ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ದೊಡ್ಡ ಸ್ಟಾರ್ ಆದರೂ ಬಹಳ ಸರಳ ಸ್ವಭಾವದ ವ್ಯಕ್ತಿ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಸಹನಟರಾಗಲೀ, ಅಭಿಮಾನಿಗಳನ್ನಾಗಲೀ ಬಹಳ ಪ್ರೀತಿಯಿಂದ ಮಾತನಾಡಿಸುವ ಸ್ವಭಾವ ಅವರದ್ದು.
ಅಪ್ಪು ಅಭಿಮಾನಿಗೆ ನಿರ್ದೇಶಕರ ವಿಶ್ ಇದೀಗ ಪುನೀತ್ ರಾಜ್ಕುಮಾರ್ ಚಾಮರಾಜನಗರದ ತಮ್ಮ ಅಭಿಮಾನಿಯೊಬ್ಬರಿಗೆ ವಾಟ್ಸಾಪ್ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿ ಅಭಿಮಾನಿಗಳ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಅಭಿಮಾನಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪುನೀತ್ ಚಾಮರಾಜನಗರದಲ್ಲಿ ಟೀ ಕ್ಯಾಂಟೀನ್ ನಡೆಸುತ್ತಿರುವ ರಾಜರತ್ನ ಅಪ್ಪು ಯುವ ಸೇನಾ ಸಮಿತಿ ಅಧ್ಯಕ್ಷ ಕ್ಯಾಂಟೀನ್ ಮಂಜು ಪುನೀತ್ ಅವರ ಅಪ್ಪಟ ಅಭಿಮಾನಿ. ಡಾ. ರಾಜ್ಕುಮಾರ್ ಅಭಿನಯದ 'ಪರಶುರಾಮ' ಚಿತ್ರದ ನಗುತಾ ನಗುತಾ ಬಾಳು ನೀನು ನೂರು ವರುಷ ಎಂಬ ಹಾಡನ್ನು ಹಾಡುವ ಮೂಲಕ ಅಪ್ಪು ಮಂಜುಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ಪುನೀತ್ ರಾಜ್ಕುಮಾರ್ ಜೊತೆ ಅಭಿಮಾನಿ ಸ್ಟಾಂಡಲ್ವುಡ್ ನಿರ್ದೇಶಕರಾದ ಪವನ್ ಒಡೆಯರ್, ಚೇತನ್ ಕುಮಾರ್, ಸಂತೋಷ್ ಆನಂದ್ ರಾಮ್ ಹಾಗೂ ಎ. ಹರ್ಷ ಕೂಡಾ ಮಂಜು ಅವರಿಗೆ ಬರ್ತ್ಡೇ ಶುಭ ಕೋರಿದ್ದಾರೆ. ಮೆಚ್ಚಿನ ನಟ ಪುನೀತ್ ರಾಜ್ಕುಮಾರ್ ಹಾಗೂ ಸ್ಯಾಂಡಲ್ವುಡ್ ಖ್ಯಾತ ನಿರ್ದೇಶಕರು ತಮ್ಮ ಹುಟ್ಟುಹಬ್ಬಕ್ಕೆ ಶುಭ ಕೋರಿರುವುದದಕ್ಕೆ ಮಂಜು ಸಂತೋಷ ವ್ಯಕ್ತಪಡಿಸಿದ್ದಾರೆ.