ಕರ್ನಾಟಕ

karnataka

ETV Bharat / sitara

'ಯುವರತ್ನ' ಸ್ಪೇನ್ ಚಿತ್ರೀಕರಣ ಕ್ಯಾನ್ಸಲ್ ಆಗಲು ಪುನೀತ್​​ಗೆ ಇದ್ದ ಆ ಅಭ್ಯಾಸವೇ ಕಾರಣವಂತೆ.. - ನಟ ಪುನೀತ್​ ರಾಜ್​ಕುಮಾರ್​ ನಿಧನ

ನನಗೆ ಇದು ಚಿಕ್ಕಂದಿನಿಂದ ಅಭ್ಯಾಸ ಆಗಿ ಹೋಗಿದೆ. ಒಂದು ವೇಳೆ ನಾನು ವಿದೇಶಕ್ಕೆ ಶೂಟಿಂಗ್ ಹೋಗಿ ಬೆಳಗ್ಗೆ ನಾನು ಸೀನುವುದನ್ನು ಅಲ್ಲಿ ಯಾರಾದರೂ ನೋಡಿ ನನ್ನನ್ನು ಕ್ವಾರಂಟೈನ್​​ಗೆ ಎಳೆದೊಯ್ದರೆ ಕಷ್ಟ ಎಂದು ಭಯಪಟ್ಟು, ವಿದೇಶಕ್ಕೆ ಹೋಗುವ ಸಹವಾಸವೇ ಬೇಡ ಎಂದು ಶೂಟಿಂಗ್ ಕ್ಯಾನ್ಸಲ್ ಮಾಡಿದ ವಿಚಾರವನ್ನು ಪುನೀತ್ ಹೇಳಿಕೊಂಡಿದ್ದರು..

puneet-rajkumar-revealed-the-reason-for-yuvaratna-spain-shoot-cancel
ಪುನೀತ್ ರಾಜ್​ಕುಮಾರ್

By

Published : Oct 29, 2021, 6:15 PM IST

ನಟ ಪುನೀತ್​​​​ ರಾಜ್​ಕುಮಾರ್​ ನಿಧನರಾದರೂ ಸಹ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ಅವರು ಸದಾ ಅಮರ. ಅವರ ನೆನೆಪುಗಳು ಚಿರಕಾಲ ಮರುಕಳಿಸುತ್ತಲೇ ಇರುತ್ತವೆ.

ಇತ್ತೀಚಿಗೆ ಖಾಸಗಿ ವಾಹಿನಿಯೊಂದರಲ್ಲಿ ಸೃಜನ್​ ಲೋಕೇಶ್​ ನಡೆಸಿಕೊಡುವ ಮಜಾ ವಿತ್​ ಸೃಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಪ್ಪು ಇಂಟ್ರಸ್ಟಿಂಗ್​ ವಿಚಾರವೊಂದನ್ನ ಹಂಚಿಕೊಂಡಿದ್ದರು.

ಈ ಹಿಂದೆ ಹಾಡುಗಳ ಚಿತ್ರೀಕರಣಕ್ಕಾಗಿ 'ಯುವರತ್ನ' ಚಿತ್ರತಂಡ ಸ್ಪೇನ್​​​​ಗೆ ತೆರಳಲು ನಿರ್ಧರಿಸಿತ್ತು. ಆದರೆ, ಅಷ್ಟರಲ್ಲಾಗಲೇ ಕೊರೊನಾ ಭೀತಿ​​ ಆರಂಭವಾಗಿತ್ತು. ಈ ನಡುವೆಯೂ ಪುನೀತ್ ರಾಜ್​ಕುಮಾರ್ ಸ್ಪೇನ್​​​ಗೆ ಹೋಗಲು ರೆಡಿ ಇದ್ದರಂತೆ. ಆದರೆ, ಒಂದೇ ಒಂದು ಕಾರಣದಿಂದ ಫಾರಿನ್ ಟ್ರಿಪ್ ಕ್ಯಾನ್ಸಲ್ ಮಾಡಿದ್ರಂತೆ ಪುನೀತ್.

