ಕರ್ನಾಟಕ

karnataka

ETV Bharat / sitara

ಅಕ್ಕನ ಮನೆಗೆ ಪುನೀತ್​​​ ಸರ್ಪ್ರೈಸ್​​​​​​​​ ಭೇಟಿ...ಚಿತ್ರರಂಗದ ಬಗ್ಗೆ ಭಾವನೊಂದಿಗೆ ಚರ್ಚೆ - Appu visited Poornima house

ಪವರ್​ ಸ್ಟಾರ್ ಪುನೀತ್ ರಾಜ್​​​ಕುಮಾರ್ ಇಂದು ತಮ್ಮ ಅಕ್ಕ ಪೂರ್ಣಿಮಾ ರಾಮ್​​ಕುಮಾರ್ ಮನೆಗೆ ಭೇಟಿ ನೀಡಿದ್ದು ಎಲ್ಲರೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆದಿದ್ದಾರೆ. ಈ ವೇಳೆ ರಾಮ್​ಕುಮಾರ್ ತಮ್ಮ ಪುತ್ರ ಧೀರೆನ್ ಅಭಿನಯದ 'ಶಿವ 143' ಚಿತ್ರದ ಟೀಸರನ್ನು ಮೈದುನನಿಗೆ ತೋರಿಸಿದ್ದಾರೆ.

Puneet rajkumar
ಪುನೀತ್ ರಾಜ್​ಕುಮಾರ್

By

Published : Aug 6, 2020, 12:59 PM IST

Updated : Aug 6, 2020, 3:46 PM IST

ಕಳೆದ 4 ತಿಂಗಳಿನಿಂದ ಕನ್ನಡ ಚಿತ್ರರಂಗದ ಚಟುವಟಿಕೆಗಳು ತಟಸ್ಥ ಆಗಿದೆ. ಈ ವೇಳೆ ಪುನೀತ್ ರಾಜ್​ಕುಮಾರ್, ಮನೆಯಲ್ಲಿ ಸಿನಿಮಾಗಳನ್ನು ನೋಡುತ್ತಾ, ಒಟಿಟಿ​​ ಪ್ಲಾಟ್​​ಫಾರ್ಮ್​ನಲ್ಲಿ ತಮ್ಮ ಬ್ಯಾನರ್ ಸಿನಿಮಾಗಳನ್ನು ರಿಲೀಸ್​​ ಮಾಡುತ್ತಾ, ವರ್ಕೌಟ್ ಮಾಡುತ್ತಾ, ಫ್ಯಾಮಿಲಿಯೊಂದಿಗೆ ಕಾಲ ಕಳೆಯುವ ಮೂಲಕ ಬ್ಯುಸಿ ಆಗಿದ್ದಾರೆ.

ಅಕ್ಕಂದಿರೊಂದಿಗೆ ಅಪ್ಪು

ಇತ್ತೀಚೆಗಷ್ಟೇ ಪುನೀತ್ ರಾಜ್‍ಕುಮಾರ್ ಅಕ್ಕಂದಿರಾದ ಲಕ್ಷ್ಮಿ ಹಾಗೂ ಪೂರ್ಣಿಮಾ ರಾಮ್​​​​​ಕುಮಾರ್​​ ಅಪ್ಪುಗೆ ರಾಖಿ ಕಟ್ಟಿದ್ದರು. ಈಗ ಎರಡನೇ ಅಕ್ಕ ಪೂರ್ಣಿಮಾ ರಾಮ್​​​​​ಕುಮಾರ್​​ ಮನೆಗೆ ಪುನೀತ್ ರಾಜ್​ಕುಮಾರ್​ ದಿಢೀರ್ ಭೇಟಿ ನೀಡಿ ಅಕ್ಕನ ಮನೆಯವರಿಗೆ ಸರ್ಪ್ರೈಸ್​​​​​​​​ ನೀಡಿದ್ದಾರೆ. ಈ ಸಮಯದಲ್ಲಿ ಪುನೀತ್, ತಮ್ಮ ಭಾವ ರಾಮ್​ಕುಮಾರ್ ಜೊತೆ ಚಿತ್ರರಂಗದ ವಿಚಾರವಾಗಿ ಸ್ವಲ್ಪ ಹೊತ್ತು ಚರ್ಚೆ ನಡೆಸಿದ್ದಾರೆ.

'ಶಿವ 143'

ಈಗಾಗಲೇ ಪೂರ್ಣಿಮಾ ಹಾಗೂ ರಾಮ್​​​​ಕುಮಾರ್ ಮಕ್ಕಳಾದ ಧೀರೆನ್ ರಾಮ್​​​​​​ಕುಮಾರ್ ಮತ್ತು ಧನ್ಯಾ ರಾಮ್​​​​​​ಕುಮಾರ್ ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ್ದಾರೆ. ಸದ್ಯ ಧೀರೆನ್ ರಾಮ್​​​ಕುಮಾರ್ ಅಭಿನಯದ 'ಶಿವ 143' ಸಿನಿಮಾ ರಿಲೀಸ್​​ಗೆ ರೆಡಿ ಇದೆ. ಈ ಬಗ್ಗೆ ರಾಮ್​​​​ಕುಮಾರ್​​​​​​​​​​​​​​, ಪುನೀತ್​​​​ ಅವರಿಗೆ ಪುತ್ರನ ಟೀಸರ್​​ ತೋರಿಸಿದ್ದಾರೆ. ಈ ಟೀಸರ್ ನೋಡಿದ ಪುನೀತ್,​ ಧೀರೆನ್ ಲುಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

'ಶಿವ 143'ಚಿತ್ರದ ಟೀಸರ್ ನೋಡುತ್ತಿರುವ ಪುನೀತ್
Last Updated : Aug 6, 2020, 3:46 PM IST

ABOUT THE AUTHOR

...view details