ಕರ್ನಾಟಕ

karnataka

ETV Bharat / sitara

ಡಾ. ವಿಷ್ಣುವರ್ಧನ್ ಜೊತೆಗಿನ ಬಾಲ್ಯದ ಫೋಟೋ ಹಂಚಿಕೊಂಡ ಪುನೀತ್ ರಾಜ್​ಕುಮಾರ್​​ - Vishnu 70th Birth anniversary

ಡಾ. ವಿಷ್ಣುವರ್ಧನ್ ಜೊತೆಗಿನ ಬಾಲ್ಯದ ಫೋಟೋವೊಂದನ್ನು ತಮ್ಮ ಇನ್ಸ್​​ಟಾಗ್ರಾಮ್​​ನಲ್ಲಿ ಹಂಚಿಕೊಳ್ಳುವ ಮೂಲಕ ಪುನೀತ್ ರಾಜ್​ಕುಮಾರ್ ವಿಷ್ಣು 70ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

Puneet with Vishnuvardhan
ಡಾ. ವಿಷ್ಣುವರ್ಧನ್

By

Published : Sep 18, 2020, 11:53 AM IST

ಇಂದು ಡಾ. ವಿಷ್ಣುವರ್ಧನ್ 70ನೇ ವರ್ಷದ ಹುಟ್ಟುಹಬ್ಬ. ವಿಷ್ಣು ಹುಟ್ಟುಹಬ್ಬಕ್ಕೆ ಸುದೀಪ್, ಧನಂಜಯ್ ನಿರ್ದೇಶಕರಾದ ರವಿ ಶ್ರೀವತ್ಸ, ಪವನ್ ಒಡೆಯರ್, ಸಂತೋಷ್ ಆನಂದ್ ರಾಮ್ ಹಾಗೂ ಇನ್ನಿತರರು ಶುಭ ಕೋರಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಕೂಡಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಷ್ಣು ಬರ್ತ್​ಡೇಗೆ ಶುಭ ಕೋರಿದ್ದಾರೆ.

ಪುನೀತ್ ರಾಜ್​ಕುಮಾರ್ ಬಾಲ್ಯದಲ್ಲಿರುವಾಗ ಡಾ. ವಿಷ್ಣುವರ್ಧನ್ ಜೊತೆಗಿನ ಫೋಟೋವನ್ನು ಟ್ವಿಟ್ಟರ್​​​​ನಲ್ಲಿ ಷೇರ್ ಮಾಡುವ ಮೂಲಕ ಹೃದಯವಂತನಿಗೆ ಬರ್ತಡೇ ಶುಭ ಕೋರಿದ್ದಾರೆ. "ವಿಷ್ಣುವರ್ಧನ್ ಸರ್ ಅವರ 70ನೇ ಹುಟ್ಟುಹಬ್ಬದ ಸವಿನೆನಪು" ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಫೋಟೋದಲ್ಲಿ ಪುನೀತ್​ ಅವರ ಭುಜದ ಮೇಲೆ ವಿಷ್ಣು ಕೈ ಹಾಕಿ ನಿಂತಿದ್ದಾರೆ. ಈ ಸುಂದರ, ಅಪರೂಪದ ಪೋಟೋವನ್ನು ಹಂಚಿಕೊಂಡು ಪುನೀತ್, ಅಭಿನಯ ಭಾರ್ಗವನ ಬರ್ತ್​ಡೇಗೆ ಶುಭ ಕೋರಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

ABOUT THE AUTHOR

...view details