'ಆಗಿನ್ನೂ ಒಂದೊಂದಾಗಿ ಕೊರೊನಾ ಪ್ರಕರಣಗಳು ಕೇಳಿ ಬರುತ್ತಿದ್ದವು. ಎಲ್ಲಾ ಮುಂಜಾಗ್ರತೆ ವಹಿಸಿಕೊಂಡು ಸ್ಪೇನ್​​ಗೆ ಹೋಗಿ ಶೂಟಿಂಗ್ ಮಾಡಿ ಬರೋಣ ಅಂತಾ ನಾನೇ ಚಿತ್ರತಂಡಕ್ಕೆ ಹೇಳಿದ್ದೆ. ಈ ವಿಚಾರವಾಗಿ ಪತ್ನಿ ಅಶ್ವಿನಿಗೂ ತಿಳಿಸಿದ್ದೆ.

ಆದರೆ, ಸೀನುವುದು, ಕೆಮ್ಮುವುದು, ನೆಗಡಿ ಎಲ್ಲಾ ಕೊರೊನಾ ಲಕ್ಷಣ ಎಂಬ ಮಾಹಿತಿ ನನಗೆ ದೊರೆಯಿತು. ಆ ಸಮಯದಲ್ಲಿ ಯಾರಾದರೂ ಸೀನಿದರೆ, ಕೆಮ್ಮಿದರೆ ಅಂತವರನ್ನು ಕ್ವಾರಂಟೈನ್​​ನಲ್ಲಿ ಇರಿಸುತ್ತಿದ್ದಾರೆ ಎಂಬ ವಿಚಾರ ಕೂಡ ತಿಳಿದು ಬಂತು. ನನಗೆ ಭಯ ಶುರುವಾಗಿದ್ದು ಅಲ್ಲೇ.

ನಾನು ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ 10 ಬಾರಿಯಾದರೂ ಸೀನುತ್ತೇನೆ. ನನಗೆ ಇದು ಚಿಕ್ಕಂದಿನಿಂದ ಅಭ್ಯಾಸ ಆಗಿ ಹೋಗಿದೆ. ಒಂದು ವೇಳೆ ನಾನು ವಿದೇಶಕ್ಕೆ ಶೂಟಿಂಗ್ ಹೋಗಿ ಬೆಳಗ್ಗೆ ನಾನು ಸೀನುವುದನ್ನು ಅಲ್ಲಿ ಯಾರಾದರೂ ನೋಡಿ ನನ್ನನ್ನು ಕ್ವಾರಂಟೈನ್​​ಗೆ ಎಳೆದೊಯ್ದರೆ ಕಷ್ಟ ಎಂದು ಭಯಪಟ್ಟು, ವಿದೇಶಕ್ಕೆ ಹೋಗುವ ಸಹವಾಸವೇ ಬೇಡ ಎಂದು ಶೂಟಿಂಗ್ ಕ್ಯಾನ್ಸಲ್ ಮಾಡಿದ ವಿಚಾರವನ್ನು ಪುನೀತ್ ಹೇಳಿಕೊಂಡಿದ್ದರು.

ಹೊಂಬಾಳೆ ಫಿಲ್ಮ್ಸ್​​ ಅವರು ನಿರ್ಮಾಣದಲ್ಲಿ ಮೂಡಿ ಬಂದ 'ಯುವರತ್ನ' ಈಗಾಗಲೇ ಕನ್ನಡಿಗರ ಮನ ಗೆದ್ದು, ಯಶಸ್ವಿ ಪ್ರದರ್ಶನ ಕಂಡಿದೆ. ಆದ್ರೆ, ಇಂದು ಅಪಾರ ಅಭಿಮಾನಿಗಳಿಂದ ದೈಹಿಕವಾಗಿ ಅಪ್ಪು ಮರೆಯಾಗಿದ್ದಾರೆ ಅಷ್ಟೇ.. ಆದ್ರೆ, ಅವರ ನೆನಪಿನ ಬುತ್ತಿ ಎಂದೂ ಬರಿದಾಗದು.

ABOUT THE AUTHOR

...view details