುತ್ತಿದೆ. ಕನ್ನಡದಲ್ಲಿ ಗೀತರಚನೆಕಾರ ಗೌಸ್ ಪೀರ್ ಈ ಹಾಡನ್ನ ಬರೆದಿದ್ದು, ತೆಲುಗಿನಲ್ಲಿ ರಮಜೋಗಯ್ಯ ಶಾಸ್ತ್ರಿಯ ಸಾಹಿತ್ಯವಿದೆ. ಈ ಹಾಡನ್ನು ಶ್ರೇಯಾ ಘೋಷಾಲ್ ಹಾಗೂ ಅರ್ಮಾನ್ ಮಲಿಕ್ ಹಾಡಿದ್ದು, ಸಂಗೀತ ನಿರ್ದೇಶಕ ತಮನ್ ಕ್ಯಾಚೀ ಟ್ಯೂನ್ ಹಾಕಿದ್ದಾರೆ.
ಸಂತೋಷ್ ಆನಂದ್ ರಾಮ್ ಯುವರತ್ನ ಚಿತ್ರ ನಿರ್ದೇಶನ ಮಾಡುತ್ತಿದ್ದು, ಪುನೀತ್ ರಾಜ್‍ಕುಮಾರ್, ಸಯ್ಯೇಶಾ ಅಲ್ಲದೇ ಧನಂಜಯ್, ಸೋನುಗೌಡ, ದಿಗಂತ್, ಕಾವ್ಯ ಶೆಟ್ಟಿ, ಪ್ರಕಾಶ್ ರೈ ಸೇರಿದಂತೆ ದೊಡ್ಡ ತಾರಗಣವಿದೆ. ಹೊಂಬಾಳೆ ಫಿಲಂಸ್ ಸಂಸ್ಥೆ ಅದ್ಧೂರಿ ವೆಚ್ಚದಲ್ಲಿ ಯುವರತ್ನ ಸಿನಿಮಾ ನಿರ್ಮಾಣ ಮಾಡುತ್ತಿದೆ.