ಕೊರೊನಾದಿಂದ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸ್ಯಾಂಡಲ್ವುಡ್ನ ಹಲವು ನಟ, ನಟಿಯರು ಹಾಗುತಂತ್ರಜ್ಱರು ಸಹಾಯಹಸ್ತ ಚಾಚಿದ್ದಾರೆ. ಕೆಲ ದಿನಗಳ ಹಿಂದೆ ನಟ ಉಪೇಂದ್ರ, ಕನ್ನಡ ಚಲನಚಿತ್ರ ಕಾರ್ಮಿಕರು ಮತ್ತು ತಂತ್ರಜ್ಱರ ಒಕ್ಕೂಟದ ಎಲ್ಲಾ ಸದಸ್ಯರಿಗೂ ಉಚಿತವಾಗಿ ರೇಷನ್ ಕಿಟ್ ವಿತರಿಸಿದ್ದರು. ಬಳಿಕ ರಾಕಿಂಗ್ ಸ್ಟಾರ್ ಯಶ್ 3,000 ಸಿನಿಮಾ ಕಾರ್ಮಿಕರ ಬ್ಯಾಂಕ್ ಅಕೌಂಟ್ಗೆ ತಲಾ ಐದು ಸಾವಿರ ಡೆಪಾಸಿಟ್ ಮಾಡಿದ್ದರು.
ಇದೀಗ ಕಾರ್ಮಿಕರ ನೆರವಿಗೆ ಪುನೀತ್ ರಾಜ್ಕುಮಾರ್ ಮತ್ತು ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ಸಹ ಮುಂದೆ ಬಂದಿದ್ದಾರೆ. ಕಾರ್ಮಿಕರ ಒಕ್ಕೂಟಕ್ಕೆ ಪುನೀತ್ 10 ಲಕ್ಷ ರೂ. ಧನಸಹಾಯ ಮಾಡಿದರೆ, ವಿಜಯ್ ಕಿರಗಂದೂರು 32 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಇವರಿಬ್ಬರಿಗೂ ಒಕ್ಕೂಟದ ಅಧ್ಯಕ್ಷ ಸಾ.ರಾ. ಗೋವಿಂದು ಮತ್ತು ಕಾರ್ಯದರ್ಶಿ ರವೀಂದ್ರನಾಥ್ ಧನ್ಯವಾದ ಸಲ್ಲಿಸಿದ್ದಾರೆ.