ಪಿಆರ್ಕೆ ಪ್ರೊಡಕ್ಷನ್ ಬ್ಯಾನರ್ ಅಡಿ ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಿಸಿರುವ 'ಕವಲು ದಾರಿ' ಸಿನಿಮಾ ಏಪ್ರಿಲ್ 12 ರಂದು ಬಿಡುಗಡೆಯಾಗುತ್ತಿದೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಾಗಿದ್ದು ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಬದಲಾಯ್ತು ಅಪ್ಪು ವಾಯ್ಸ್... ಮತ್ತೆ ಮತ್ತೆ ಕೇಳುವಂತಿದೆ ಪುನೀತ್ 'ಕವಲುದಾರಿ' ಹಾಡು
ತಮ್ಮದೇ ಬ್ಯಾನರ್ನ 'ಕವಲುದಾರಿ' ಸಿನಿಮಾಗಾಗಿ ಪುನೀತ್ ರಾಜ್ಕುಮಾರ್ ಹಾಡಿರುವ ಹಾಡನ್ನು ಅಭಿಮಾನಿಗಳು ಕೇಳಿ ಮೆಚ್ಚಿಕೊಂಡಿದ್ದಾರೆ. ಸಿನಿಮಾದ ಈ ಶೀರ್ಷಿಕೆ ಗೀತೆಯನ್ನು ಕಿರಣ್ ಕಾವೇರಪ್ಪ ರಚಿಸಿದ್ದು ಚರಣ್ ರಾಜ್ ಸಂಗೀತ ನೀಡಿದ್ಧಾರೆ. ಸಿನಿಮಾ ಇದೇ ತಿಂಗಳ 12 ರಂದು ಬಿಡುಗಡೆಯಾಗುತ್ತಿದೆ.ಟ
ಇನ್ನು ಈ ಸಿನಿಮಾದಲ್ಲಿ ಕೂಡಾ ಪುನೀತ್ ರಾಜ್ಕುಮಾರ್ ಹಾಡೊಂದನ್ನು ಹಾಡಿದ್ದು ಇದು ಪುನೀತ್ ಹಾಡಿರುವ ಇತರ ಸಿನಿಮಾ ಹಾಡುಗಳಿಗಿಂತ ಬಹಳ ಚೆನ್ನಾಗಿದೆ ಎಂದು ಸಾಕಷ್ಟು ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಜೀವವೇ ಕವಲುದಾರಿ ಮುಂದಿದೆ' ಎಂಬ ಸಾಲಿನಿಂದ ಆರಂಭವಾಗುವ ಈ ಹಾಡಿನ ಸಾಹಿತ್ಯವನ್ನು ಕಿರಣ್ ಕಾವೇರಪ್ಪ ರಚಿಸಿದ್ದಾರೆ. ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.
ಈ ಸಿನಿಮಾವನ್ನು ಹೇಮಂತ್ ಎಂ. ರಾವ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಹಿರಿಯ ನಟ ಅನಂತ್ನಾಗ್ ಹಾಗೂ 'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ರಿಶಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.