ಕರ್ನಾಟಕ

karnataka

ETV Bharat / sitara

'ನಾನು ಮತ್ತು ಗುಂಡ'ನಿಗೆ ಶುಭ ಹಾರೈಸಿದ ಪವರ್ ಸ್ಟಾರ್ ಮತ್ತು ಚಾಲೆಂಜಿಂಗ್ ಸ್ಟಾರ್ - 'ನಾನು ಮತ್ತು ಗುಂಡ'ನಿಗೆ ಶುಭ ಹಾರೈಸಿದ ಪವರ್ ಸ್ಟಾರ್ ಮತ್ತು ಚಾಲೆಂಜಿಂಗ್ ಸ್ಟಾರ್

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾನು ಮತ್ತು ಗುಂಡ ಸಿನಿಮಾಕ್ಕೆ ಹಾಗು ನಟ ಶಿವರಾಜ್ ಕೆ ಆರ್ ಪೇಟೆಗೆ ಗುಡ್ ಲಕ್ ಹೇಳಿದ್ದಾರೆ. ಸಿನಿಮಾ ನೋಡಿ ಅಂತಾ ಅಭಿಮಾನಿಗಳಿಗೆ ಈ ನಟರು ಕೇಳಿಕೊಂಡಿದ್ದಾರೆ.

puneeth and Darshan support  naanu mattu gunda team
'ನಾನು ಮತ್ತು ಗುಂಡ'ನಿಗೆ ಶುಭ ಹಾರೈಸಿದ ಪವರ್ ಸ್ಟಾರ್ ಮತ್ತು ಚಾಲೆಂಜಿಂಗ್ ಸ್ಟಾರ್

By

Published : Jan 22, 2020, 5:40 PM IST

ಸ್ಯಾಂಡಲ್​​​ವುಡ್​​ನಲ್ಲಿ ಬಹಳ ದಿನಗಳ ನಂತರ, ಪ್ರಾಣಿ ಬಾಂಧವ್ಯದ ಕಥೆ ಹೊತ್ತು ಬರ್ತಾ ಇರೋ ಚಿತ್ರ 'ನಾನು ಮತ್ತು ಗುಂಡ'. ಇನ್ನು ಇದೇ 24ಕ್ಕೆ ತೆರೆ ಕಾಣೋದಿಕ್ಕೆ ಸಜ್ಜಾಗಿರೋ ನಾನು ಮತ್ತು ಗುಂಡ ಸಿನಿಮಾಕ್ಕೆ ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್ ನಟರು ಸಪೋರ್ಟ್ ಮಾಡಿದ್ದಾರೆ.

'ನಾನು ಮತ್ತು ಗುಂಡ'ನಿಗೆ ಶುಭ ಹಾರೈಸಿದ ಪವರ್ ಸ್ಟಾರ್ ಮತ್ತು ಚಾಲೆಂಜಿಂಗ್ ಸ್ಟಾರ್

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾನು ಮತ್ತು ಗುಂಡ ಸಿನಿಮಾಕ್ಕೆ ಹಾಗು ನಟ ಶಿವರಾಜ್ ಕೆ ಆರ್ ಪೇಟೆಗೆ ಗುಡ್ ಲಕ್ ಹೇಳಿದ್ದಾರೆ. ಈ ಇಬ್ಬರು ಸ್ಟಾರ್ ನಟರು ಆಗಾಗ ಹೊಸಬರ ಸಿನಿಮಾದ ಆಡಿಯೋ ಬಿಡುಗಡೆ, ಸಿನಿಮಾ ಮುಹೂರ್ತಕ್ಕೆ ಹೋಗಿ ಬೆನ್ನು ತಟ್ಟುವ ಕೆಲಸ ಮಾಡುತ್ತಿದ್ದಾರೆ. ಇದೀಗ ನಾನು ಮತ್ತು ಗುಂಡ ಸಿನಿಮಾ ನೋಡಿ ಅಂತಾ ಅಭಿಮಾನಿಗಳಿಗೆ ಈ ನಟರು ಹೇಳಿದ್ದಾರೆ.

ಈ ಸಿನಿಮಾ ಪೊಯಂ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ, ರಘು ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ನಟ ಶಿವರಾಜ್ ಕೆ.ಆರ್ ಪೇಟೆ ಮತ್ತು ಸಂಯುಕ್ತ ಹೊರನಾಡು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾಕ್ಕೆ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನವಿದ್ದು, ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ.

ABOUT THE AUTHOR

...view details