ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾ ಖಾತೆಯಲ್ಲಿರುವ ಬಹು ನೀರಿಕ್ಷಿತ ಚಿತ್ರ ಜೇಮ್ಸ್. ಭರ್ಜರಿ ಸಿನಿಮಾ ನಿರ್ದೇಶಕ ಚೇತನ್ ಕುಮಾರ್, ಇದೇ ಮೊದಲ ಬಾರಿಗೆ ಪವರ್ ಸ್ಟಾರ್ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿರುವ ಹೈವೋಲ್ಟೇಜ್ ಚಿತ್ರವಿದು. ಶೀರ್ಷಿಕೆಯಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಜೇಮ್ಸ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.
ಹಾಲಿವುಡ್ ಶೈಲಿಯಲ್ಲಿ ಜೇಮ್ಸ್ ಚಿತ್ರದ ಟೀಸರ್ ಮೂಡಿ ಬಂದಿದೆ. ಇದು ಗ್ಯಾಂಗ್ ಸ್ಟಾರ್ ಕಥೆಯನ್ನ ಒಳಗೊಂಡಿದೆ. ಅದ್ದೂರಿ ಮೇಕಿಂಗ್ ಜೇಮ್ಸ್ ಚಿತ್ರಕ್ಕಿದೆ. ಪವರ್ಸ್ಟಾರ್ ಎಂಟ್ರಿ ಅಂತು ಟೈಟಲ್‌ಗೆ ತಕ್ಕಂತೆ ಜೇಮ್ಸ್ ಪವರ್ ಫುಲ್ ಆಗಿದೆ. ಅಪ್ಪುಗೆ ಶಿವರಾಜ್ ಕುಮಾರ್ ಧ್ವನಿ ನೀಡಿದ್ದು ಮತ್ತಷ್ಟು ಕಿಕ್ ನೀಡುತ್ತೆ. ವಿಶೇಷ ಅಂದ್ರೇ ಟೀಸರ್ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಏಕ ಕಾಲದಲ್ಲಿ ರಿಲೀಸ್ ಆಗಿದೆ.
ಪುನೀತ್ ಸಿನಿಮಾದಲ್ಲಿ ಯುವರತ್ನ ಚಿತ್ರದಂತೆ ಈ ಚಿತ್ರದಲ್ಲೂ ಸಾಕಷ್ಟು ತಾರೆಯರ ಕಲರವ ಜೋರಾಗಿದೆ. ಈಗಾಗಲೇ ಶ್ರೀಕಾಂತ್ ಮೇಕಾ ಮತ್ತು ಮುಖೇಶ್ ರಿಷಿ, ಪ್ರಿಯಾ ಆನಂದ್ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಭರ್ಜರಿ ಹಾಗೂ ಭರಾಟೆ ಸಿನಿಮಾ ಬಳಿಕ ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಕಮರ್ಶಿಯಲ್ ಆ್ಯಕ್ಷನ್ ಜಾನರ್ ಸಿನಿಮಾ ಇದು.
ಓದಿ:ಹಿಜಾಬ್ ವಿವಾದ: ಸೂಕ್ತ ಸಂದರ್ಭದಲ್ಲಿ ಮಧ್ಯಪ್ರವೇಶಿಸುತ್ತೇವೆ, ತುರ್ತುವಿಚಾರಣೆ ನಿರಾಕರಿಸಿದ ಸುಪ್ರೀಂಕೋರ್ಟ್
ರಾಜಕುಮಾರ ಸಿನಿಮಾ ಆದ್ಮೇಲೆ ಪುನೀತ್ ರಾಜ್‍ಕುಮಾರ್ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸುತ್ತಿದ್ದಾರೆ. ವಿತರಕ ಕಿಶೋರ್ ಪತ್ತಿಕೊಂಡ ಮೊದಲ ಬಾರಿಗೆ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಸದ್ಯ ಜೇಮ್ಸ್ ಸಿನಿಮಾದ ಟೀಸರ್‌ನಲ್ಲಿ ಪವರ್ಸ್ಟಾರ್ ಕಾಣಿಸಿಕೊಂಡಿರುವ ಸ್ಟೈಲ್ಗೆ ಅಭಿಮಾನಿಗಳು ಫಿದಾ ಆಗಿದ್ದು, ಈ ಸಿನಿಮಾದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.