ಕರ್ನಾಟಕ

karnataka

ETV Bharat / sitara

ಚಾಲೆಂಜಿಂಗ್ ವರ್ಕೌಟ್​​​​​ ಮಾಡಲು ಬಹಳ ಇಷ್ಟ..ಪುನೀತ್ ರಾಜ್​​ಕುಮಾರ್​​​​​​​​​

ಸ್ಯಾಂಡಲ್​ವುಡ್ ನಟ ಪುನೀತ್ ರಾಜ್​ಕುಮಾರ್ ಅವರಿಗೆ ಚಾಲೆಂಜಿಂಗ್ ವರ್ಕೌಟ್ ಮಾಡುವುದು ಬಹಳ ಇಷ್ಟವಂತೆ. ಫ್ರೆಂಟ್ ಪ್ಲಿಫ್ ಹಾಗೂ ಬ್ಯಾಕ್ ಪ್ಲಿಫ್​​​​​ಗಳನ್ನು ಪುನೀತ್ ಬಹಳ ಸಲೀಸಾಗಿ ಮಾಡುತ್ತಾರೆ.

challenging workout
ಪುನೀತ್ ರಾಜ್​​ಕುಮಾರ್​​​​​​​​​

By

Published : Aug 5, 2020, 11:47 AM IST

ಕೊರೊನಾ ಭೀತಿ ಆರಂಭವಾದಾಗಿನಿಂದ ಪವರ್​​​​ಸ್ಟಾರ್​​​​ ಪುನೀತ್ ರಾಜ್​ಕುಮಾರ್ ಕಳೆದ 4-5 ತಿಂಗಳಿಂದ ಹೊರಗೆ ಹೋಗದೆ ಮನೆಯಲ್ಲಿ ಕುಟುಂಬದವರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಆದರೆ ಮನೆಯಲ್ಲಿ ಸುಮ್ಮನೆ ಕೂರದೆ ಪುನೀತ್ ಸಿನಿಮಾ ಸ್ಕ್ರಿಪ್ಟ್​​​​​​​​​​​​​​​ಗಳ ಬಗ್ಗೆ ಆತ್ಮೀಯರೊಂದಿಗೆ ಚರ್ಚೆ ನಡೆಸುತ್ತಾರೆ, ಸಿನಿಮಾಗಳನ್ನು ನೋಡುತ್ತಾರೆ.

ಪುನೀತ್ ರಾಜ್​​ಕುಮಾರ್ ಚಾಲೆಂಜಿಂಗ್ ವರ್ಕೌಟ್

ಪುನೀತ್ ಮನೆಯಲ್ಲಿ ಇದ್ದರೂ ವರ್ಕೌಟ್​​​​​ಗೆ ಬಹಳ ಆದ್ಯತೆ ನೀಡುತ್ತಾರೆ. ಈಗಾಗಲೇ ಪುನೀತ್ ವರ್ಕೌಟ್ ಮಾಡುತ್ತಿರುವ ಬಹಳಷ್ಟು ವಿಡಿಯೋಗಳು ವೈರಲ್ ಆಗಿವೆ. ಅಪ್ಪುವಿನ ಈ ವರ್ಕೌಟ್ ನೋಡಿ ಎಲ್ಲರೂ ಫಿದಾ ಆಗಿರುವುದುಂಟು. ಪವರ್​ ಸ್ಟಾರ್​​​ಗೆ ಚಾಲೆಂಜಿಂಗ್ ವರ್ಕೌಟ್​​​​ಗಳನ್ನು ಮಾಡುವುದು ಬಹಳ ಇಷ್ಟವಂತೆ. ಬಾಲ್ಯದಲ್ಲೇ ಕಳರಿಪಯಟ್ಟು ಹಾಗೂ ಜಿಮ್ನಾಸ್ಟಿಕ್ ಕಲಿತಿರುವ ಪುನೀತ್ ರಾಜ್​ಕುಮಾರ್ ಫ್ರೆಂಟ್ ಪ್ಲಿಫ್ ಹಾಗೂ ಬ್ಯಾಕ್ ಪ್ಲಿಫ್​​​​​ಗಳನ್ನು ನೀರು ಕುಡಿದ ರೀತಿ ಸಲೀಸಾಗಿ ಮಾಡುತ್ತಾರೆ.

ಪುನೀತ್ ರಾಜ್​ಕುಮಾರ್, ಶುಭಾಕರ್ ಶೆಟ್ಟಿ

ಪವರ್ ಸ್ಟಾರ್ ಪರ್ಸನಲ್ ಜಿಮ್ ಟ್ರೈನರ್ ಶುಭಾಕರ್ ಶೆಟ್ಟಿ ಹೇಳುವ ಪ್ರಕಾರ. ಪುನೀತ್ ರಾಜ್​ಕುಮಾರ್ ಚಿಕ್ಕ ವಯಸ್ಸಿನಿಂದಲೇ ಈ ರೀತಿಯ ಸ್ಟಂಟ್​​ಗಳನ್ನು ಮಾಡುತ್ತಿದ್ದರಂತೆ. ಇದೇ ರೀತಿಯ ಸುಮಾರು 10 ಬಗೆಯ ಚಾಲೆಂಜಿಂಗ್ ವರ್ಕೌಟ್​​ಗಳನ್ನು ಅವರು ಮಾಡುತ್ತಾರೆ. ಈ ರೀತಿ ಮಾಡುವುದರಿಂದ ದೇಹ ಫ್ಲೆಕ್ಸಿಬಲ್ ಆಗಿರುತ್ತದೆ ಹಾಗೂ ಆರೋಗ್ಯಕ್ಕೂ ಒಳ್ಳೆಯದು ಎನ್ನುತ್ತಾರೆ.

ಪುನೀತ್ ರಾಜ್​ಕುಮಾರ್

ಪುನೀತ್ ರಾಜ್‍ಕುಮಾರ್ ಅವರ ಈ ಚಾಲೆಂಜಿಂಗ್ ವರ್ಕೌಟ್​​​​ಗಳನ್ನು ನೋಡಿ ಡಾ. ರಾಜ್​​ಕುಮಾರ್ ಕೂಡಾ ಇಷ್ಟಪಟ್ಟಿದ್ದರಂತೆ. ಸದಾ ಫಿಟ್ ಹಾಗೂ ಆರೋಗ್ಯವಾಗಿರಬೇಕು ಎಂದು ಬಯಸುವ ಪುನೀತ್ ಈ ರೀತಿಯ ಚಾಲೆಂಜಿಂಗ್ ವರ್ಕೌಟ್​​​ಗಳನ್ನು ಪ್ರತಿನಿತ್ಯ ತಪ್ಪದೆ ಮಾಡುತ್ತಾರಂತೆ. ಒಟ್ಟಿನಲ್ಲಿ ಈ ವರ್ಕೌಟ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿರುವುದಂತೂ ನಿಜ.

ABOUT THE AUTHOR

...view details